Nara mansa song details
- Song : Nara mansa
- Singer : Hariharan
- Music : V Harikrishna
- Movie : Navagraha
- Label : Anand audio
Nara mansa lyrics in Kannada
ನರ ಮನ್ಸ ನರ ಮನ್ಸ ಬದುಕೋದು ಹೀಗಲ್ಲಾ
ಕಲಿಸೋಕೆ ಯಾರೂ ಇಲ್ಲಾ
ನರ ಮನ್ಸ ನರ ಮನ್ಸ ನಿಂದೇನು ನಡೆಯೋಲ್ಲ
ಅವನಿಷ್ಟದಂಗೆ ಎಲ್ಲಾ
ಬರೀಗೈಲೇ ಬರೋದು ಬರೀಗೈಲೇ ಹೋಗೋದು
ತಿಳಿದಾಗ ನೀನೇ ಬುದ್ಧನೂ
ಕಳಬೇಡ ಕೋಲಬೇಡ ಈ ವಚನ ಮರಿಬೇಡ
ಸುಮ್ ಸುಮ್ನೇ ಮೆರಿಬೇಡವೋ
ನರಮೇಧವ ಶುರು ಮಾಡಿದ ನರ ರಾಕ್ಷಸ ಯಾರೊ
ಅಭಿಮಾನದ ಒಳ ಸಂಚನು ನಡೆಸೋನು ಯಾರೋ
ಪಾಪಿಗಳ ಸಂತೇಯಲ್ಲೀ ಪ್ರಾಣಕೆ ಬೆಲೆಯೇ ಇಲ್ಲ
ನಿನ್ನೋರು ಅನ್ನೋರೇ ಇಲ್ಲಾ
ನರ ಮನ್ಸ ನರ ಮನ್ಸ ಪ್ರೀತಿನೇ ಉಸಿರಾಟ
ತಿಳಿದೋನಿಗೇನೇ ಬಾಳೂ…
ನರ ಮನ್ಸ ನರ ಮನ್ಸ ಪ್ರೀತಿನ ಮರೀಬೇಡ
ಮರೆತೋನಿಗೆಲ್ಲಾ… ಶೂನ್ಯ
ಸುಖ ನೆಮ್ಮದಿ ಹಣದಲ್ಲಿದೆ ಅಂದುಕೊಂಡರೇ ಮೋಹ
ನಿನ್ನ ನಾಳೆಯು ಹಣೆಯಲ್ಲಿದೆ ಅರಿವಾದರೇ ಸ್ನೇಹಾ
ಆಸೇಗೆ ಬದುಕೋರೆಲ್ಲಾ ಮಣ್ಣಾಗಿ ಹೋಗೋರೆ
ನಿಂದೂನು ಅಷ್ಟೇ ತಾನೇ…
ನರ ಮನ್ಸ ನರ ಮನ್ಸ ಬದುಕೋದು ಹೀಗಲ್ಲಾ
ಕಲಿಸೋಕೆ ಯಾರೂ ಇಲ್ಲಾ
ನರ ಮನ್ಸ ನರ ಮನ್ಸ ನಿಂದೇನು ನಡೆಯೋಲ್ಲ
ಅವನಿಷ್ಟದಂಗೆ ಎಲ್ಲಾ
ಬರೀ ಗೈಲೇ ಬರೋದು ಬರೀ ಗೈಲೇ ಹೋಗೋದು
ತಿಳಿದಾಗ ನೀನೇ ಬುದ್ಧನೂ
ಕಳಬೇಡ ಕೋಲಬೇಡ ಈ ವಚನ ಮರಿಬೇಡ
ಸುಮ್ ಸುಮ್ನೇ ಮೆರಿಬೇಡವೋ