Nanna Preethi kusuri – Vijay Prakash Lyrics
Singer | Vijay Prakash |
Nanna Preethi kusuri song details.
▪ Movie : Simpallaag Ond Love Story
▪ Song: Nanna Preethi Kusuri
▪ Singer: Vijay Prakash
▪ Starring : Rakshith Shetty, Shwetha
▪ Lyrics :Suni
▪ Music : Bharath B J
Nanna Preethi kusuri song lyrics in Kannada
ನನ್ನ ಪ್ರೀತಿ ಕುಸುರಿ ಚೂರಾಯ್ತು
ಚೂರಾದ ವರದಿ ಬಯಲಾಯ್ತು
ಬಯಲಾದ ಕಣ್ಣ ಹನಿ
ಕೂಡಿ ಇಡಲೆ
ಕೂಡಿಟ್ಟ ಕನಸು ಕರಗೋಯ್ತು
ಕರಗೋದ ಹೃದಯ ಸಾವಾಯ್ತು
ಸಾವಲ್ಲೂ ಸುಖವೊಂದನ್ನು ನಾ ಹೊಸೆಯಲೇ
ಹೊಸೆದಂತ ಭೂಮಿ ಹದವಾಯ್ತು
ಹದವಾದ ಬೆಳೆಯು ಬೆಳೆದಾಯ್ತು
ಬೆಳೆದೋದ ಪ್ರೀತಿ ತೆನೆ ಬರಿದಾಯಿತು
ಬರಿ ಭಾವನೆ ಹಳೆ ಪ್ರಾರ್ಥನೆ
ಸುರಿ ಮಳೆಯನೆ ಸಂಪಾದನೆ
ಸಂಪಾದನೆ ಸಂವೇದನೆ
ಕಣ್ಣೀರ ಸಂಭಾವನೆ
ಸವಿ ಭಾವ ಚೆಲುವೆಯೆ ಅವಳು
ಅವಳನೆ ಕಳೆದೋದರು
ನನ್ನ ಪ್ರೀತಿ ಕುಸುರಿ ಚೂರಾಯ್ತು
ಚೂರಾದ ವರದಿ ಬಯಲಾಯ್ತು
ಬಯಲಾದ ಕಣ್ಣ ಹನಿ ಕೂಡಿ ಇಡಲೇ….