Nee nanna Bhagavath geethe – Vijay yesudas , Chinmayi Lyrics
Singer | Vijay yesudas , Chinmayi |
About the song
▪ Starring – Dhananjaya, Irra Mor
▪ Directed By – Siddhartha Thatholu
▪ Produced By – Bhaskar Rashi & Ram Gopal Varma
▪ Music Composer – Ravi Shankar
▪ Lyrics – K.Kalyan
▪ Singer – Vijay Yesudas, Chinmayi
▪ Music on PRK Audio
Lyrics
ನೀ ನನ್ನ ಭಗವದ್ಹ್ ಗೀತೆ..
ನೀನೆ ಹೊಸ ಬದುಕಿನ ಗೀತೆ!
ಹೃದಯದಲ್ಲಿ ಶಾಸನ ಬರೆದಾ..
ಉದಯೋನ್ಮುಖ ಭಾವಗೀತೆ!
ಕಾಲ್ನಡಿಗೆಯ ದಾರಿ ಕೂಡಾ..
ರಾಜ ಬೀದಿ ಅಂತೆ ಆಯ್ತು!
ಮುಳ್ಳುಗಳ ಹಾದಿ ಕೂಡಾ..
ಮುತ್ತು ಚೆಲ್ಲಿ ಹೋದಂತಾಯ್ತು!
ನೀ ನನ್ನ ಭಗವದ್ಹ್ ಗೀತೆ..
ಈ ಬಾಳಿನ ಭೈರವ ಗೀತೆ!
ಕನ್ನಡದಾ ಕಹಳೆಯ ಊದೀ..
ಮೊಳಗುತಿರೋ ಪ್ರೇಮ ಗೀತೆ!
ಈ ಭೂಮಿ ಹುಟ್ಟುವ ಮೊದಲೇ..
ಹುಟ್ಟಿತ್ತು ಪ್ರೀತಿ ನಿನ ಮೇಲೆ!
ಈ ಯುಗದ ಆದಿಗು ಮೊದಲೇ..
ಕಾದಿತ್ತು ಕನಸು ಕಣ್ಣಲ್ಲೇ!
ಅಂಬರವೆಲ್ಲ ನಿನ್ನ ಬಿಂಬ ತುಂಬಿವೆ..
ನೋಡು ಸೂರ್ಯ ಚಂದ್ರ ಜಂಬ ಕೊಚ್ಚಿ ಕೊಂಡಿವೆ!
ನಿನ್ನ ಉಸಿರಾಟ ನನಗೆ ದಿನ ಧರ್ಷಿಕೆ..
ನಿನ್ನ ನಗುವೇ ನನ್ನ ಗೆಲುವಿಗೊಂದು ಶೀರ್ಷಿಕೆ!
ನೀ ನನ್ನ ಭಗವದ್ಹ್ ಗೀತೆ..
ನೀನೆ ಹೊಸ ಬದುಕಿನ ಗೀತೆ!
ಕನ್ನಡದಾ ಕಹಳೆಯ ಊದೀ..
ಮೊಳಗುತಿರೋ ಪ್ರೇಮ ಗೀತೆ!
ಉಚ್ವಾಸ ನಾನಾಗಿರುವಾಗ..
ನಿಶ್ವಾಸ ನೀನೆ ಕೊನೆವರೆಗೂ!
ಅನಿರೀಕ್ಷ ಸಂಗತಿ ಬರುವಾಗ..
ವಿಶ್ವಾಸ ನೀನೆ ಮನೆವರೆಗೂ!
ಈ ಗುಂಡಿಗೆಯ ಪ್ರತಿ ಸದ್ದು ನಿನ್ನದೇ..
ಈ ಅಧ್ಯಾಯಕ್ಕೆ ಕೊನೆ ಮೊದಲೆಲ್ಲಿದೆ?!
ಕಾಲ ಚಕ್ರ ನಮ್ಮ ಕಾಲಿಗೆ ಚಕ್ರವಾಗಿದೆ..
ನಡಿ ನಾಳೆಗಳಿಗೆ ಬಣ್ಣ ಹಚ್ಚಬೇಕಿದೆ!
ನೀ ನನ್ನ ಭಗವದ್ಹ್ ಗೀತೆ..
ನೀನೆ ಹೊಸ ಬದುಕಿನ ಗೀತೆ!
ಕನ್ನಡದಾ ಕಹಳೆಯ ಊದೀ..
ಮೊಳಗುತಿರೋ ಪ್ರೇಮ ಗೀತೆ!
ಕಾಲ್ನಡಿಗೆಯ ದಾರಿ ಕೂಡಾ..
ರಾಜ ಬೀದಿ ಅಂತೆ ಆಯ್ತು!
ಮುಳ್ಳುಗಳ ಹಾದಿ ಕೂಡಾ..
ಮುತ್ತು ಚೆಲ್ಲಿ ಹೋದಂತಾಯ್ತು!