Modalane dinave olide song details
- Song : Modalane dinave olide
- Singer : S P Balasubhramanya , S Janaki
- Lyrics : Chi Udayashankar
- Movie : Pavana ganga
- Music : Rajan Nagendra
Modalane dinave olide lyrics in Kannada
ಮೊದಲನೆ ದಿನವೆ ಸಾಂಗ್ ಲಿರಿಕ್ಸ್
ಮೊದಲನೆ ದಿನವೆ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ
ಕಣ್ಗಳಲೆ ಮೌನದಲೇ
ಮೊದಲನೆ ದಿನವೇ ಸೋತೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಬಾಳಿನ ಲತೆಯಲಿ ಹೂವಾದೆ
ಬಾಳಿನ ಕುಸುಮಕೆ ಜೇನಾದೆ
ಬಾಳಿನ ಲತೆಯಲಿ ಹೂವಾದೆ
ಬಾಳಿನ ಕುಸುಮಕೆ ಜೇನಾದೆ
ಬಾಳ ಬಯಕೆಯು ನೀನಾದೆ
ಬಾಳಿಗಾನಂದ ನೀ ತಂದೆ
ಆಹಾಹಾ ಲಾಲಲಲಲ ಹಾಹಾ ಲಲಲಲಲ
ಪ್ರೇಮದ ಕಡಲಲ್ಲಿ ಮುತ್ತಾದೆ
ಪ್ರೇಮದ ಬದುಕಿಗೆ ಕಣ್ಣಾದೆ
ಪ್ರೇಮ ಪಲ್ಲವಿ ನೀನಾದೆ
ಪ್ರೇಮಾದಾನಂದ ನೀ ತಂದೆ
ಪ್ರೇಮಾದಾನಂದ ನೀ ತಂದೆ
ಮೊದಲನೆ ದಿನವೇ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಈ ದಿನ ಹೊಸತನ ನೀ ತಂದೆ
ನಾಳಿನ ಬದುಕಿಗೆ ಬೆಳಕಾದೆ
ಈ ದಿನ ಹೊಸತನ ನೀ ತಂದೆ
ನಾಳಿನ ಬದುಕಿಗೆ ಬೆಳಕಾದೆ
ಪ್ರಾಣ ಪದಕವೇ ನೀನಾದೆ
ನಾನು ನಿನ್ನಲ್ಲಿ ಒಂದಾದೆ
ಆ ಹಾ ಹಾ ಹಾ ಹಾ ಲಲಲಲಲಲ ಲಾಲಲಲ
ಹಾಹಾ
ಆಡುವ ಮಾತಿಗೆ ಧನಿಯಾದೆ
ಹಾಡುವ ಗೀತೆಗೆ ಶೃತಿಯಾದೆ
ಜೀವ ಜೀವವೆ ನೀನಾದೆ
ನಿನ್ನ ಮನದಲ್ಲಿ ನಾನಾದೆ
ನಿನ್ನ ಮನದಲ್ಲಿ ನಾನಾದೆ
ಮೊದಲನೆ ದಿನವೆ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ
ಕಣ್ಗಳಲೆ ಮೌನದಲೇ
ಮೊದಲನೆ ದಿನವೆ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಲಲಲಲಲ ಲಲಲಲ
ಲಲಲಲ ಲಲಲಲ