Naa tumba hosaba bossu song details
- Song : Naa tumba hosaba bossu
- Singer : Shashank Sheshagiri
- Lyrics : Dr V Nagendra prasad
- Movie : Padde huli
- Music : B Ajaneesh loknath
Naa tumba hosaba bossu lyrics in Kannada
ನಾ ತುಂಬಾ ಹೊಸಬ ಬಾಸು ಸಾಂಗ್ ಲಿರಿಕ್ಸ್
ನಾ ತುಂಬಾ ಹೊಸಬ ಬಾಸು
ನಾ ಮಿಕ್ಸು ಕ್ಲಾಸು ಮಾಸು
ನನಗಿಲ್ಲ ಯಾವ ರೇಸು
ನಗಾರಿ ಬಾರಿಸು
ಕರುನಾಡ ಹೃದಯ ಜಯಿಸು
ಶ್ರೀ ರಾಮ ಅಲ್ಲ ಏಸು
ಮಾಡ್ತಾರೆ ನಿನ್ನ ಬಾಸು
ಅಂದ್ರು ನಮ್ ಬಾಸು!
ವೀರತನದ ಚರಿತೆ ಬರೆದ
ಊರು ನಮ್ಮದು.. ಈ ಚಿತ್ರದುರ್ಗವು!
ನಾನು ಇದರ ಪ್ರೀತಿ ಹೃದಯ
ಕರುನಾಡಿಗೆ ಈ ಜನ್ಮವು
ನಿ ವಿಷ್ಣುದಾದ ಫ್ಯಾನು! ರಾಮಚಾರಿ
ನಾಗರ ಹಾವಿನ ರಾಮಚಾರಿ
ನನ್ನ ಬೆನ್ನ ಹಿಂದೆ ನಿಂತು, ಬೆನ್ನು ತಟ್ಟಿದರು
ಪ್ರೀತಿಗೆ ಪ್ರೀತಿಯ ನೀಡೋ ಜನ
ನೀವು ನಿಮ್ಮ ಸ್ನೇಹ, ಪ್ರೀತಿ ಎಂದೂ ನನ್ನುಸಿರು
ರಾಮಚಾರಿ! ರಾಮಾಚಾರಿ!
ಈ ಕೋಟೆಯ ಇತಿಹಾಸವೇ
ರೋಮಾಂಚಕ.. ಕಾವ್ಯಾತ್ಮಕ
ಸಿರಿಗನ್ನಡ ಸಿರಿದೇವಿಗೆ
ನಾನಾದೆನು ಆರಾಧಕ
ಜಾನಪದವೇ ಜೀವಪದವು
ದಾಸ-ಶರಣ ಬಾಳಿನ ಪಥವು
ವೀರತನಕೆ ಭೂಮಿಯೊಳಗೆ
ಮೊದಲ ಸ್ಥಾನ ಕರುನಾಡಿಗೆ…
ಓಬವ್ವ ನಮ್ ಅವ್ವ
ಭಾರತ ಮಾತೆಗೆ ಕೆಂಪು ಹಣೆ ಬೊಟ್ಟು
ಕೆನ್ನೆ ತುಂಬಾ ಹಳದಿ, ನಮ್ಮ ಬಾವುಟ
ಕನ್ನಡ ಮಾತೆಗೆ ನನ್ನ ಪ್ರಾಣ ಕೊಟ್ಟು
ಕಾಯೋ ಯೋಧ ನಾನು ನಂದೆ ಭೂಪಟ!
ಪುಣ್ಯ ಮಾಡಿರಬೇಕು ಕನ್ನಡ ನಾಡಲ್ ಹುಟ್ಟಲು
ಕನ್ನಡ ಮಣ್ಣು ಮೆಟ್ಟಲು
ಕನ್ನಡ ನೆಟ್ಟು ದ್ವೇಷ ಅಸೂಯೆ ಸುಟ್ಟು ಕೋಪವು ಬಿಟ್ಟು
ಒಗ್ಗಟ್ಟಿಂದ ಸಹಬಾಳ್ವೆ ಬಾಳೋಣ ಓ ಓ…
ಮರಿಬೇಡ ನಾಡನ್ನು ಎಂದೂ
ಓ ಓ
ಗಂಧಧ ಗುಡಿ ಇದೆಂದೂ
ಎಲ್ಲೇ ಹೋದರು ಏನೆ ಆದರೂ
ಎಂದೆಂದೂ ನೀ ಕನ್ನಡವಾಗಿರು
ಪಂಪ, ರನ್ನ, ದರ ಬೇಂದ್ರೆ ನಾಡಿದು
ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ನಾಡಿದು
ನಾಡನ್ನು ಕಟ್ಟಿರುವವರು ಅವರು
ಅವರೊಡಲು ಹೊಡೆಯಲು ನಮಗ್ಯಾರಿಗಿಲ್ಲ ಹಕ್ಕು
ಅಯೇ….
ಕಮ್ ಆನ್!
ನಾ ತುಂಬಾ ಹೊಸಬ ಬಾಸು ನಾ ಮಿಕ್ಸು ಕ್ಲಾಸು ಮಾಸು
ನನಗಿಲ್ಲ ಯಾವ ರೇಸು
ನಗಾರಿ ಬಾರಿಸು
ಕರುನಾಡ ಹೃದಯ ಜಯಿಸು
ಶ್ರೀ ರಾಮ ಅಲ್ಲ ಏಸು ಮಾಡ್ತಾರೆ ನಿನ್ನ ಬಾಸು
ಅಂದೋರು ನಮ್ ಬಾಸು
ವೀರತನದ ಚರಿತೆ ಬರೆದ ಊರು ನಮ್ಮದು ಈ ಚಿತ್ರದುರ್ಗವು
ನಾನು ಇದರ ಪ್ರೀತಿ ಹೃದಯ
ಕರುನಾಡಿಗೆ ಈ ಜನ್ಮವು
ನಾ ವಿಷ್ಣುದಾದ ಫ್ಯಾನ್