Nannavalu nannavalu song details
- Song : Nannavalu nannavalu
- Singer : K S Chithra
- Lyrics : K Kalyan
- Movie : My autograph
- Music : Rajesh Krishnan
- Label : Ashwini audio
Nannavalu nannavalu lyrics in Kannada
ನನ್ನವಳು ನನ್ನವಳು ನನಗಿಲ್ಲ
ನಂಬಿಕೊಂಡ ಪ್ರೀತಿಯೊಂದು ಜೊತೆ ಇಲ್ಲ
ಆಸೆ ಇಂದ ಕಾಣುತಿದ್ದ ಕನಸುಗಳು
ಅತ್ತು ಅತ್ತು ಕಣ್ಣೀರಾಗಿ ಕರಗಿತಲ್ಲ
ತಾಯಿ ತಂದೆ ಮಾತಿಗೆ ನನ್ನ ಮರೆತು
ಪ್ರೀತಿಯ ಕಾಲ್ಕಸವಾಗಿ ಎಸದು
ದೂರ ತಳ್ಳಿ ಹೋದವಳೇ
ನಿನ್ನ ಹಾಗೆ ನಾನು ಹೇಗಿರಲೇ
ಕೈಯ ಮುಗಿವೆ ನನ್ನ ಮರೆಯದಿರು
ಕಾರಣ ನೀನೆ ನನ್ನುಸಿರು
ನನ್ನವಳು ನನ್ನವಳು ನನಗಿಲ್ಲ
ನಂಬಿಕೊಂಡ ಪ್ರೀತಿಯೊಂದು ಜೊತೆ ಇಲ್ಲ
ಆಸೆ ಇಂದ ಕಾಣುತಿದ್ದ ಕನಸುಗಳು
ಅತ್ತು ಅತ್ತು ಕಣ್ಣೀರಾಗಿ ಕರಗಿತಲ್ಲ
ಬಾಳು ಎಂಬ ಪುಸ್ತಕದ ಪುಟ ತೆರೆದು
ಮನಸಾರೆ ಪ್ರೀತಿಯನ್ನು ಪದ ಬರೆದೆ
ಗೀಚಿದಂಥ ಲೇಖನಿ ಕಣ್ಣು ಕುಕ್ಕಿತು
ಮೇಣದಲ್ಲಿ ಮನೆ ಕಟ್ಟಿ ದೀಪ ಹಚ್ಚಿದೆ
ಆ ಪ್ರೀತಿ ಬೆಳಕಲ್ಲಿ ಕಣ್ಣು ಮುಚ್ಚಿದೆ
ರೆಪ್ಪೆ ತೆರೆಯೋ ಮುಂಚೆ ಎಲ್ಲ ಸುಟ್ಟು ಹೋಯಿತೇ
ನಿಂತಿರೋ ಕಡೆಯೇ ಭೂಕಂಪ ಇಲ್ಲಿ ಯಾರಿಗೆ ಬೇಕೋ ಅನುಕಂಪ
ಸಾವಿರ ಸಿಡಿಲ ನಡುವಲ್ಲೂ ಬೆಳದಿಂಗಳ ಹುಡುಕೋದೇ ಶಾಪ
ಪ್ರೀತಿಗೆ ಎಂದಿಗೂ ಸೋಲಿಲ್ಲ
ಅನ್ನೋ ಗಾದೆಯು ತಪ್ಪಾಗಿ ಹೊಯ್ತಲ್ಲ
ನಾನೇ ನನಗೆ ಬೇಕಿಲ್ಲ
ಕಾರಣ ಪ್ರೀತಿಗೆ ಕಣ್ಣಿಲ್ಲ
ನನ್ನವಳು ನನ್ನವಳು ನನಗಿಲ್ಲ
ನಂಬಿಕೊಂಡ ಪ್ರೀತಿಯಿನ್ನು ಜೊತೆ ಇಲ್ಲ
ಆಸೆ ಇಂದ ಕಾಣುತಿದ್ದ ಕನಸುಗಳು
ಅತ್ತು ಅತ್ತು ಕಣ್ಣೀರಾಗಿ ಕರಗಿತಲ್ಲ
ತಾಯಿ ತಂದೆ ಮಾತಿಗೆ ನನ್ನ ಮರೆತು
ಪ್ರೀತಿಯ ಕಾಲ್ಕಸವಾಗಿ ಎಸದು
ದೂರ ತಳ್ಳಿ ಹೋದವಳೇ
ನಿನ್ನ ಹಾಗೆ ನಾನು ಹೇಗಿರಲೇ
ಕೈಯ ಮುಗಿವೆ ನನ್ನ ಮರೆಯದಿರು
ಕಾರಣ ನೀನೆ ನನ್ನುಸಿರು