Neenu irade song details
- Song : Neenu irade
- Singer : Arfaz ullal
- Lyrics : Junaid Belthangady
- Music : Yusuf Kannur
- Label : Classic media
Neenu irade lyrics in kannada
ನೀನು ಇರದೆ ಸಾಂಗ್ ಲಿರಿಕ್ಸ್
ಪ್ರೀತಿಯ ಮೌನದ ಯಾತ್ರೆ
ಅವಳಿಗೆ ಮದುವೆಯ ಜಾತ್ರೆ
ಆ ಮನಸ್ಸು ಯಾರದೊ ಹೆಸರಲಿ
ನಶೆಯ ತುಂಬಿ ಹಾರಾಡುತಿದೆ
ಬಡವನ ಪ್ರೀತಿಗೆ ಇಂದು ಬೆಲೆಯ ಕಟ್ಟಿ ತೂಗಿಸುತಲಿದೆ
ಕಣ್ಣೀರಿಗೆ ಬೆಲೆ ಇಲ್ಲ ನಿಜ ಪ್ರೀತಿ ಸಾಯೋದಲ್ಲ
ನನ್ನಯ ಯಾತನೆ ಕಾಣದ ನಿನಗೆ ನಿಜ ಪ್ರೀತಿ ಅರಿತಿಲ್ಲ
ಹಾಳಾದ ವಿಧಿಬರಹ ನಗುವನ್ನು ನನಗೆ ಬರೆದೆ ಇಲ್ಲ
ಪ್ರೀತಿಯ ಮೌನದ ಯಾತ್ರೆ
ಅವಳಿಗೆ ಮದುವೆಯ ಜಾತ್ರೆ
ಆ ಮನಸ್ಸು ಯಾರದೊ ಹೆಸರಲಿ
ನಶೆಯ ತುಂಬಿ ಹಾರಾಡುತಿದೆ
ಬಡವನ ಪ್ರೀತಿಗೆ ಇಂದು ಬೆಲೆಯ ಕಟ್ಟಿ ತೂಗಿಸುತಲಿದೆ
ಜೊತೆ ಜೊತೆಗೆ ನೀ ಕಳೆದ ಜೀವನ ನಾಟಕವೇಯೇನು
ನಿನ್ನನು ನಂಬಿದ ನನ್ನಯ ಯೌವ್ವನ ನೀರಿಲ್ಲದ ಮೀನು
ಯಾರನು ದೂರಲಿ ಯಾರನು ಹೊಗಳಲಿ ಒಂದು ಅರಿಯಲ್ಲ
ಅನುಮಾನದ ಮಾರುತ ನನ್ನಯ ಮೋಹವ ಕೊಂದಿತು ಅಲ್ಲ
ನಾನು ಇರದೆ ನಿನ್ನ ಪಯಣ ಸುಖವಾಗಿ ನಡೆಯುವುದಾದರೆ ಇನ್ನು ಮುಂದೆ ಎಂದೂ ನಾನು ನಿನ್ನನು ನೋಯಿಸಲಾರೆ
ಕಣ್ಣು ತುಂಬಿ ಪ್ರಾರ್ಥಿಸುವೆನು ದೇವರೆ ಹಾರೈಸವಳನ್ನು ಕೈಚಾಚಿ ಬೇಡಿರುವೆನು ಮನ್ನಿಸು ಮುಗ್ಧ ಮನಸನ್ನು
ಪ್ರೀತಿಯ ಮೌನದ ಯಾತ್ರೆ
ಅವಳಿಗೆ ಮದುವೆಯ ಜಾತ್ರೆ
ಆ ಮನಸ್ಸು ಯಾರದೊ ಹೆಸರಲಿ
ನಶೆಯ ತುಂಬಿ ಹಾರಾಡುತಿದೆ
ಬಡವನ ಪ್ರೀತಿಗೆ ಇಂದು ಬೆಲೆಯ ಕಟ್ಟಿ ತೂಗಿಸುತಲಿದೆ
ನಿನ್ನಯ ಜಾಗವ ತುಂಬಲು ಎಂದೂ ಯಾರಿಗೂ ಆಗೊಲ್ಲ
ನಿನ್ನಯ ಅಂದವ ನೋಡಿ ನಾನು ಪ್ರೀತಿಸಿದವನಲ್ಲ
ನನ್ನಲಿ ಇರುವ ಪ್ರೀತಿಯ ಮುಂದೆ ಹಣ ಲೆಕ್ಕಕ್ಕಿಲ್ಲ
ಬೆಲೆ ಕಟ್ಟುವ ಪ್ರೀತಿಯ ನಾನೆಂದು ನಿನಗೆ ನೀಡಿಲ್ಲ
ಬಡವ ನಾನು ಒಪ್ಪಲೇನು ಅದರಲ್ಲಿ ನನ್ನಯ ತಪ್ಪೇನು
ಬರೆದ ಬ್ರಹ್ಮ ಕೊಟ್ಟ ಜನುಮ ಇದರಲ್ಲಿ ನಮ್ಮಯ ಪಾಲೇನು
ನಾಲ್ಕು ದಿನದ ಬಾಳಿನಲ್ಲಿ ಹಣದ ಹಿಂದೇನಿಲ್ಲಿ
ಮಣ್ಣಿಗಿಡುವ ಸಮಯದಲ್ಲಿ ನಿನ್ನಯ ಸಿರಿತನವೆಲ್ಲಿ
ಪ್ರೀತಿಯ ಮೌನದ ಯಾತ್ರೆ
ಅವಳಿಗೆ ಮದುವೆಯ ಜಾತ್ರೆ
ಆ ಮನಸ್ಸು ಯಾರದೊ ಹೆಸರಲಿ
ನಶೆಯ ತುಂಬಿ ಹಾರಾಡುತಿದೆ
ಬಡವನ ಪ್ರೀತಿಗೆ ಇಂದು ಬೆಲೆಯ ಕಟ್ಟಿ ತೂಗಿಸುತಲಿದೆ
ಕಣ್ಣೀರಿಗೆ ಬೆಲೆ ಇಲ್ಲ ನಿಜ ಪ್ರೀತಿ ಸಾಯೋದಲ್ಲ
ನನ್ನಯ ಯಾತನೆ ಕಾಣದ ನಿನಗೆ ನಿಜ ಪ್ರೀತಿ ಅರಿತಿಲ್ಲ
ಹಾಳಾದ ವಿಧಿಬರಹ ನಗುವನ್ನು ನನಗೆ ಬರೆದೆ ಇಲ್ಲ