Nesara lyrics ( ಕನ್ನಡ ) – Nannaseya hoove

Nesara song details

  • Song : Nesara
  • Singer : Rajesh Krishnan , K S Chitra
  • Lyrics : Hamsalekha
  • Movie : Nannaseya hoove
  • Music : Hamsalekha
  • Label : Anand audio

Nesara lyrics in kannada

ನೇಸರ ಸಾಂಗ್ ಲಿರಿಕ್ಸ್

ಹೂವೆ ನನ್ನಾಸೆಯ ಹೂವೇ
ಹೂವೆ ನನ್ನಾಸೆಯ ಹೂವೇ

ನೀ ಸಾಗರ ಆ ನೇಸರ ಹೇಗಾಯ್ತು ಗೆಳೆಯಾ
ಹೇಗಾಯ್ತು ಗೆಳೆಯಾ
ಆ ಅಂಬರ ಆ ಚಂದಿರ ಹೇಗಾಯ್ತು ಗೆಳೆಯಾ
ಹೇಗಾಯ್ತು ಗೆಳೆಯಾ
ಕೇಳೆ ಗೆಳತಿ ಇದು
ಪ್ರೀತಿಯ ಸೃಷ್ಟಿ
ಈ ಸಾಗರ ಸಂಸಾಗರ ನೀನಂತೆ ಚೆಲುವೆ ನೀನಂತೆ ಚೆಲುವೆ
ನೀಡಿದ್ದರೆ ನಾನಲ್ಲವೆ ನನ್ನಾಸೆಯ ಹೂವೇ
ನನ್ನಾಸೆಯ ಹೂವೇ

ಜೀವ ದೈವದ ಸಂವಾದ
ಈ ಪ್ರೇಮಿಗಳ ಮಾತು
ಜೀವ ದೈವದ ಅಪ್ಪುಗೆಯು
ಈ ಪ್ರೇಮಿಗಳ ಮುತ್ತು
ಮುಚ್ಚುಮರೆ ಕುಲ
ಬಣ್ಣಗಳ ತೆರೆ
ಈ ಮಾತುಗಳಲ್ಲಿಲ್ಲ ಈ ಅಪ್ಪುಗೆಯಲ್ಲಿಲ್ಲ
ಆ ಆ ಆ ಆ ಆ

ಈ ಹೂಗಳು ಮಳೆಬಿಲ್ಲುಗಳು
ಏಕಾಯ್ತು ಗೆಳೆಯ
ಏಕಾಯ್ತು ಗೆಳೆಯ
ಈ ಜೀವನ ಸಹಗಾಯನ ಏಕಾಯ್ತು ಗೆಳೆಯ
ಏಕಾಯ್ತು ಗೆಳೆಯ
ಕೇಳೆ ಗೆಳತಿ ಇದು
ಪ್ರೀತಿಯ ವೃಷ್ಟಿ
ಈ ಜೀವನ ಸಹಗಾಯನ ನೀನಂತೆ ಚೆಲುವೆ ನೀನಂತೆ ಚೆಲುವೆ
ನೀನಿದ್ದರೆ ನಾನಲ್ಲವೆ ನನ್ನಾಸೆಯ ಹೂವೇ
ನನ್ನಾಸೆಯ ಹೂವೇ

ಪ್ರೀತಿಯ ದೇವರು ಅದರ ದೂಷಣೆ ಏಕಿದೆಯೋ
ಪ್ರೀತಿ ಆಳೋ ಜಗದಲ್ಲಿ ಧ್ವೇಷ ಏಕಿದೆಯೋ
ತಾಯಿ ಒಲವಿಗೆ ತಾಯಿ ಎದೆಯ ಹಾಲಿಗೆ
ಎರವಾದ ಮಗುವಂತೆ ಈ ಧ್ವೇಷದ ಕುಲಸಂತೆ
ಆ ಆ ಆ ಆ ಆ

ಈ ರಾಗವು ಅನುರಾಗವು
ಏಕಿದೆ ಗೆಳೆಯ ಕೇಳಿದೆ ಹೃದಯ
ಈ ಕಂಪನ ಈ ಸ್ಪಂದನ ಏಕಿದೆ ಗೆಳೆಯ ತಾಳದೀ ಹೃದಯ
ಕೇಳೆ ಗೆಳತಿ ಅದು ಪ್ರೀತಿಯ ಗುಟ್ಟು
ಈ ರಾಗವು ಅನುರಾಗವು ನೀನಂತೆ ಚೆಲುವೆ
ನೀನಂತೆ ಚೆಲುವೆ
ನೀಡಿದ್ದರೆ ನಾನಲ್ಲವೆ ನನ್ನಾಸೆಯ ಹೂವೆ
ನನ್ನಾಸೆಯ ಹೂವೆ

Nesara song video :

Leave a Comment

Contact Us