Ninna sanihake title song details
- Song : Ninna sanihake title song
- Singer : Shruthi V S , Sanjith Hegde
- Music : Raghu Dixit
- Lyrics : Vasuki Vaibhav
Ninna sanihake title song lyrics in Kannada
ಹೃದಯದ ಪರಿಪಾಡು ಹೀಗೇಕೆ ಅನಿಸೋದು
ಅರಿಯದೆ ಮನಸ್ಸೋತರೆ
ಸಮಯದ ಗತಿ ಮೆಲ್ಲ ಹೀಗೇಕೆ ಸಾಗೋದು
ನೆನೆಯುತ ನಿನ್ನ ಕಾದರೆ
ಬಿಡದೇ ಹಿಡಿದಂಥ
ಒಲವ ಮಳೆಗೆ
ಮನದ ನೆಲವೆಲ್ಲ
ಹಸಿರಾಗಿ ಹೂವಾಗಿದೆ
ನಿನ್ನ ಕೊಡುಗೆ
ನಿನ್ನ ಸನಿಹಕೆ ಬರುವೆ
ಸೊಗಸಾದಂತೆ ಜೊತೆಗಾರಿಕೆ
ನಿನ್ನ ಸನಿಹಕೆ ಬರುವೆ
ನನ್ನ ಈ ಜೀವ ಕಿರುಕಾಣಿಕೆ
ನನ್ನ ಬದುಕೆಲ್ಲವ
ಸರಿದೂಗುವ ಹೊಣೆಗಾರಿಕೆ
ನಿನ್ನಲ್ಲಿದೆ
ಕಿವಿಗೊಡು ನೀ… ವಿವರಿಸುವೆ
ಬಿಸಿ ಉಸಿರ ಕವಿತೆಗಳ
ಕೂಡಿಡುವೆ ಬಿಡಬಿಡದೆ
ನೀನಿರುವ ನಿಮಿಷಗಳ
ಉಪಗ್ರಹವೇ ನಿನಗೆ ನಾನು
ಕನಸುಗಳ ತೆರೆದಿಡುವೆ
ಆವರಿಸು ಅಡಿಗಡಿಗೆ
ಕೋರಿಕೆಯು ಒಂದೇನೇ
ಹೃದಯದಲಿ ಮಿನುಮಿನುಗು
ಕೊನೆವರೆಗೂ ಇದೇ ಥರ
ನಿನ್ನ ಸನಿಹಕೆ ಒಲವೇ
ಸೊಗಸಾದಂತೆ ಜೊತೆಗಾರಿಕೆ
ನಿನ್ನ ಸನಿಹಕೆ ಬರುವೆ
ನನ್ನ ಈ ಜೀವ ಕಿರುಕಾಣಿಕೆ
ನನ್ನ ಬದುಕೆಲ್ಲವ
ಸರಿದೂಗುವ ಹೊಣೆಗಾರಿಕೆ
ನಿನ್ನಲ್ಲಿದೆ