Ninade nenapu lyrics ( ಕನ್ನಡ ) – Vasuki vaibhav

Ninade nenapu song details

  • Song : Ninade nenapu
  • Singer : Vasuki vaibhav
  • Lyrics : Ghous peer
  • Music : Rohith Sower
  • Label : Anand audio

Ninade nenapu lyrics in kannada

ಹೃದಯವೇ ಹೃದಯಕೆ ಈಗ
ಕಡು ವೈರಿ..
ಮನಸಲಿ ನೆನಪಿನ ಓಟ
ಮಿತಿ ಮೀರಿ..
ಆಕಾಶ ಕಳಚಿ ಬಿದ್ದ ಗಳಿಗೆ
ಭೂಕಂಪ ನನ್ನ ಎದೆ ಒಳಗೆ
ಆಸೆಗಳು ನುಚ್ಚು ನೂರು
ಕಂಡಂತ ಕನಸು ಚೂರು
ಸಾಗರವು ಇಂದು ಮರು ಭೂಮಿ
ತಂಗಾಳಿ ಈಗ ಸುನಾಮಿ

ಹೃದಯವೇ ಹೃದಯಕೆ ಈಗ
ಕಡು ವೈರಿ..
ಮನಸಲಿ ನೆನಪಿನ ಓಟ
ಮಿತಿ ಮೀರಿ..

ಅನುರಾಗ ಸುಡುವಾಗ
ಬೇಗೆಯಲಿ ನಿಂತು ನಾ ಬೆಂದೆ
ಬಿರುಗಾಳಿ ಎದೆ ಸೀಳಿ
ಬಾಳಿನಲ್ಲಿ ಸೋತು ನಾ ನೊಂದೆ
ವಾಸಿ ಆಗದಂತ ಗಾಯಕೆ
ಮಾಡಿ ಹೊಡೆ ನೀನು ವೇದಿಕೆ
ಕಿತ್ತು ತಿನ್ನುವಂತ ಬೇಸರ
ತಂದೆ ನೀನು ಮನಕೆ

ಹೃದಯವೇ ಹೃದಯಕೆ ಈಗ
ಕಡು ವೈರಿ..
ಮನಸಲಿ ನೆನಪಿನ ಓಟ
ಮಿತಿ ಮೀರಿ..

ದಿನ ಒಂದು ಯುಗದಂತೆ
ಇಲ್ಲದಾಗ ನನ್ನ ನೀ ಸನಿಹ
ಬಲು ಕ್ರೂರಿ ಹೆಗಲೇರಿ
ಕಾಡಿ ಬೇಡುವಂತ ಈ ವಿರಹ
ಖಾಲಿ ಈಗ ನನ್ನ ಅಂಬರ
ಇಲ್ಲ ಖುಷಿ ನೀಡೋ ಚಂದಿರ
ಏರೋ ಮುನ್ನ ನಾನು ಜಾರಿದೆ
ಪ್ರೀತಿ ಎಂಬ ಶಿಕರ

ಹೃದಯವೇ ಹೃದಯಕೆ ಈಗ
ಕಡು ವೈರಿ..
ಮನಸಲಿ ನೆನಪಿನ ಓಟ
ಮಿತಿ ಮೀರಿ..

Ninade nenapu song video :

Leave a Comment

Contact Us