Neene helu mankuthimma lyrics ( ಕನ್ನಡ ‌) – Panchatantra

Neene helu mankuthimma song details

  • Song : Neene helu mankuthimma
  • Singer : Raghu Dixit
  • Lyrics : Yogaraj bhat
  • Music : V Harikrishna
  • Movie : Panchatantra
  • Label : D Beats

Neene helu mankuthimma lyrics in Kannada

ನೀನೆ ಹೇಳು ಮಂಕುತಿಮ್ಮ ಸಾಂಗ್ ಲಿರಿಕ್ಸ್

ನೀನೆ ಹೇಳು ಮಂಕುತಿಮ್ಮ ಗೆಲ್ಲುವರಾರಿಲ್ಲಿ
ಎಲ್ಲರೂ ಇಲ್ಲಿ ಮಂಗಗಳೇ ಮಾನವರಾರಿಲ್ಲಿ
ಈ ಕಡೆ ಬಿಸಿ ರಕ್ತದ ಪೊಗರು
ಆ ಕಡೆ ಬಾರಿ ಬೀಪೀ ಶುಗರು
ಹುಟ್ಟಿಸಿ ಕೆಟ್ಟೋದ ದೇವ್ರು
ಗೆಲ್ಲಲೇ ಬೇಕಂತೆ ಇಬ್ರೂ
ನೀನೆ ಹೇಳು ಇಬ್ರೂ ಗೆದ್ರೇ ಸೋಲೊವ್ನ್ ಯಾವನು
ಹೆಲೋ ಹೆಲೋ ಮಂಕುತಿಮ್ಮ
ಗೆಲ್ಲುವರಾರಿಲ್ಲಿ
ಎಲ್ಲರೂ ಇಲ್ಲಿ ಮಂಗಗಳೇ ಮಾನವರಾರಿಲ್ಲಿ

ಹುಟ್ಟಿದ ದಿನವೆ ಓಡೋಯ್ತಂತೆ ತೊಟ್ಟಿಲು ಬಿಟ್ಟು ಕೂಸು
ಮಾರಾಮಾರಿ ಜಿದ್ದಾ ಜಿದ್ದಿ
ಲೈಫು ನಿರಂತರ ರೇಸು
ಲೇ ಮಗನೆ ಓಡುವ ಮೊದಲು
ಹುಡುಕಿ ಇಟ್ಕೊ ನೆಮ್ಮದಿಯ ಅಡ್ರಸ್ಸು
ಇಲ್ಲ ಅಂದರೆ ದಿಕ್ಕು ಗೆಟ್ಟು ಆಗುವೆ ನೀ ಬದ್ಮಾಸು
ನಿನಗೆ ಕಂಬ ಹತ್ತಿ ಕರೆಂಟ್ ಮುಟ್ಟು ಅಂದವ್ನ್ ಯಾವನು
ಬಿದ್ದರೆ ಏಳು ಎದ್ದರೆ ಬೀಳು
ಸೋತರೆ ಕತ್ತೆ ಬಾಲ
ಹಳ್ಳ ದಿಣ್ಣೆ ಎರಡು ಒಂದೇ ಜಲ್ದಿ ಗೊತ್ತಗಲ್ಲ
ಈ ಗೆಲುವು ಹಿಂದೆ ಯಾರದೋ ಇಂದು ನಮ್ಮದೇ
ನಾಳೆ ಇನ್ನೊಬ್ಬನದು
ಸೋಲು ಇದ್ದರೆ ಗೆಲುವಿಗೆ ಬೆಲೆ ಹೇಂಗಪ್ಪ ಒಪ್ಕೊಳ್ಳೋದು
ಹೊಡೆದಾಡೋ ಟೈಮ್ ಒಣ ವೇದಾಂತ ಕೇಳವ್ನ್ ಯಾವನು

ಹೆಲೋ ಹೆಲೋ ಮಂಕುತಿಮ್ಮ ಗೆಲ್ಲುವರಾರಿಲ್ಲಿ
ಎಲ್ಲರೂ ಇಲ್ಲಿ ಮಂಗಗಳೇ ಮಾನವರಾರಿಲ್ಲಿ

Neene helu mankuthimma song video :

Advertisement Advertisement

Leave a Comment

Advertisement Advertisement

Contact Us