Neenu irade lyrics ( ಕನ್ನಡ ) – Arfaz ullal

Neenu irade song details

  • Song : Neenu irade
  • Singer : Arfaz ullal
  • Lyrics : Junaid Belthangady
  • Music : Yusuf Kannur
  • Label : Classic media

Neenu irade lyrics in kannada

ನೀ ಇರದೆ ಸಾಂಗ್ ಲಿರಿಕ್ಸ್

ನಿನ್ನ ಈ ನೋಟದ ಕ್ಷಣವೆ
ನನ್ನ ಮನಸೋತಿದೆ ಚೆಲುವೆ
ನಿನ್ನ ಸವಿ ಬಂಧನದಲ್ಲಿ ಸೆರೆಯಾದೆ
ನನ್ನ ಈ ಉಸಿರಲ್ಲಿ ಇಂದು ಮುದ್ದಾಡಿದೆ ನಿನ್ನೀ ಒಲವು
ಈ ಪ್ರೀತಿಯ ಕಂಬನಿಯಲ್ಲಿ ಬಲಿಯಾದೆ
ಈ ಹೃದಯದಲಿ ಸಿಹಿ ಕನಸುಗಳು ಬರಿದಾಗಿದೆ ನೀ ಇರದೆ
ಮನ ಮಿಡಿತದಲೂ ಪ್ರತಿ ಕ್ಷಣಗಳಲೂ ನಿನಗಾಗಿಯೇ ಕಾದಿರುವೆ
ಒಲವೇ ಈ ಒಲವಿನಲಿ ಎದೆ ಮಿಡಿತವು ಮೀಟಿದ ಸ್ವರವಾದೆ
ಉಸಿರೆ ಈ ಉಸಿರಿನಲೆ ಹೊಂಬಿಸಿಲಿಗೆ
ನೆನೆದ ಮಳೆಯಾದೆ

ನಿನ್ನ ಈ ನೋಟದ ಕ್ಷಣವೆ
ನನ್ನ ಮನಸೋತಿದೆ ಚೆಲುವೆ
ನಿನ್ನ ಸವಿ ಬಂಧನದಲ್ಲಿ ಸೆರೆಯಾದೆ
ನನ್ನ ಈ ಉಸಿರಲ್ಲಿ ಇಂದು ಮುದ್ದಾಡಿದೆ ನಿನ್ನೀ ಒಲವು
ಈ ಪ್ರೀತಿಯ ಕಂಬನಿಯಲ್ಲಿ ಬಲಿಯಾದೆ

ನಿನ್ನ ನೆರಳಿನ ಜೊತೆಗೂ
ನಾ ನಡೆಯುವ ಕನಸಿನಲೂ
ಹೆಜ್ಜೆ ಹೆಜ್ಜೆಯ ಗುರುತು
ಎದೆಯಲ್ಲೆ ನಾಟಿದಳು
ಪದರದಲಿ ಪ್ರತಿ ಘಳಿಗೆಗೂ ಬರೆದಿದೆ
ಮಿಲನಗಳ ಒಗಟು
ಹಗಲಿರುಳು ಮುಡಿಪಾಗಿದೆ ಜೀವವೂ
ನಿನ್ನೊಡನೆ ಮರೆಯಾಗುವೆ
ನೀ ಇರದೆ ನನ್ನ ಬಾಳಿನಲಿ ಮಳೆ ನೀರಿರದ ಬರೀ ಮರು‌ಭೂಮಿ
ಚೆಲುವೆ ನೀ ಹೇಗಿರುವೆ ನನ್ನ ಪ್ರೀತಿಯ ಕಾಣದೆ ಹೋಗಿರುವೆ

ನಿನ್ನ ಈ ಮಾತುಗಳಿರದೆ
ನನ್ನ ಮನಸೋತಿದೆ ಚೆಲುವೆ
ನಿನ್ನ ಸವಿ ನೆನಪಿಗೆ ನಾನು ಸೆರೆಯಾದೆ
ನನ್ನ ಉಸಿರಲ್ಲಿ ಎಂದೂ ಒದ್ದಾಡಿದೆ ನಿನ್ನೀ ನೆನಪು
ಈ ಪ್ರೀತಿಯ ಮಾತುಗಳಿಂದ ಮರೆಯಾದೆ

ಕಲ್ಲಿನ ಶಿಲೆಗಳಿಗೆಂದು ಇನ್ನೂ ಜೀವ ಬಾರದ
ಅರೆ ನಿನ್ನ ಬೆರಳುಗಳ ಮಾತು ನನಗೊಮ್ಮೆ ಹೇಳುವೆಯಾ
ಉಸಿರಲ್ಲೇ ಉಸಿರಾದೆ
ಮಳೆಬಿಲ್ಲ ತೋರಿದೆ
ಸಿಹಿಯಾದ ನೋವನ್ನೆ ನನಗೆಂದೆ ನೀಡಿ ಎಲ್ಲಿಗೆ ಹೋಗುವೆ

ನೀ ಇರದೆ ಇನ್ನೆಲ್ಲಿ ನಾ ಇರಲಿ
ನೀ ಇರದೆ ಈ ಉಸಿರನ್ನೆ ಕೊಂದಿರುವೆ
ನೀ ಇರದೆ ದಿನದಿನವೂ ನಾ ಸೋತಿರುವೆ
ನೀ ಇರದೆ ನಿನಗಾಗಿ ಕಾದಿರುವೆ

Neenu irade song video :

Leave a Comment

Contact Us