Nidde illada kannige song details
- Song : Nidde illada kannige
- Singer : Sharan S
- Lyrics : Karthik H P
- Music : Manu Rao
- Label : A2 entertainment
Nidde illada kannige lyrics in kannada
ನಿದ್ದೆ ಇಲ್ಲದ ಕಣ್ಣಿಗೆ ಸಾಂಗ್ ಲಿರಿಕ್ಸ್
ನಿದ್ದೆ ಇಲ್ಲದ ಕಣ್ಣಿಗೆ
ಅವಳದೆ ಕನಸಿನ ಹಾವಳಿ
ಕಣ್ಣು ಮುಚ್ಚಿದರೆ ಸಾಕು
ಕನಸಲ್ಲೆ ಬರ್ತಾಳೆ ಮಿಂಚುಳ್ಳಿ
ಅವಳ ಅಂದ ನೋಡಿ ನಾಚಿತು ಗಿಳಿ
ಅವಳ ನೋಡ್ತಿದ್ರೆ ಕೊಟ್ಟಂಗೆ ಕಚಗುಳಿ
ಅವಳು ಬೀಳೋವರೆಗೂ ನನ್ನ ಪ್ರೀತೀಲಿ
ಮುಚ್ಚೋದಿಲ್ಲ ಕಣ್ಣು ನಿದ್ದೇಲಿ
ಈ ಹಾರ್ಟು ಹೇಳ್ತೈತೆ ಕೇಳಿ
ಅವಳಿಲ್ಲ ಅಂದ್ರೆ ಲೈಫು ಪೂರಕಾಲಿ
ಆ ದಿನ ಮಾಡಿದ್ದು ಮರೆತು ನಾನಾ ನಾನಾದೆ ಊನ
ಆ ಕ್ಷಣ ಕಣ್ಣಿಗೆ ಬಟ್ಟೆ ಕಟ್ಟಿಬಿಟ್ಟರೊ ಅವಳ ಹಿಂದೆಯೆ ಪಯಣ
ದಾರಿ ತಪ್ಪದಿರಲಿ ಹೆಜ್ಜೆಯೂ ತಪ್ಪದ ಹಾಗೆ
ಆದರೂ ಈರ್ತಾಳೆ ಹೇಗೆ ನನ್ನನ್ನು ಪ್ರೀತಿಸದ ಹಾಗೆ
ಬಿದ್ದೆನಾ ಪ್ರೀತೀಲಿ ನಾನಿಲ್ಲ ನನ್ನಲ್ಲಿ
ಹುಡುಕೋದು ಹೇಗೆ ನನ್ನೊಳಗೆ ನನ್ನಲ್ಲಿ
ನಿದ್ದೆ ಇಲ್ಲದ ಕಣ್ಣಿಗೆ
ಅವಳದೆ ಕನಸಿನ ಹಾವಳಿ
ಕಣ್ಣು ಮುಚ್ಚಿದರೆ ಸಾಕು
ಕನಸಲ್ಲೆ ಬರ್ತಾಳೆ ಮಿಂಚುಳ್ಳಿ
ನಿನಗೆ ಬಂದಿರೊ ಈ ಖಾಯಿಲೆ ನನಗೆ ಬಂದಿತ್ತು ಚಿಕ್ಕ ವಯ್ಯಸ್ಸಲ್ಲೆ
ಈ ಹೃದಯಕೆ ಪ್ರೀತಿ ಮಾಮೂಲಿ ಆದರೂ ನಾವು ಇಲ್ಲಿವರೆಗೂ ಸಿಂಗಲ್ಲೆ ಸಿಂಗಲ್ಲೆ
ದುಡ್ಡಿಲ್ಲ ಅಂದ್ರೆ ಲವ್ ಮಾಡಲ್ಲ
ಬಗ್ಗಿಲ್ಲ ಅಂದ್ರೆ ಜೊತೆಗೆ ಬರಲ್ಲ
ಗವರ್ನಮೆಂಟ್ ಜಾಬು ಬೇಕು ಮಗ ಇಲ್ಲ ಅಂದ್ರೆ ಮ್ಯಾರೇಜ್ ಆಗಲ್ಲ
ಸಿಂಗಲ್ಲಾಗೆ ಇರೋ ಮಗ ಬೇಕ ನಮಗೆ ಇದೆಲ್ಲಾ
ಅವಳನ್ನ ನೋಡ್ತಿದ್ರೆ
ಅಪ್ಸರೆ ಬಂದಂಗೆ ಭೂಮಿಗೆ
ಅದಕ್ಕೆ ಬಿದ್ದಿಲ್ಲ ಅನ್ಸತ್ತೆ
ನಾನು ಹಾಕೊ ಕಾಳಿಗೆ
ಅವಳು ಹೆಜ್ಜೆ ಇಟ್ರೆ ಬೀದೀಲಿ
ಹಬ್ಬ ಊರಲ್ಲಿ
ಅವಳು ನಾಚಕೊಂಡ್ಲು ಅಂದ್ಕೊಳ್ಳಿ ಕಿನ್ನರಿ ಭೂಮೀಲಿ
ಚಂದ್ರ ಅಮವಾಸ್ಯೆಯ ರಾತ್ರೀಲಿ ಇವಳ ಕೆನ್ನೇಲಿ
ಬಚ್ಚಿಡ್ಕೊಂತಾನೆ ಇವಳ ಮುಟ್ಟೊ ನೆಪದಲ್ಲಿ ಮುಟ್ಟೊ ನೆಪದಲ್ಲಿ
ಮುಟ್ಟೊ ನೆಪದಲ್ಲಿ ಮುಟ್ಟೊ ನೆಪದಲ್ಲಿ