Oh henne song details
- Song : Oh henne
- Singer : Venu Srirangam
- Lyrics : Kadali
- Movie : Aani muthugalu
- Music : Suresh Bobbili
- Label : Anand audio
Oh henne lyrics in kannada
ಓ ಹೆಣ್ಣೆ ಸಾಂಗ್ ಲಿರಿಕ್ಸ್
ಭುವಿಯಲಿ ನೋಡಿದೆ ನಾ
ಚಂದಮಾಮನ
ಆ ತಾರೆ ಹೊಳಪನಾ
ಒಂದು ಮಾತೆ ಬರದ
ಹೃದಯದಲ್ಲಿ ಕವಿತೆ ಕಂಡೆ ನಾ
ನವಕ್ಷೀರಪತದಿ ನಾ
ಇಂದು ಮೌನವಿಲ್ಲಿ ಕತೆಯಾ ಹೇಳು ಪರಿಯ ಕಂಡೆ ನಾ
ಪ್ರಾಣವೆ ತನ್ನ ಜಾಡನೆ
ಹುಡುಕಿ ನಲಿಯುವಂತಿದೆ
ಪ್ರಾಯವೆ ಸಂಗಾತಿಗೆ
ಮನವಿ ನೀಡಿದೆ
ಗಾನವೆ ತನ್ನ ನೋಟವ
ಕಿವಿಯ ಒಳಗೆ ಮೊಳಗಿದೆ
ಆ ಗುರಿಯೆ ತನ್ನ ನೆರಳಾಗಿ ನಡಿಗೆ ಸಾಗಿದೆ
ಓ ಹೆಣ್ಣೇ ನಿನ್ನಿಂದೆ ನನ್ನ
ಮನಸನರಿತೆನು
ಪರಿಪರಿಯ ಕತೆಯನು
ಮನ ತಿಳಿಸಲಾರದಂತ ನುಡಿಯ ಪತ್ರ ಬರೆದೆನು
ನಾನು ನಿನ್ನ ಸೇರಿದೆನು
ಸಂತಸ ನಮ್ಮದೆಂದನು ಇರುವೆನು ಜೊತೆಯಲ್ಲೆ ನಾನು
ಭುವಿಯಲಿ ನೋಡಿದೆ ನಾ
ಚಂದಮಾಮನ
ಆ ತಾರೆ ಹೊಳಪನಾ
ಒಂದು ಮಾತೆ ಬರದ
ಹೃದಯದಲ್ಲಿ ಕವಿತೆ ಕಂಡೆ ನಾ
ಕೇಳುವ ಹಾಡಿದು ಸಾಲದು ಎನ್ನುತ ನನ್ನ ಕಾಡಿಸುವ ತಮಾಷೆ ಏತಕೆ
ಮನಸಿನ ಮಾತನ್ನು ಹೇಳಲು ಬಾರದು
ನಿಜ ನುಡಿಯುವೆನು ವಿನೋದವಲ್ಲವೆ
ಲೋಕವು ನನಗಿನ್ನು ನಿನ್ನ ನೋಟದಲ್ಲೆ ತುಂಬಿದೆ
ಈ ಪರಿಯ ನಿನಗಿಂದು
ನಾ ಹೇಗೆ ಹೇಳಲಿ?
ನನ್ನ ತಳಮಳವ ನಿನ್ನ ಮನಸಿಗಿಂದು ತಿಳಿಸಲೆಂದು ಪಾಪ ಭುವಿ ಕೂಡ ನಿನ್ನ ಕೇಳಿದೆ
ಓ ಹೆಣ್ಣೇ ನಿನ್ನಿಂದೆ ನನ್ನ
ಮನಸನರಿತೆನು
ಪರಿಪರಿಯ ಕತೆಯನು
ಮನ ತಿಳಿಸಲಾರದಂತ ನುಡಿಯ ಪತ್ರ ಬರೆದೆನು
ನಾನು ನಿನ್ನ ಸೇರಿದೆನು
ಸಂತಸ ನಮ್ಮದೆಂದನು ಇರುವೆನು ಜೊತೆಯಲ್ಲೆ ನಾನು
ಭುವಿಯಲಿ ನೋಡಿದೆ ನಾ
ಚಂದಮಾಮನ
ಆ ತಾರೆ ಹೊಳಪನಾ
ಒಂದು ಮಾತೆ ಬರದ
ಹೃದಯದಲ್ಲಿ ಕವಿತೆ ಕಂಡೆ ನಾ
ಭುವಿಗಿಳಿದಂತ ಹುಣ್ಣಿಮೆಯನ್ನು ಕಂಡೆ ನಾ
ನವಕ್ಷೀರಪತದಿ ನಾ
ಇಂದು ಮೌನವಿಲ್ಲಿ ಕತೆಯ ಹೇಳೊ ಪರಿಯ ಕಂಡೆ ನಾ