Prethiya maunadha yathre lyrics ( ಕನ್ನಡ ) – Arfaz ullal – Super cine lyrics

Preetiya Maunadha yathre – Arfaz ullal Lyrics

Singer Arfaz ullal

About the song

▪ SONG : PRETHIYA MAUNADHA YATHRE
▪ SINGER : ARFAZ ULLAL
▪ LYRICS : JUNAID BELTHANGADY

PREETIYA MAUNADHA YATHRE LYRICS

ಪ್ರೀತಿಯಾ ಮೌನದಯಾತ್ರೆ
ಅವಳಿಗೇ ಮದುವೆಯ ಜಾತ್ರೆ
ಆ ಮನಸು ಯಾರದೊ ಹೆಸರಲಿ
ನಶೆಯ ತುಂಬಿ ಹಾರಾಡುತಿದೇ
ಬಡವನ ಪ್ರೀತಿಗೆ ಇಂದೂ
ಬೆಲೆಯ ಕಟ್ಟಿ ತೂಗಿಸುತಲಿದೇ

ಕಣ್ಣೀರಿಗೇ ಬೆಲೆ ಇಲ್ಲಾ
ನಿಜ ಪ್ರೀತಿ ಸಾಯೋದಲ್ಲ
ನನ್ನಯಾ ಯಾತನೆ ಕಾಣದ
ನಿನಗೆ ನಿಜ ಪ್ರೀತಿ ಅರಿತಿಲ್ಲ
ಹಾಳಾದ ವಿಧಿ ಬರಹ
ನಗುವನು ನನಗೆ ಬರೆದಿಲ್ಲ

ಪ್ರೀತಿಯಾ ಮೌನದಯಾತ್ರೆ
ಅವಳಿಗೇ ಮದುವೆಯ ಜಾತ್ರೆ
ಆ ಮನಸು ಯಾರದೊ ಹೆಸರಲಿ
ನಶೆಯ ತು೦ಬಿ ಹಾರಾಡುತಿದೇ
ಬಡವನ ಪ್ರೀತಿಗೆ ಇಂದೂ
ಬೆಲೆಯ ಕಟ್ಟಿ ತೂಗಿಸುತಲಿದೇ

ಜೊತೆ ಜೊತೆಗೇನೆ ಕಳೆದ ಜೀವನ
ನಾಟಕವ ಏನೋ ,
ನಿನ್ನನು ನಂಬಿ ನನ್ನಯ ಯೌವ್ವನ
ನೀರಿಲ್ಲದ ಮೀನು,
ಯಾರನು ದೂರಲಿ,ಯಾರನು ಹೊಗಳಲಿ
ಒಂದು ಅರಿಯಲ್ಲಾ,
ಅನುಮಾನದ ಮಾರುತ ನನ್ನಯ ಮೋಹವ
ಕೊಂದಿತು ಅಲ್ಲಾ,

ನಾನು ಇರದೆ ನಿನ್ನ ಪಯಣ
ಸುಖವಾಗಿ ನಡೆಯುವುದಾದರೆ
ಇನ್ನು ಮು೦ದೆ ಇಂದು ನಾನು
ನಿನನು ನೋಯಿಸಲಾರೆ
ಕಣ್ಣು ತುಂಬಿ ಪ್ರಾರ್ಥಿಸುವೆನು
ದೇವನೇ ಹಾರೈಸವಳನು
ಕೈಯ್ಯ ಚಾಚಿ ಬೇಡಿರುವೆನು
ಮನ್ನಿಸು ಮುಗ್ದ ಮನಸ್ಸನು

ಪ್ರೀತಿಯಾ ಮೌನದಯಾತ್ರೆ
ಅವಳಿಗೇ ಮದುವೆಯ ಜಾತ್ರೆ
ಆ ಮನಸು ಯಾರದೊ ಹೆಸರಲಿ
ನಶೆಯ ತುಂಬಿ ಹಾರಾಡುತಿದೇ
ಬಡವನ ಪ್ರೀತಿಗೆ ಇಂದೂ
ಬೆಲೆಯ ಕಟ್ಟಿ ತೂಗಿಸುತಲಿದೇ

ನಿನ್ನಯ ಜಾಗವ ತುಂಬಲು ಇಂದೂ
ಯಾರಿಗು ಆಗೋಲ್ಲಾ,
ನಿನ್ನಯ ಅಂದವ ನೋಡೀ ನಾನು
ಪ್ರೀತಿಸಿದವನಲ್ಲಾ..
ನನ್ನಲಿ ಇರುವ ಪ್ರೀತಿಯ ಮುಂದೇ
ಹಣ ಲೆಕ್ಕಕ್ಕಿಲ್ಲಾ..
ಬೆಲೆ ಕಟ್ಟುವ ಪ್ರೀತಿಯ ನಾನೆಂದೂ
ನನಗೇ ನೀಡಿಲ್ಲಾ..

ಬಡವ ನಾನು ಒಪ್ಪಲೇನು
ಅದರಲಿ ನನ್ನಯ ತಪ್ಪೇನು
ಬರೆದ ಬ್ರಹ್ಮ ಕೊಟ್ಟ ಜನುಮಾ
ಇದರಲೀ ನಮ್ಮಯ ಪಾಲೇನು
ನಾಲ್ಕು ದಿನದಾ ಬಾಳಿನಲ್ಲೀ
ಹಣದ ಹಿಂದೇ ನೀನಿಲ್ಲಿ
ಮಣ್ಣಿಗಿಡುವ ಸಮಯದಲ್ಲಿ
ನಿನ್ನನಿನ್ನಯ ಸಿರಿತನವೇನಿಲ್ಲಿ

ಪ್ರೀತಿಯಾ ಮೌನದಯಾತ್ರೆ
ಅವಳಿಗೇ ಮದುವೆಯ ಜಾತ್ರೆ
ಆ ಮನಸು ಯಾರದೊ ಹೆಸರಲಿ
ನಶೆಯ ತುಂಬಿ ಹಾರಾಡುತಿದೇ
ಬಡವನ ಪ್ರೀತಿಗೆ ಇಂದೂ
ಬೆಲೆಯ ಕಟ್ಟಿ ತೂಗಿಸುತಲಿದೇ
ಕಣ್ಣೀರಿಗೇ ಬೆಲೆ ಇಲ್ಲಾ
ನಿಜ ಪ್ರೀತಿ ಸಾಯೋದಲ್ಲ
ನನ್ನಯಾ ಯಾತನೆ ಕಾಣದ
ನಿನಗೆ ನಿಜ ಪ್ರೀತಿ ಅರಿತಿಲ್ಲ
ಹಾಳಾದ ವಿಧಿ ಬರಹ
ನಗುವನು ನನಗೆ ಬರೆದಿಲ್ಲ||೨||

Leave a Comment

Contact Us