No fear lyrics ( ಕನ್ನಡ ) – All ok

No fear song details

  • Song : No fear
  • Singer : All ok
  • Lyrics : All ok
  • Music : All ok

No fear lyrics in Kannada

ಇಂದೊ ನಾಳೆಯೊ ನಾ ಗೆದ್ದೆ ಗೆಲ್ಲುವೆ
ಅಂದುಕೊಂಡರೆ ಈ ಜಗವು ನಿನ್ನದೆ

ನೀ ಪಣವನು ತೊಡು
ಹಿಂಜರಿಕೆಯ ಬಿಡು
ನೀನೊಂದು ಸೈನ್ಯವೆ

ನಿ ಶ್ರಮವನು ಪಡು
ಛಲದಿ ಹೆಜ್ಜೆಯಿಡು
ನೀನೊಂದು ಜ್ವಾಲೆಯೆ

ನೀ ನಡೀತಿರು ನಡೀತಿರು
ನೋವನ್ನೆಲ್ಲ ಮರೆತಿರು
ಸ್ನೇಹ ಪ್ರೀತಿ ಶಾಂತಿ ಅನ್ನೋ
ಮನಸ್ಥಿತಿ ಕಲಿತಿರು

ಛಲವನ್ನು ಬಿಡದಿರು
ಬಂದ ದಾರಿ ಮರಿದಿರು
ಆಗ ಎಲ್ಲ ಭೇಷ್ ಅಂತಾರೆ
ನಿನ್ನ ಬಗ್ಗೆ ಕುರಿತು

ಛಲವು ಹಠವು ತಾಳ್ಮೆ ಇರಲಿ
ಈಗ ನಿನ್ನ ಜೀವನದಾಸ್ತಿ ಜಯಭೇರಿ
ಇಂದ ರಣ ಕಹಳೆ ಊದು
ಗಳಿಸಿ ಒಳ್ಳೆ ಕೀರ್ತಿ

ನಿನ್ನನೀ ಗೆದ್ದು ನೋಡು
ಸಿಡಿದ್ದೆದು ನಿಂತು ಬಿಡು
ಮುನ್ನುಗ್ಗಿದಾಗ್ಲೆ ಗೆಲ್ಲೋಕೆ ಸಾಧ್ಯ ನೀನು ಜಗವಾ

ಹಣೆಬರಹ ಚೇಂಜು ಮಾಡು
ಭಯವೆಲ್ಲಾ ಪಕ್ಕಕ್ಕಿಡು
ಕಣ್ಣಲ್ಲೆ ಇರಿಸು ಎಂದು ನಿನ್ನ ಹಠವಾ

ನಿನ್ನೆಯ ಮರೆತು ಬಿಡು
ನಾಳೆಯೆ ಕಡೆಗೆ ನೋಡು
ಅವಕಾಶ ಸಿಕ್ಕಾಗ್ ಯೂಸು ಮಾಡು ಎಲ್ಲಾ ಬಲವಾ

ಬಂದದ್ದು ಬರಲಿ ಬಿಡು
ನಿನ್ನ ನೀ ನಂಬಿ ಬಿಡು
ಬೆವರಿನ ಹನಿಯೆ ಕಾಣೋದೆಂದು ಗೆಲುವಾ

ಸಾಧ್ಯವಿಲ್ಲ ಅನ್ನೋದೆ ಇಲ್ಲ
ನಿನ್ನ ಕೈಲಿ ಆಗೋದಿಲ್ಲ ಅನ್ನೋರೇ ಎಲ್ಲ
ನೆನಪಿರೊ ಸೋಲನು ಸೋಲಿಸುವ ಗೆಲುವಿಗೆ
ಸಾಧನೆ ಎಂದು ಹೆಸರಲ್ಲವೇ

ಸಾಧ್ಯವಿಲ್ಲ ಅನ್ನೋದೇ ಇಲ್ಲ
ನುಗ್ಗು ನುಗ್ಗು ಮುಂದೆ ನಿಂಗೆ ಯಾರೂ ಬೇಕಾಗಿಲ್ಲ,
ಗುರಿ ಕಡೆ ಓಡುತಿರು, ನೋವನೆಲ್ಲಾ ಮರೆತಿರು,
ಬಿದ್ದ ಕಡೆ ಏಳುವುದೆ ಗೆಲುವಲ್ಲವೇ

No fear song video – All ok

Leave a Comment

Contact Us