Mugulu nage title track details
- Song : Mugulu nage title track
- Singer : Sonu nigam
- Lyrics : Yogaraj bhat
- Movie : Mugulu nage
- Music : V Harikrishna
- Label : D beats
Mugulu nage title track lyrics in Kannada
ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..
ತುಸು ಬಿಡಿಸಿ ಹೇಳು ನನಗೆ, ನನ್ನ ತುಟಿಯೆ ಬೇಕೇ ನಿನಗೆ,
ನನ್ನೆಲ್ಲ ನೋವಿಗೆ ನಗುವೇ ನೀನೇಕೆ ಹೀಗೆ..?
ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ..!
ಯಾಕಾಗಿ ನೀ ಮರೆಮಾಚುವೆ ನನ್ನೆಲ್ಲ ಭಾವುಕತೆ..!
ಸೋತಂತಿದೆ ಸಂಭಾಷಣೆ ಗೆಲ್ಲುವುದು ನಿನಗೆ ಹೊಸತೇ..?
ಅಳುವೊಂದು ಬೇಕು ನನಗೆ ಅರೆ ಗಳಿಗೆ ಹೋಗು ಹೊರಗೆ,
ಇಷ್ಟೊಳ್ಳೆ ಸ್ನೇಹಿತನಾಗಿ ಕಾಡಿದರೆ ಹೇಗೆ..?
ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ ನೀನೇಕೆ ಜೊತೆಗಿರುವೆ..?
ಕಣ್ಣಾಲಿಯಾ ಜಲಪಾತವಾ ಬಂಧಿಸಲು ನೀ ಯಾರು..?
ನೀ ಮಾಡುವ ನಗೆ ಪಾಟಲು ಖಂಡಿಸಲು ನಾ ಯಾರು..?
ಸಂತೋಷಕು ಸಂತಾಪಕೂ ಇರಲಿ ಬಿಡು ಒಂದೇ ಬೇರು
ಕಂಗಳಲಿ ಬಂದಾ ಮಳೆಗೆ ಕೊಡೆ ಹಿಡಿವ ಆಸೆಯೇ ನಿನಗೆ..?
ಅತ್ತು ಬಿಡು ನನ್ನ ಜೊತೆಗೆ ನಗಬೇಡ ಹೀಗೆ..
ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..?