Naariya seere kadda lyrics ( ಕನ್ನಡ ) – Daari thappida Maga

Naariya seere kadda song details

  • Song : Naariya seere kadda
  • Singer : Dr Rajkumar
  • Lyrics : R N Jayagopal
  • Movie : Daari thappida maga
  • Music : G K Venkatesh

Naariya seere kadda lyrics in Kannada

ಕೃಷ್ಣ….ಮುರಾರಿ…..ಯಮುನಾ ತೀರ ವಿಹಾರಿ
ಗೋಪಿ ಮಾನಸ ಹಾರಿ….ಶೌರಿ….ಶೌರಿ
ಬೋಲೋ ಶ್ರೀ ಕೃಷ್ಣ ಪರಮಾತ್ಮಕಿ

ನಾರಿಯ ಸೀರೆ ಕದ್ದ ರಾಧೆಯ ಮನವ ಗೆದ್ದ
ಕಳ್ಳರ ಕಳ್ಳ ಕೃಷ್ಣನು ಬಂದ
ಮೋಹದ ಮೋಡಿ ಹಾಕಿದ
ಕೃಷ್ಣ ………ಮುರಾರಿ……

ಮಗುವಾಗಿರುವಾಗ ಬೆಣ್ಣೆಯ ಕದ್ದ
ಮಣಿಯೊಡನೆ ರಮಣಿ ಭಾಮೆಯ ಗೆದ್ದ
ಮದುವೆ ಮನೆಗೆ ನುಗ್ಗಿ, ಏನ್ ಮಾಡ್ದ ಗೊತ್ತೇ
ರುಕ್ಮಿಣಿಯ ಕದ್ದ
ನರಕಾಸುರನ ಕೊಂದು ಹದಿನಾರು ಸಾವಿರ ನಾರಿಯರ ಗೆದ್ದ
ಅಹಹ…ಹುದಪ್ಪ
ಕದ್ದ ಗೆದ್ದ, ಗೆದ್ದ ಕದ್ದ…..

ನಾರಿಯ ಸೀರೆ ಕದ್ದ ರಾಧೆಯ ಮನವ ಗೆದ್ದ
ಕಳ್ಳರ ಕಳ್ಳ ಕೃಷ್ಣನು ಬಂದ
ಮೋಹದ ಮೋಡಿ ಹಾಕಿದ

ಯಮುನಾ ತೀರದಲಿ ತಣ್ಣನೆ ಗಾಳಿಯಲಿ
ರಾಧೆ ಕಾದಿರಲು ಮೆಲ್ಲನೆ
ಕೊಳಲನೂದುತಲಿ ಮನವ ಕೆಣಕುತಲಿ
ಕಂಡು ಕಾಣಿಸದೆ ಮೋಹನ
ಆಡಿ ಓಡಿದನು
ಬೋಲೋ ಶ್ರೀ ಕೃಷ್ಣ ಪರಮಾತ್ಮಕಿ

ನಾರಿಯ ಸೀರೆ ಕದ್ದ ರಾಧೆಯ ಮನವ ಗೆದ್ದ
ಕಳ್ಳರ ಕಳ್ಳ ಕೃಷ್ಣನು ಬಂದ
ಮೋಹದ ಮೋಡಿ ಹಾಕಿದ

ಕೃಷ್ಣ ಎಲ್ಲಿರುವೆ ಏಕೆ ಕಾಡಿರುವೆ
ವಿರಹದಿ ನೊಂದಿರುವೆ ಕಾಣದೆ
ರಾಧ ಮೋಹನನೆ ಬಾರೋ ಮಾಧವನೆ
ಎಂದು ಕೂಗಿರಲು ಬಂದು
ತನುವ ಬಳಸಿ ನಿಂದನು

ನಾರಿಯ ಸೀರೆ ಕದ್ದ ರಾಧೆಯ ಮನವ ಗೆದ್ದ
ಕಳ್ಳರ ಕಳ್ಳ ಕೃಷ್ಣನು ಬಂದ
ಮೋಹದ ಮೋಡಿ ಹಾಕಿದ

ಕೃಷ್ಣ ಎನ್ನಿ ರಾಮ ಎನ್ನಿ
ಮುಕುಂದ ಎನ್ನಿ ಗೋವಿಂದ ಎನ್ನಿ
ರಾಧೆ ಕೃಷ್ಣ ಜೈ ಜೈ ಕೃಷ್ಣ ……

Naariya seere kadda song video :

Leave a Comment

Contact Us