Ninnamane munde lyrics ( ಕನ್ನಡ ) – Buguri

Ninnamane munde song details

  • Song : Ninnamane munde
  • Singer : Rahul Nambiyar , Ramya Behara
  • Lyrics : Kaviraj
  • Movie : Buguri
  • Music : Micky J Meyar
  • Label : Anand audio

Ninnamane munde lyrics in Kannada

ನಿನ್ನಮನೆ ಮುಂದೆ ಸಾಂಗ್ ಲಿರಿಕ್ಸ್

ನಿನ್ನ ಮನೆ ಮುಂದೆ ರಸ್ತೆ
ನಾ ಸುತ್ತಿದ್ದೆ ಮತ್ತೆ ಮತ್ತೆ
ನಿನ್ನ ನಗು ಚೂರೆ ಚೂರು ನೋಡ್ಕಂತ
ನೀ ಸೋಕಿದ ಕೈಗೆ ಇನ್ನೂ ಹಾಕಿಲ್ಲವೆ ನೀರು ನಾನು
ಆ ಕಂಪನ ಇನ್ನೂ ಹಾಗೇ ಇರಬೇಕು ಅಂತ

ನೀನು ಜೊತೆಗಿರೊ ಹೊತ್ತಲ್ಲಿ
ಹೊಸ ಸೊಗಸಿದೆ ನನ್ನಲ್ಲಿ
ಆ ಪ್ರತಿ ಕ್ಷಣ ವಿನೂತನ ಜೀವನ

ನಿನ್ನ ಮನೆ ಮುಂದೆ ರಸ್ತೆ
ನಾ ಸುತ್ತಿದ್ದೆ ಮತ್ತೆ ಮತ್ತೆ
ನಿನ್ನ ನಗು ಚೂರೆ ಚೂರು ನೋಡ್ಕಂತ
ನೀ ಸೋಕಿದ ಕೈಗೆ ಇನ್ನೂ ಹಾಕಿಲ್ಲವೆ ನೀರು ನಾನು
ಆ ಕಂಪನ ಇನ್ನೂ ಹಾಗೇ ಇರಬೇಕು ಅಂತ

ಮನಸು ಮನಸು ಪರಸ್ಪರ ಕುಶ್-ಲೋಪದಿ ಕೇಳಿವೆ
ಸನಿಹ ಇರಲು ನಿರಂತರ ಹೃದಯ ಹಠ ಮಾಡುತಾವೆ
ಉಳಿದ ಜನರು ಅಗೋಚರ ಬರೀ ನಿನ್ನನು ಕಾಣುವೆ
ದಿನ ವಾರ ಗಡಿಯಾರ ಬರೀ ವೇಗವಿರದ ಹೊಸ ಬದುಕು ಅರಳುತಿದೆ

ಪುಣ್ಯವಂತ ನಾನೊಬ್ಬ ಜೀವನದಲ್ಲಿ ಆರಂಭ ಪ್ರೀತಿ ಎಂಬ ಚಂದ ಹವಾ ಹಾ
ಹೀಗೆ ಹಾಗೆ ಅಬ್ಬಬ್ಬಾ
ಇಷ್ಟವಾದೆ ತುಂಬಾ ತುಂಬಾ ನೀ ನನಗೆ
ನಿನ್ನ ಮನೆ ಮುಂದೆ ರಸ್ತೆ
ನಾ ಸುತ್ತಿದ್ದೆ ಮತ್ತೆ ಮತ್ತೆ
ನಿನ್ನ ನಗು ಚೂರೆ ಚೂರು ನೋಡ್ಕಂತ
ನೀ ಸೋಕಿದ ಕೈಗೆ ಇನ್ನೂ ಹಾಕಿಲ್ಲವೆ ನೀರು ನಾನು
ಆ ಕಂಪನ ಇನ್ನೂ ಹಾಗೇ ಇರಬೇಕು ಅಂತ

ಉಳಿದ ಜಗದ ಉಸಾಬರಿ ಮರೆತಾಗಿದೆ ಕಿನ್ನರಿ
ನಿನ್ನದೆ ನೆನಪು ಸರಾಸರಿ ಪ್ರತಿ ನಿಮಿಷಕ್ಕೆ ನೂರು ಸಾರಿ
ತವಕ ಪುಳಕ ತರಾತುರಿ ಹಿತವಾಗಿದೆ ಈ ಪರಿ
ನನಗೀಗ ಅನಿವಾರ್ಯ ಉಸಿರತರುವೆ ನಿನ್ನ ಒಲವು ಅನುದಿನವು
ನಿನ್ನ ಕಣ್ಣ ಸಂದೇಶ ಓದುವಂತ ಸಂತೋಷ ಬೇರೇಯೆಲ್ಲೂ ಸಾಧ್ಯ ಇಲ್ಲ ಹಾ
ನೀಡು ಒಂದು ಆದೇಶ ನಿಲ್ಲಿಸೋದೆ ನನ್ನ ಸ್ವಶ ಆ
ಕ್ಷಣವೇ

Ninnamane munde song video :

Leave a Comment

Contact Us