Oh jeeva lyrics ( ಕನ್ನಡ ) – Ramarjuna

Oh jeeva song details

  • Song : Oh jeeva
  • Singer : Vijay Prakash
  • Lyrics : Dr. V Nagendra prasad
  • Movie : Ramarjuna
  • Music : Anand Rajavikram

Oh jeeva lyrics in Kannada

ಓ ಜೀವ ಲಿರಿಕ್ಸ್

ನೆನಪಿನಲಿ ಅಳುತಿದೆ ಹೃದಯ
ಹೊರಟಿರುವೆ ನಿನಗಿದು ಸರಿಯಾ?
ಮರೆಯಾಗಿ ಹೋದೆ ಧೃವತಾರೆಯಾದೆ
ವಿಧಿಯಾಟ ಹೀಗೇಕೆ ಹೇಳು…

ಕದಡೋಯ್ತು ನಿನ್ನ ಬದುಕೆಂಬ ಬಣ್ಣ
ಮುಗಿಯೋದು ಹೀಗೇಕೆ ಬಾಳು
ಓ ಜೀವ…. ನನ್ನ ಜೀವ..
ಮಗುವಂತೆ.. ನಿದ್ರೆ ಏಕೆ?

ಓ… ಕಾಲವೇ ಮುಸುಗಲಿ ನಗುವೆ
ಬಡಜೀವ ದಯಮಾಡಿ ಬಿಡಬಾರದೆ
ಓ… ಶೂಲವೇ ಮರೆಯಲಿ ಇರುವೆ
ಎದೆಗೊತ್ತು ನನ್ನ ಮುಂದೆ ಬರಬಾರದೆ
ಜನನ ಮರಣ ಸಹಜವೆ ಜಗದಲ್ಲಿ
ಸರಿಯೆ ಎನುತ ಕೊರಗಿದೆ ಒಗಟಲ್ಲಿ..

ಹಳೆಮಾತಿಗೊಂದು ಒಳಕೋಪ ಬಂದು
ಅವಮಾನ ಮಾಡೋರು ನಾವು
ಹೊಸಮಾತು ತಂದು ಮೇಲೇಳು ಎಂದು
ಬಹುಮಾನ ನೀಡೋರು ನಾವು
ಓ ಜೀವ…. ನನ್ನ ಜೀವ…
ಮಗುವಂತೆ..ನಿದಿರೆ ಏಕೆ?

ಹುಟ್ಟಲೇ ಬೇಕು ಸತ್ತಿರೊ ಜೀವ
ಸೃಷ್ಟಿಯ ನೀತಿ ಹೀಗೇನೆ
ಹೋಗಿ ಬಾರೊ ಸ್ವರ್ಗವ ಸೇರೊ
ಶಿವನೆ ಮರುಜನ್ಮ ಕೊಡುತಾನೆ

ನೆನಪಿನಲಿ ಅಳುತಿದೆ ಹೃದಯ
ಹೊರಟಿರುವೆ ನಿನಗಿದು ಸರಿಯಾ?
ಮರೆಯಾಗಿ ಹೋದೆ ದೃವತಾರೆಯಾದೆ
ವಿಧಿಯಾಟ ಹೀಗೇಕೆ ಹೇಳು..

ಕದಡೋಯ್ತು ನಿನ್ನ ಬದುಕೆಂಬ ಬಣ್ಣ
ಮುಗಿಯೋದು ಹೀಗೇಕೆ ಬಾಳು
ಓ ಜೀವ… ನನ್ನ ಜೀವ..
ಮಗುವಂತೆ.. ನಿದಿರೆ ಏಕೆ…?

Oh jeeva song video :

Leave a Comment

Contact Us