Nee hoda Daari lyrics ( ಕನ್ನಡ ) – Arfaz ullal – super cine lyrics

Nee hoda Daari – Arfaz Ullal Lyrics

Singer Arfaz Ullal

Nee hoda Daari song details – Arfaz ullal

▪Album : Nee Hoda Daari
▪Singer : Arfaz Ullal
▪Rap : Yemzi
▪Lyrics : Junaid Belthangady
▪Music : Nazeebbillu

Nee hoda Daari song lyrics in Kannada – Arfaz ullal

ನೀ ಹೋದ ದಾರಿ

ಬದಲಾಗೊ ಮನಸ್ಸಿನ ಬಣ್ಣ
ಕಣ್ಣಾರೆ ಕಾಣಲು
ನಿಜವನ್ನೆ ಅರಿಯದ ಹೆಣ್ಣ
ಮನಸಾರೆ ನಂಬಲು
ಯಾರಿಲ್ಲದ ಕತ್ತಲ ಲೋಕದಲಿ
ಬೆಳಕಾಗಿ ಬಂದೆ ನೀ ಬದುಕಲ್ಲಿ
ಸುಳ್ಳಿನ ಗೋಪುರ ಇಲ್ಲಿ ನೀ
ನೀ ಸಾಗುವ ದಾರಿ ಮುಳ್ಳಂತೆ ಕಾಣಲು
ಈ ಕಾಡೊ ಮೌನ ಅವಳನ್ನೆ ಜಪಿಸಲು
ನೀ ಅಂದ ಸುಳ್ಳು ಕಾಡಿಸಿಯೇ ಕೊಲ್ಲಲು
ನೀ ಕೊಟ್ಟ ನೆನಪು ಅಲೆದಾಡಿ ಸಾಯಲು

ನೀನಂತು ಕೊಟ್ಟ ಭಾಷೆ ಎಂದು ನೋಡು ಮರೆಯೊಲ್ಲ
ಒಟ್ಟಿಗೆ ಕಳೆದ ದಿನಗಳು ಎಂದು ಮರಳಿ ಬರೋದಿಲ್ಲ
ನೀನಾಡಿದ ಮಾತುಗಳಿನ್ನು ತಿರುಗುತ್ತಿದೆ ಮನಸಲ್ಲೇ

ಕನಸಲ್ಲೂ ನನಸಲ್ಲು
ನಿನ್ನ ಮುಖವ ನೋಡೋದಿಲ್ಲ
ಅಂತ ನನ್ನಷ್ಟಕ್ಕೆ ನಾನು ಸುಮ್ಮನೇ ಕೂತ್ರೆ
ಯಾಕೊ ಏನೊ
ಆ ನಿನ್ನ ಮುಖವೆ
ನನ್ನ ಕಣ್ಣ ಮುಂದೆ ಬರುತ್ತಿದೆ

ಕಣ್ಣೀರ ಒರೆಸಿ ನನ್ನ ಕಣ್ಣನಾದ್ರು ಮುಚ್ಚಿದರೂ
ಕೊಲೆಗಾರ್ತಿ ನಿನ್ನ ಕಣ್ಣುಗಳು ನನ್ನ ನೋಡಿ ನಗುತ್ತಿದೆ
ನೀನಾಡಿದ ಆಟ ನೋಡು
ಕೊಡುತ್ತಿದೆ ಕಾಟ ನೋಡು
ಸಾಕಮ್ಮ ನಿಲ್ಸು ನನಗೆ ಸಾಧ್ಯವಿಲ್ಲ ನಿಲ್ಸಿ ಬಿಡು
ನಾ ಪ್ರೀತಿ ಮಾಡೋದಿಲ್ಲ ನಿನ್ನನ್ನ ನೆನೆಯೋದಿಲ್ಲ
ಭಗವಂತ please ನನ್ನ ಹೃದಯ ಕಲ್ಲು ಮಾಡಿ ಬಿಡು

ಮಾಡದ ತಪ್ಪಿಗೆ ಶಿಕ್ಷೆ ಇದು
ಕಣ್ಣೀರವಳಿಗೆ ಭಿಕ್ಷೆಯದು
ಪ್ರೀತಿಯ ಬೆಳಕಿನ ದೀಪದಲಿ
ಹಚ್ಚಿದ ನೋವಿನ ಬೆಂಕಿಯದು
ಹೋಲಿಕೆ ಅವಳಿಗೆ ಸಾಲಲ್ಲ
ಹಾಡಲು ಪದಗಳು ಸಿಗುತ್ತಿಲ್ಲ
ಕಲೆಯೂರಿದ ಆ ಹೆಗಲಲ್ಲಿ
ಸ್ಪರ್ಶವೂ ಎಂದಿಗೂ ಮಾಯಲ್ಲ

ನಾ ಅರಿಯದೆ ನಂಬಿದ ಮುಗ್ಧತೆಗೆ
ಹಾಕಿಹಳು ಜೀವನದ ಚಿತೆಗೆ
ಅನುಭವಿಸುವೆ ನಿನದೂ…
ನೀ ಸಾಗೊ ದಾರಿ ಮುಳ್ಳಂತೆ ಕಾಣಲು
ಈ ಕಾಡೊ ಮೌನ ಅವಳನ್ನೆ ಜಪಿಸಲು
ನೀ ಅಂದ ಸುಳ್ಳು ಕಾಡಿಸಿಯೇ ಕೊಲ್ಲಲು
ನೀ ಕೊಟ್ಟ ನೆನಪು ಅಲೆದಾಡಿ ಸಾಯಲು

ನಗುವನು ಮರೆತ ಜೀವವಿದು
ಯಾರಲೂ ಎನನೂ ಆಶಿಸದು
ನಂಬಿಕೆಯ ಹುಡುಕಾಟದ ಮೇಲೆ
ಮುಂದಿನ ದಿನವನು ಕಳೆಯುವುದು
ಮೌನತೆ ಎಂಬ ಜಗದಲ್ಲಿ
ರಾಜನು ನಾನು ನನಗಿಲ್ಲಿ
ಮೋಸವು ಎಂಬ ಜೋಕಾಲಿ
ಕಟ್ಟಿ ತೂಗಿಹಳು ಎದೆಯಲ್ಲಿ
ಹೋಲಿಕೆಯ ಮಾಡಿದೆ ದೇವತೆಗೆ
ನಡೆಯುವಳು ಯಾರ್ಯಾರ ಜೊತೆಗೆ
ನಾಯಕ ನಾನೆ ಈ ಕಥೆಗೆ

ನೀ ಸಾಗೊ ದಾರಿ ಮುಳ್ಳಂತೆ ಕಾಣಲು
ಈ ಕಾಡೊ ಮೌನ ಅವಳನ್ನೇ ಜಪಿಸಲು
ನೀ ಅಂದ ಸುಳ್ಳು ಕಾಡಿಸಿಯೆ ಕೊಲ್ಲಲು
ನೀ ಕೊಟ್ಟ ನೆನಪು ಅಲೆದಾಡಿ ಸಾಯಲು

Leave a Comment

Contact Us