Neene guru song details
- Song : Neene Guru
- Movie : Mangalavara Rajaadina
- Singer : Puneeth Rajkumar
- Lyrics : Ghouse Peer
- Music : Ritvik Muralidhar
- Music Label : Lahari Music
Neene guru lyrics in Kannada
ನೀನೆ ಗುರು ಲಿರಿಕ್ಸ್
ನೀನೆ ಗುರು ನೀನೆ ಗುರಿ
ನೀನೆ ಗುರುತು
ಏನಿಲ್ಲಾ ನಿನ್ನ ಹೊರತು
ನೀನೆ ಬಲ ನೀನೆ ಛಲ ನೀನೆ ಸಕಲ
ಉಸಿರಲ್ಲಿ ಇರುವೆ ಬೆರೆತು
ಮುಕ್ಕೋಟಿ ದೇವರು
ಒಟ್ಟಾಗಿ ಬಂದರೂ
ಸಮವಲ್ಲ ಅಪ್ಪನ ಎದುರು
ನಾ ಎಷ್ಟೇ ಬೆಳೆದರೂ
ನಾ ಹೇಗೆ ಮೆರೆದರೂ
ಬೆನ್ನೆಲುಬು ಅಪ್ಪನಾ ಬೆವರು
ಮುಗಿಲಂತೆ ಪೋಷಿಸೋ
ಕಡಲಂತೆ ಪ್ರೀತಿಸೋ
ಆ ಕಾಮಧೇನು ನೀ ಅಪ್ಪಾ
ನೆರಳನ್ನು ನೀಡುವ ಆ ಕಲ್ಪವೃಕ್ಷ ನೀ ಅಪ್ಪಾ
ಗುಣಗಾನ ಮಾಡಲು ನಿನ್ನ
ಸಿಗೋ ಎಲ್ಲಾ ಪದಗಳು ಸಣ್ಣ
ಬಾಳೆಂಬ ರಥಕೆಂದೂ ನೀ ಸಾರಥಿ
ಹೆಗಲಲ್ಲಿ ಕೂರಿಸಿ ನನ್ನ
ತೆರೆದಿಟ್ಟೆ ಲೋಕದ ಬಣ್ಣ
ನನ್ನ ಜ್ಞಾನ ಭಂಡಾರಕೆ ನೀ ಸಾಹಿತಿ
ನಿನ್ನ ಕನಸುಗಳು ಸಾಯಿಸಿ
ನನ್ನ ಕನಸುಗಳ ಪೋಣಿಸಿ
ಕಂಡೆ ಅದರಲ್ಲೇ ನೀ ಖುಷಿ ಅಪ್ಪಾ
ನೀನು ಮಾಡಿರುವ ತ್ಯಾಗಕ್ಕೆ
ಏನು ನೀಡೋದು ಕಾಣಿಕೆ
ನಿನಗೆ ನೀನೇನೆ ಹೋಲಿಕೆ ಅಪ್ಪಾ
ನೀನೆ ಗುರು ನೀನೆ ಗುರಿ
ನೀನೆ ಗುರುತು
ಏನಿಲ್ಲ ನಿನ್ನ ಹೊರತು
ಕಡು ಕಷ್ಟ ಬಂದರೂ
ಸ್ಥಿತಿ ಹೇಗೆ ಇದ್ದರೂ
ಎದೆಯೊಡ್ಡಿ ನಿಲ್ಲುವ ಭೂಪಾ
ಪರಿವಾರ ತೂಗುತ ಪರಿಹಾರ ನೀಡುತ
ಧೃವತಾರೆಯಂತಿರೋ ದೀಪಾ
ದಣಿವನ್ನೇ ಕಾಣದ
ಬಿಡುವನ್ನೇ ಕೇಳದ
ಅಲೆಯಂತೆ ಎಂದೂ ನೀ ಅಪ್ಪಾ