Preethige Avamaana – Arfaz Ullal Lyrics
Singer | Arfaz Ullal |
🔹 About the song 🔹
▪Album : Preethige Avamaana
▪Singer : Arfaz Ullal
▪Lyrics : Junaid Belthangady
▪️Producer : Toufeeq Hosanagar
▪Recordings : Kings Audio Station Kannur
▪Mixing & Mastering : Yusuf Kannur
▪Edit & Efx : Bharath Gowda
🔹 Lyrics 🔹
ಕಾಣುವ ಕನಸು ಒಂದು
ಜೀವನದ ಆಟ ಇನ್ನೊಂದು
ಸಿಗದ ಆ ಪ್ರೀತಿ ಇಂದು
ಕೊಲ್ಲುತಿದೆ ನನ್ನನ್ನು ಇಂದು
ಕೈ ಮುಗಿದು ಬೇಡುವೆನು
ಕ್ಷಮಿಸುವೆಯ ನನ್ನನ್ನು
ನಿನ್ನನ್ನು ವರಿಸುವೆ ಎಂದು
ಮೋಸವ ಮಾಡಿದನು…….
ಕಾಣುವ ಕನಸು ಒಂದು
ಜೀವನದ ಆಟ ಇನ್ನೊಂದು
ಸಿಗದ ಆ ಪ್ರೀತಿ ಇಂದು
ಕೊಲ್ಲುತಿದೆ ನನ್ನನ್ನು ಇಂದು
ಅವಳ ಕಣ್ಣೀರು ಇಂದು
ನನ್ನನ್ನು ಕೊಲ್ಲುವುದೇನೊ
ನನ್ನಯ ಮನೆಯವರ ಮಾತ
ಕೇಳಿ ಪ್ರೀತಿ ಬಲಿ ಇನ್ನು
ಸಾವಿರ ಸುಳ್ಳನ್ನು
ಹೇಳಿದೆನು ಅವಳ ಬಳಿ
ಹೆಣ್ಣಿನ ಮನಸಲ್ಲಿ
ಆಸೆಗಳ ಜೋಕಾಲಿ……
ಕೇಳಿದಳು ಅವಳು ಅಂದು
ನಿನ್ನವರು ಒಪ್ಪುವರೆಂದು?
ಹೇಳಿದೆನು ಅವಳಿಗೆ ನಾನು
ನಿನ್ನವರು ಒಪ್ಪಲಿ ಎಂದು!!
ಸಾಗಿಹಳು ಅವಳು ಇಂದು
ಮತ್ತೊರ್ವನ ಕೈ ಹಿಡಿದು
ಅನ್ಯಾಯ ಮಾಡಿಯೆನು ನಾನು
ಮದುವೆಯ ಆಗುವೆ ಎಂದು
ಯಾರ್ಯಾರ ಓತ್ತಾಯದಲಿ
ಈ ಪ್ರೀತಿ ನಡುಬೀದಿಯಲಿ
ಅವರ ಮನೆಯವರೆದುರಲ್ಲಿ
ಅಪರಾಧಿ ನಾನಿಲ್ಲಿ…….
ಕೇಳಿದಳು ಅವಳು ಅಂದು
ನಿನ್ನವರು ಒಪ್ಪುವರೆಂದು?
ಹೇಳಿದೆನು ಅವಳಿಗೆ ನಾನು
ನಿನ್ನವರುಒಪ್ಪಲಿಯೆಂದು!!
ಕೈ ಮುಗಿದು ಬೇಡುವೆನು
ಕ್ಷಮಿಸುವೆಯ ನನ್ನನ್ನು
ನಿನ್ನನ್ನು ವರಿಸುವೆ ಎಂದು
ಮೋಸವ ಮಾಡಿದೆನು….
ಕಾಣುವ ಕನಸು ಒಂದು
ಜೀವನದ ಆಟ ಇನ್ನೊಂದು
ಸಿಗದ ಆ ಪ್ರೀತಿ ಇಂದು
ಕೊಲ್ಲುತಿದೆ ನನ್ನನ್ನು ಇಂದು.
🔹🔹🔹🔹🔹🔹