Love alli bidde song details
- Song : Love alli bidde
- Singer : Ananya bhat
- Lyrics : Chandru Obaiah
- Movie : U turn 2
- Music : Chandru Obaiah
- Label : Anand audio
Love alli bidde lyrics in Kannada
ಲವ್ ಅಲ್ಲಿ ಬಿದ್ದೆ ಸಾಂಗ್ ಲಿರಿಕ್ಸ್
ಕಣ್ಣ ಸನ್ನೆ ಮಾಡಿ
ಕಾಡುತಾನೆ ನನ್ನ
ಮುದ್ದು ಮಾತನಾಡಿ
ಸೆಳೆಯುತಾನೆ ನನ್ನ
ಕನವರಿಕೆ ಕನಸುಗಳು ಅತಿಯಾಯ್ತು ಇವನಿಂದ
ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ
ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ
ಹೊಸತೊಂದು ಆಲೋಚನೆ
ನನ್ನಲ್ಲಿ ಶುರುವಾಗಿದೆ
ಮಿತಿಮೀರಿದ ಕಲ್ಪನೆ
ಈಗಂತೂ ಜೋರಾಗಿದೆ
ಯಾರಿಗೂ ಹೇಳದ ಸಂತಸವೂ
ಮನಸಲ್ಲಿ ಏನೋ ಆತುರವೋ
ನನ್ನಲ್ಲಿ ಈಗ ಕುಣಿಯುತಿದೆ
ನಲಿಯುತಿದೆ
ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ
ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ
ನನ್ನಾಣೆ ನೀನಿದ್ದರೆ
ಜಗವನ್ನೇ ನಾ ಮರೆಯುವೆ
ನಿನ್ನನ್ನೇ ನನ್ನ ತೋಳಲಿ
ಬಚ್ಚಿಟ್ಟು ಕಾಪಾಡುವೆ
ಯಾವ ಜನ್ಮದ ಪುಣ್ಯವಿದು
ಎಂದಿಗೂ ಅಳಿಸದ ಪ್ರೀತಿ ಇದು
ನೀನಿರು ಎಂದೂ ಜೊತೆಯಾಗಿ ಕೊನೆವರೆಗೂ
ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ
ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ