Onde ondu kanna bindu song details
- Song : Onde ondu kanna bindu
- Singer : S P Balasubrahmanyam
- Lyrics : Hamsalekha
- Movie : Belli kalungara
- Music : Hamsalekha
Onde ondu kanna bindu lyrics in kannada
ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ
ರಾತ್ರಿಯ ಬೆನ್ನಿಗೆ,ಬೆಳ್ಳನೆ ಹಗಲು,
ಚಿಂತೆಯ ಹಿಂದೆಯೇ ಸಂತಸ ಇರಲು
ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ಚಿಂತೆಯಲ್ಲೇ ನಿನ್ನಾ ಮನ ದೂಡಿದರೆ ನಿನ್ನಾಣೆ
ನೋವಿನ ಬಾಳಿಗೆ,ಧ್ಯರ್ಯವೇ ಗೆಳೆಯಾ,
ಪ್ರೇಮದ ಜೋಡಿಗೆ,ತಾಕದು ಪ್ರಳಯಾ
ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ
ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ,
ಸುಟ್ಟು ಹಾಕೋ ಬೆಂಕಿಯೇ ತನ್ನ ತಾನೇ ಸುಟ್ಟರೆ,
ದಾರಿ ತೋರೋ ನಾಯಕ ಒಂಟಿ ಎಂದು ಕೊಂಡರೆ,
ಧ್ಯರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ,
ಸೂರ್ಯನಿಲ್ಲ ಪೂರ್ವದಲ್ಲಿ,ಚಂದ್ರನಿಲ್ಲ ರಾತ್ರಿಯಲಿ,
ದಾರಿಯಿಲ್ಲ ಕಾಡಿನಲ್ಲಿ,ಆಸೆಯಿಲ್ಲ ಬಾಳಿನಲಿ,
ನಂಬಿಕೆ ತಾಳುವ,ಅಂಜಿಕೆ ನೀಗುವಾ,
ಶೋಧನೆ ಸಮಯ,ಚಿಂತಿಸಿ ಗೆಲ್ಲುವಾ,
ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ
ಮೂಡಣದಿ ಮೂಡಿ ಬಾ, ಸಿಂದೂರವೇ ಆಗಿ ಬಾ,
ಜೀವಧಾರೆ ಆಗಿ ಬಾ, ಪ್ರೇಮ ಪುಷ್ಪ ಸೇರು ಬಾ,
ಬಾನಗಳ ತುಂಬಿ ಬಾ, ಆಸೆಗಳ ತುಂಬು ಬಾ,
ಸಿಂಗಾರವೇ ತೇಲಿ ಬಾ, ಸಂತೋಷವಾ ನೀಡು ಬಾ,
ಪ್ರೇಮದಾಸೆ ನನ್ನಾ ನಿನ್ನಾ ಬಂದಿಸಿದೆ ನನ್ನಾಣೆ,
ಸಂತಸದ ಕಣ್ಣಾ ರೆಪ್ಪೆ ಸಂದಿಸಿದೆ ನನ್ನಾಣೆ,
ದೇವರ ಗೂಡಿಗೂ ಬಿನ್ನಗಳಿರಲು,
ಬಾಳಿನ ನಡೆಗೂ ಅಡ್ಡಿಗಳಿರಲು,
ಭೂಮಿಯಾಗಿ ನಾನಿರುವೆ, ಚಿಂತೆ ಬೇಡ ನನ್ನಾಣೆ,
ನಿನ್ನಾ ನೋವ ಮೇರುಗಿರಿಯ, ನಾ ಹೊರುವೆ ನಿನ್ನಾಣೆ
ನೋವಿನ ಬಾಳಿಗೆ,ಧ್ಯರ್ಯವೇ ಗೆಳೆಯಾ,
ಪ್ರೇಮದ ಜೋಡಿಗೆ,ತಾಕದು ಪ್ರಳಯಾ
ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ