Nee hinga nodabyada – Sangeetha Rajeev Lyrics
Singer | Sangeetha Rajeev |
Nee hinga nodabyada song details – Sangeetha Rajeev
▪ Song : Nee hinga nodabyada
▪ Singer : Sangeetha Rajeev
▪ Lyrics : Pradyumna Narahalli
Nee hinga nodabyada song lyrics in Kannada – Sangeetha Rajeev
ನೀ ಹಿಂಗ ನೋಡಬ್ಯಾಡ ಲಿರಿಕ್ಸ್
ನೀ ಹಿಂಗ ನೋಡಬ್ಯಾಡ ನನ್ನ
ಕಣ್ಣಲ್ಲಿ ಕಾಡ್ತೀಯ ಚಿನ್ನ
ನೀ ಹಿಂಗ ನೋಡಬ್ಯಾಡ ನನ್ನ
ನಾವ್ ಈಗ ದೂರ ಇದ್ರೆ ಚೆನ್ನ
ನೀ ಹಿಂಗ ನೋಡಬ್ಯಾಡ ನನ್ನ
ಕಣ್ಣಲ್ಲಿ ಕಾಡ್ತೀಯ ಚಿನ್ನ
ನೀ ಹಂಗ ನೋಡಬ್ಯಾಡ ನನ್ನ
ನಾವ್ ಈಗ ದೂರ ಇದ್ರೆ ಚೆನ್ನ
ಕದ್ದು ಕದ್ದು ಫೋನ್ ಹಚ್ಚುತಿ
ಮುದ್ದು ಮುತ್ತು ಅಂತ ಕಾಡುತಿ
ಒಂದೊಂದಂತೆ ತಂಟೆ ಮಾಡುತಿ
ತುಂಟಾಟ ದೊರೆ ಆಗುತಿ….
ಕನ್ಯೆ ಆಸೆ ಪೂರ ಮಾಡೊ ಹೈದ ನನ್ನವ
ಸನ್ನೆಯಾಗೆ ಎಲ್ಲಾ ಹೇಳೊ ಶಾನ್ಯ ನನ್ನವ
ಮಾತು ಮಾತಲ್ಲೇ
ಕುಂತು ಕುಂತಲ್ಲೇ ಎಲ್ಲರ ಗೆಲ್ಲೋ ಕುವರ…
ನೀ ಹಿಂಗ ನೋಡಬ್ಯಾಡ ನನ್ನ
ಕಣ್ಣಲ್ಲಿ ಕಾಡ್ತೀಯ ಚಿನ್ನ
ನೀ ಹಂಗ ನೋಡಿದರ ನನ್ನ
ಲಗೂನ ಆಗಬೇಕು ಲಗ್ನ
ಕೋಟಿ ಕೋಟಿಯಲ್ಲೇ, ಲೋಕಬಂಧಿ ಆಗಿಹೋಗಿತೆ
ಪ್ರೀತಿ ಗೀತಿಗ್ ಇಲ್ಲಿ, ನಾಕಬಂಧಿ ಸಿದ್ದವಾಗಿತೆ
ಚುಡಾಯಿಸೋರ ಕಿಚಾಯಿಸೋರ
ಮುಂಡಾಸು ಮಣ್ಣು ಮಸಿ
ಸಂಭಾಳಿಸೋರ ನಿಭಾಯಿಸೋರ
ಕಂಡಾಗ ಬಾಳ ಖುಷಿ
ಊರಿಗೂರೆ ಹೊಗಳೊ ಹಂಗ
ಒಂದಾಗಿರಬೇಕ
ಪೂರಿ ಬಜ್ಜಿ ಜೋಡಿ ಯಂಗ
ಮಸ್ತಾಗಿರಬೇಕ
ತಾಳಿ ಕಟ್ಟೊ ತಂಕ ತಾಳಬೇಕ,
ಕಾಯೋದು ಬಾಳ ಸುಖ
ನೀ ಹಿಂಗ ನೋಡಬ್ಯಾಡ ನನ್ನ
ಕಣ್ಣಲ್ಲಿ ಕಾಡ್ತೀಯ ಚಿನ್ನ
ನೀ ಹಿಂಗ ನೋಡಬ್ಯಾಡ ನನ್ನ
ನಾವ್ ಈಗ ದೂರ ಇದ್ರೆ ಚೆನ್ನ
ನೀ ನನ್ನ ಚೆನ್ನಯ್ಯ, ನಾ ನಿನ್ನ
ಚೆನ್ನರಸಿ
ಆಸೀಯ ಮುಂದಾಕಿ, ಸ್ವಲ್ಪ ತಡ್ಕ ರೀ
ಆಷಾಡ ಜಾರಿ ಶ್ರಾವಣ ತೋರೊ ಮುಹೂರ್ತ ಬರೋದಾರಿ
ಡಂಗೂರ ಸಾರಿ ಊರೂರೆ ಸೇರಿ, ಸೀಊಟ ಮಾಡೊ ಪರಿ
ಜಟ್ಟಿ ಮೀಸೆ ಮಣ್ಣು ಮಾಡೊ ವೀರ ಹಮ್ಮೀರ
ರೊಟ್ಟಿ ಮ್ಯಾಲ ಬೆಣ್ಣೆ ಹಂಗ ಕರಗೊ ಸರದಾರ
ಮತ್ತೂಂದು ಸಾರಿ ತನ್ನಾಸೆ ಮೀರಿ ಮನಸನ್ನು ಕದ್ದ ಮದನ…
ನೀ ಹಿಂಗ ನೋಡಬ್ಯಾಡ ನನ್ನ
ಕಣ್ಣಲ್ಲಿ ಕಾಡ್ತೀಯ ಚಿನ್ನ
ನೀ ಹಿಂಗ ನೋಡಬ್ಯಾಡ ನನ್ನ
ನಾವ್ ಈಗ ದೂರ ಇದ್ರೆ ಚೆನ್ನ
ನೀ ಹಿಂಗ ನೋಡಬ್ಯಾಡ ನನ್ನ
ಕಣ್ಣಲ್ಲಿ ಕಾಡ್ತೀಯ ಚಿನ್ನ
ನೀ ಹಂಗ ನೋಡಬ್ಯಾಡ ನನ್ನ
ನಾವ್ ಈಗ ದೂರ ಇದ್ರೆ ಚೆನ್ನ
ನೀ ಹಿಂಗ ನೋಡಬ್ಯಾಡ ನನ್ನ
ಕಣ್ಣಲ್ಲಿ ಕಾಡ್ತೀಯ ಚಿನ್ನ
ನೀ ಹಂಗ ನೋಡಿದರ ನನ್ನ
ಲಗೂನ ಆಗಬೇಕು ಲಗ್ನ..