Obbane song details
- Song : Obbane
- Singer : Rahul dit-o
- Lyrics : Rahul dit-o
- Music : Rahul dit-o
Obbane lyrics in kannada
ಬಂದಿದ್ದು ಒಬ್ಬನೇ
ಹೋಗೋದು ಕೂಡ ನೀ ಒಬ್ಬನೇ
ಅವ್ನು ಇವ್ನು ಬರ್ತಾನೆ ಕೆಲಸ ಆಗೋ ವರೆಗು ಇರ್ತಾನೆ
ಕಚಡ ವರ್ತನೆ ಮಾಡಿಕೊಳ್ಳೋದು ಸಮರ್ತನೆ
ಮನಸ್ಸಿನ ಯಾತನೆ ಬಿಟ್ಟಾಕಿ ನೀ ಮಾಡು ಪ್ರಾರ್ಥನೆ
ಯಾರಿಗೆ ಯಾರಿಲ್ಲ ಯರುನು ಬರಲ್ಲ
ಎಲ್ ನೋಡುದ್ರು ಒಬ್ರು ಕಂಡ್ರೆ ಒಬ್ರಿಗೆ ಆಗಲ್ಲ
ನನಗೆ ನೀನಿಲ್ಲ ನಿನಗೆ ಅವನಿಲ್ಲ
ನಿಯತ್ತೆ ಹೇಳುತ್ತೆ ನಿಯತ್ತಾಗಿ ಯಾಕಿಲ್ಲ?
ಬಂದ್ ಹೋಗೋರ ಲಿಸ್ಟ್ ನೋಡಿ ನಂಗನ್ನ್ಸಿದ್ ಇಷ್ಟೇ
ಫ್ರೆಂಡ್ಶಿಪ್ ಅಲ್ಲಿ ಎಲ್ಲರಿಗಿರಲ್ಲ ನಿಷ್ಠೆ
ಬಂದು ಬಳಗ ಎಲ್ಲ ಪ್ರತಿಷ್ಟೆಗೆ ಅಷ್ಟೇ
ನನ್ ಪೇರೆಂಟ್ಸ್ ನನಗಿದು ಹೇಳಿದ್ರು ಫರ್ಷ್ಟೇ
ಯವನ್ನು ನಂಬೇಡ ಯಾರನ್ನು ನಂಬೇಡ
ತಂದೆ ತಾಯಿ ಇಷ್ಟ ಪಡೋರನ್ನ ಬಿಟ್ಟು
ಯವನ್ಗು ಬಿಡಬೇಡ ಯವನ್ಗು ಬಿಡಬೇಡ
ತಲೆ ಮೇಲೆ ಕೂತ್ಕೊಳಕ್ಕೆ ಲೀನಿಯನ್ಸ್ ಕೊಟ್ಟು
ಯಾವ್ದುಕ್ಕು ಸೋಲಬೇಡ ಯಾವ್ದುಕ್ಕು ಬೀಳಬೇಡ
ಗೆದ್ದೇ ಗೆಲ್ತೀನಿ ಅಂತ ಗುರಿನ ಮುಟ್ಟು
ಯವನ್ಗು ಕಾಯಬೇಡ ಯಾವಳ್ಗು ಸಾಯಬೇಡ
ನಿನಗೋಸ್ಕರ ನೀ ಬದ್ಕೊದೆ ಕರೆಕ್ಟು
ಕಾಸಿದ್ದಾಗ ಜನ ಇರ್ತಾರೆ ಜೊತೆ
ಕಷ್ಟ ಬಂದಾಗಲೇ ಎಲ್ಲರು ನಾಪತ್ತೆ
ಯಾರು ಇಲ್ಲದಾಗ ಯಾರಿಲ್ಲ ಅನ್ಸುತ್ತೆ
ಎಲ್ರು ಇದ್ದಾಗ ಅನ್ಸ್ತು ಬದ್ಕಿದ್ದು ಸತ್ತೆ
ಬಂದಿದ್ದು ಒಬ್ಬನೇ
ಹೋಗೋದು ಕೂಡ ನೀ ಒಬ್ಬನೇ
ಅವ್ನು ಇವ್ನು ಬರ್ತಾನೆ ಕೆಲಸ ಆಗೋ ವರೆಗು ಇರ್ತಾನೆ
ಕಚಡ ವರ್ತನೆ ಮಾಡಿಕೊಳ್ಳೋದು ಸಮರ್ತನೆ
ಮನಸ್ಸಿನ ಯಾತನೆ ಬಿಟ್ಟಾಕಿ ನೀ ಮಾಡು ಪ್ರಾರ್ಥನೆ
ಕೊನೆ ವರ್ಗು ಇರ್ತೀನಿ ಅನ್ದೊರೆ ಇಲ್ಲ
ಇದ್ದಾಗ ಮುಖವಾಡ ಗೊತ್ತಾಗಲ್ಲ
ಬಿದ್ದಾಗ ಯಾರು ಮೇಲೆ ಎತ್ತೋದಿಲ್ಲ
ಅಂತೋರು ಹೋದ್ರೆ ಕೇರ್ ಮಾಡಬೇಕಾಗಿಲ್ಲ
ಲೈಫ್ ಅಲ್ಲಿ ಡಬಲ್ ಗೇಮ್ ಆಡೋರೆಲ್ಲ
ನಂಗೆ ಆಟಕುಂಟು ಲೆಕ್ಕಕ್ಕೆ ಇಲ್ಲ
ಭೂಮಿ ಮೇಲೆ ಸ್ವಾರ್ಥಾನೆ ಬೇರೆ ಏನಿಲ್ಲ
ನಂಗೊತ್ತು ಯಾವ್ದುನ್ನು ಶಾಶ್ವತ ಅಲ್ಲ
ಒಳಗೊಂದು ಹೊರಗೊಂದು ನಾಟ್ಕ ಮಾಡೋರ್ನೆಲ್ಲ
ದೂರ ಇಡು ದೂರ ಇರು
ಅಲ್ಲೊಂದು ಇಲ್ಲೊಂದು ತಂದ್ ಇಡೋರ್ನೆಲ್ಲ
ನೀನ್ ಅಲ್ಲೇ ಬಿಡು ಬಾಗ್ಲಲ್ಲೇ ಇಡು
ಬೆನ್ನ ಹಿಂದೆ ಬೈಕೊಳೋ ಮಾತುಗಳು
ನಿಂಗೆ ಕೆಳುಸುದ್ರು ಕೇಳಿಸದಂಗೆ ಇರು
ಕಣ್ಣ ಮುಂದೆ ನಡಿಯೋ ಡ್ರಾಮಗಳು
ನಿಂಗೆ ಕಾನುಸುದ್ರು ಕಾಣಿಸದಂಗೆ ಇರು
ಯಾಕ್ ಗೊತ್ತ ಯಾವಾಗಲು ನಂಬ ಬಾರದು ಯಾರನು?
ಹೊಟ್ಟೆ ಕಿಚ್ಚು ಅನ್ನೋದು ಬಿಟ್ಟಿಲ್ಲ ಯಾರನು
ಬೇರೆ ಅವ್ರು ಚೆನ್ನಾಗ್ ಇರ್ಲಿ ಅಂತ ಅನ್ಕೊಳೋದು ನಾನು
ನನ್ನ ಬುಡಕ್ಕೆ ಬರೋದು ಕೊನೆಗೆ ಎಲ್ಲಾನು
ನಾವು ಎಷ್ಟೇ ನಿಯತ್ತಾಗಿದ್ರುನು
ದೇವ್ರುದು ಬೇರೆ ಇರುತ್ತೆ ಪ್ಲಾನು
ಹುಟ್ಟಿದಾಗಿಂದ ಮತ್ತೆ ಸಾಯೋವರೆಗೂ
ಸುತ್ತ ಜನ ಇದ್ರೂ ಒಬ್ಬನೇ ನೀನು
ಬಂದಿದ್ದು ಒಬ್ಬನೇ
ಹೋಗೋದು ಕೂಡ ನೀ ಒಬ್ಬನೇ
ಅವ್ನು ಇವ್ನು ಬರ್ತಾನೆ ಕೆಲಸ ಆಗೋ ವರೆಗು ಇರ್ತಾನೆ
ಕಚಡ ವರ್ತನೆ ಮಾಡಿಕೊಳ್ಳೋದು ಸಮರ್ತನೆ
ಮನಸ್ಸಿನ ಯಾತನೆ ಬಿಟ್ಟಾಕಿ ನೀ ಮಾಡು ಪ್ರಾರ್ಥನೆ