O appa nenapella ulidide innu lyrics ( ಕನ್ನಡ ) – Sharath Mysuru

O appa nenapella ulidide innu song details

  • Song : O appa nenapella ulidide innu
  • Songer : Sharath Mysuru
  • Lyrics : Sharath Mysuru
  • Music : Lokesh
  • Label : Anand audio

O appa nenapella ulidide innu lyrics in kannada

ಓ ಅಪ್ಪಾ.. ನೆನಪೆಲ್ಲಾ ಉಳಿದಿದೆ ಇನ್ನೂ ಸಾಂಗ್ ಲಿರಿಕ್ಸ್

ನನ್ನೀ ಸಾಧನೆಯು ನಿನ್ನದೇನಾ.
ನನಸಾದ ಕನಸು ನಿನ್ನದೇನಾ..
ನೀನೆಲ್ಲಿರೆ ಅಲ್ಲೇ ನನ್ನ ಧ್ಯಾನ
ಈ ಜೀವನ ಇನ್ನೂ ನಿನ್ನದೇನಾ.
ಓ ಅಪ್ಪಾ… ನನ್ನ ಸ್ಪೂರ್ತಿಯು ಇನ್ನು ನೀನು
ಓ ಅಪ್ಪಾ…. ನನ್ನ ಕಾಯುವ ಧೈವ ನೀನು
ನೆನಪೆಲ್ಲಾ ಉಳಿದಿದೆ ಇನ್ನೂ..
ನೆನಪೆಲ್ಲಾ ಉಳಿದಿದೆ ಇನ್ನೂ..

ಕೈಬೆರಳನ್ನು ಹಿಡಿಯುತ್ತಾ
ಸರಿದಾರಿ ತೋರುತ್ತ
ಮರವಾಗಿ ನೆರಳಾದೆ ಇಲ್ಲಿ…
ಅಕ್ಷರವನ್ನು ಬರೆಸಿದೆ ನೀ
ವಿದ್ಯೆಯನ್ನು ಕಲಿಸಿದೆ ನೀ..
ನಿನ್ನ ವರ್ಣನೆ ಮಾಡಲು ಪದವೆಲ್ಲಿ
ನಿನ್ನ ಬೆನ್ನೇ ಆಸನವು
ನಿನ್ನ ಹೆಗಲೇ ಶಿಖರವಿದು
ಆಕಾಶವೇ ಮುಟ್ಟುವ ಛಲವು ನನ್ನಲ್ಲಿ..

ಅಪ್ಪಾ…
ಕನಸೆಲ್ಲಾ ಕಟ್ಟಿಟ್ಟು ನನಗೊಂದು ಮುತ್ತಿಟ್ಟು
ಬಚ್ಚಿಟ್ಟೆ ನಿನ್ನ ಎದೆಯಲ್ಲೇ
ಹಗಲೆಲ್ಲಾ ದುಡಿಯಲು ನೀ..
ಇಳಿ ಸಂಜೆ ಆಡಲು ನೀ
ಸರಿಸಾಟಿ ಯಾರು ನಿನಗಿಲ್ಲಿ
ಆ ಸಮಯವು ಕಳೆದಿರಲು
ಆ ನೆನಪೇ ಉಳಿದಿರಲು
ನಿನ್ನ ಕನಸಂತೆ ನಾ ಗೆಲ್ಲುವೆ ಜಗವನ್ನೇ
ಅಪ್ಪಾ…..

ನನ್ನೀ ಸಾಧನೆಯು ನಿನ್ನದೇನಾ.
ನನಸಾದ ಕನಸು ನಿನ್ನದೇನಾ..
ನೀನೆಲ್ಲಿರೆ ಅಲ್ಲೇ ನನ್ನ ಧ್ಯಾನ
ಈ ಜೀವನ ಇನ್ನೂ ನಿನ್ನದೇನಾ.
ಓ ಅಪ್ಪಾ… ನನ್ನ ಸ್ಪೂರ್ತಿಯು ಇನ್ನು ನೀನು
ಓ ಅಪ್ಪಾ…. ನನ್ನ ಕಾಯುವ ಧೈವ ನೀನು
ನೆನಪೆಲ್ಲಾ ಉಳಿದಿದೆ ಇನ್ನೂ..
ನೆನಪೆಲ್ಲಾ ಉಳಿದಿದೆ ಇನ್ನೂ..

O appa nenapella ulidide innu song video :

Leave a Comment

Contact Us