Marubhoomiyalli song details
- Song : Marubhoomiyalli
- Singer : Rajesh Krishnan
- Lyrics : Raghu Dixit
- Music : Raghu Dixit
- Movie : Just math mathalli
- Label : Anand audio
Marubhoomiyalli lyrics in Kannada
ಮರುಭೂಮಿಯಲ್ಲಿ ಲಿರಿಕ್ಸ್
ಮರುಭೂಮಿಯಲ್ಲಿ ಹೂವು ಅರಳೊ ಹುಚ್ಚು ಕನಸ ಕಂಡೆ
ಈ ಮನಸ್ಸಿನ ಭಾರಕ್ಕೆ ಹೂವಿನ ಹಗುರ ತಂದೆ
ಎಂದೂ ಕಾಣದ ಸವಿ ಕನಸೆ ನೀನಾ ?
ಈ ಕತ್ತಲ ಕಣ್ಣಿಗೆ ನೀ ಆದೆ ಬೆಳಕ
ನೀರು ಜೇನಾಯ್ತು ಹೇಗೊ ನಾನು ಅರಿಯೇ
ಹೀಗೆ ಜಸ್ಟ್ ಮಾತ್ ಮಾತಲ್ಲಿ
ಬಾನಲ್ಲಿ ಹಕ್ಕಿಯ ಮೀರಿ ಹಾರುವ ಆಸೆ ಕಂಡೆ
ತಂಪಾದ ಮಂಜಿನ ಹನಿಯ ಮುತ್ತಿಕ್ಕೊ ಆಸೆ ಕಂಡೆ
ಪ್ರಣಯಕ್ಕೆ ಸವಿಯ ಸ್ನೇಹ ಸಿಕ್ಕಿದೆ ಇಲ್ಲಿ
ತೂರಿದೆ ನನ್ನ ಹೃದಯ ಬಾನಿನಲ್ಲಿ
ಕಣ್ಣಿಗೆ ಹಚ್ಚಿದೆ ನೀ ಪ್ರೇಮದ ಬಣ್ಣ
ಹೀಗೆ ಜಸ್ಟ್ ಮಾತ್ ಮಾತಲ್ಲಿ
ನನ್ನ ಉಸಿರಿಗೆ ನೀ ಸ್ವರವೆ
ಆ ಸ್ವರಕ್ಕೆ ನಿನ್ನ ಹೆಸರು ಪದವೆ
ಕೇಳಿದೆ ಕೋಗಿಲೆ ಆ ಹಾಡೊ ಹಾಡಲೆ
ಒಪ್ಪಿಗೆ ನಿನ್ನ ಕೇಳಿದೆ
ಕೇಳಿದೆ ಕೋಗಿಲೆ ಆ ಹಾಡೊ ಹಾಡಲೆ
ಒಪ್ಪಿಗೆ ನಿನ್ನ ಕೇಳಿದೆ
ಮರುಭೂಮಿಯಲ್ಲಿ ಹೂವು ಅರಳೊ ಹುಚ್ಚು ಕನಸ ಕಂಡೆ
ಈ ಮನಸಿನ ಭಾರಕೆ ಹೂವಿನ ಹಾರ ತಂದೆ
ಎಂದು ಕಾಣದ ಸವಿ ಕನಸೆ ನೀನಾ?
ಈ ಕತ್ತಲ ಕಣ್ಣಿಗೆ ನೀ ಆದೆ ಬೆಳಕ
ನೀರು ಜೇನಾಯ್ತು ಹೇಗೋ ನಾನು ಅರಿಯೇ
ಹೀಗೆ ಜಸ್ಟ್ ಮಾತ್ ಮಾತಲ್ಲಿ