Neenirade lyrics ( ಕನ್ನಡ ) – Googly – Super cine lyrics

Neenirade – Sonu nigam Lyrics

Singer Sonu nigam

Neenirade song details – Googly

▪ Song – Neenirade
▪ Movie – Googly
▪ Director – Pawan Wadeyar
▪ Music – Joshua Sridar
▪ Singers – Sonu Nigam
▪ Lyrics – Jayant Kaikini

Neenirade song lyrics in Kannada – Googly

ನೀನಿರದೆ …. ತಂಗಾಳಿಯು ಮುಂಗುರುಳನು ನೇವರಿಸಿದೆ
ನೀನಿರದೆ …. ಸದ್ದಿಲ್ಲದೇ ಹೊಂಗಿರಣವು ಆವರಿಸಿದೆ
ಬದಲಾಯಿತೀಗ ನನ್ನ ಲೋಕ ನಿನ್ನ ಗುಂಗಿಲ್ಲದೆ
ಹಗುರಾಯಿತೀಗ ಒಂಟಿ ಜೀವ ನಿನ್ನ ಹಂಗಿಲ್ಲದೆ

ಪ್ರಳಯ ಗಿಳಯ , ಒಲವು ಗಿಲವು ಎಲ್ಲಾ ಮರೆತು ಇರಬಲ್ಲೆ ನಾನೊಬ್ಬನೇ …
ವಿರಹ ಗಿರಹ ಸರಸ ಗಿರಸ ಎಲ್ಲಾ ತೊರೆದು ಇರಬಲ್ಲೆ ನಾನೊಬ್ಬನೇ …

ಹೇ… ನನ್ನ ಏಕಾಂತವು ಸಂಪೂರ್ಣ ನನದಾಯಿತು
ಪ್ರತಿನಿತ್ಯವೂ ನನಗೀಗ ಸ್ವಾತಂತ್ರ್ಯ ದಿನವಾಯಿತು
ಕಾಡಿ ಕಂಗೆಡಿಸುವ ಬಿರುಗಾಳಿ ಮರೆಯಾಯಿತು
ನಡು ನೀರಲ್ಲೆ ನೀ ಬಿಟ್ಟು ನಾ ಈಜು ಕಲಿತಾಯಿತು
ಪಿಸು ಮಾತನು ಪೋಣಿಸಿ ತರುವ ಪರದಾಟ ಇನ್ನಿಲ್ಲ ಸಾಕು
ಬಳಿ ವಾಪಸು ಬಂದಿದೆ ಹೃದಯ ಇದಕ್ಕಿಂತ ಇನ್ನೇನು ಬೇಕು
ನೂತನ ಜೀವನ ಇಂದು ನನದಾಯಿತು ।ಪ್ರಳಯ।

ನೀ ನನ್ನ ಜೊತೆಯಲ್ಲಿ ಜಗಳಾಡಿದ ಜಾಗ
ಕಂಡಾಗ ಏನೆಲ್ಲ ಜ್ಞಾಪಕವಾಗಿದೆ
ನೀನಿಟ್ಟು ಹೋದಂತ ಮುಳ್ಳೊಂದು ಎದೆಯಲ್ಲಿ
ಹೂವಾಗಿ ಅರಳುತ್ತ ಮೋಹಕವಾಗಿದೆ
ತುಸು ದೂರ ಬಂದ ಮೇಲೆ ಹೊಸದಾಗಿ ಹೃದಯ ಬೇರೆ ಬಡಜೀವ ಮತ್ತೆ ನೀನೆ ಬೇಕೆಂದು ಹಟವ ಹಿಡಿದಿದೆ

ಪ್ರಳಯ ಗಿಳಯ, ಒಲವು ಗಿಲವು ಎಲ್ಲಾ ಮರೆತು ಇರಲಾರೆ ನಾನೊಬ್ಬನೇ …
ವಿರಹ ಗಿರಹ, ಸರಸ ಗಿರಸ ಎಲ್ಲಾ ತೊರೆದು ಇರಲಾರೆ ನಾನೊಬ್ಬನೇ …

Leave a Comment

Contact Us