Konde konde – Jimmy Francis John Lyrics
Singer | Jimmy Francis John |
Konde konde song details – Aatakkuntu lekkakkilla
▪ Movie: Aatakkuntu Lekkakkilla
▪ Singer: Jimmy Francis John
▪ Music: Nobin Paul
▪ Lyrics: Vasuki Vaibhav
Konde konde song lyrics in Kannada – Aatakkuntu lekkakkilla
ಆರಿದ ದೀಪ ಕಂಗಳಿದು
ಗಾಳಿ ನೀನದೆ
ಯಾರದೊ ಶಾಪ ಜೀವವಿದು
ಖಾಲಿ ಚೂರಾದೆ
ಸುಡುತಿದೆ ಕಣ್ಣಲ್ಲೆ ಮಡಚಿಟ್ಟ ನೋವೆಲ್ಲವು
ನನ್ನ ಸಂತೋಷ ಮುಗಿದಂತ ಅಧ್ಯಾಯವು
ಕೊಂದೆ.. ಕೊಂದೆ..
ಕನಸನು ಒಂದೊಂದೆ
ಅದೆ ನಿಂದೆ
ಈ ನೋವಲ್ಲಿ ಇನ್ಮುಂದೆ
ಕೊಂದೆ.. ಕೊಂದೆ ..
ಕನಸನ್ನು ಒಂದೊಂದೇ
ಅದೆ ನಿಂದೆ
ಈ ನೋವಲ್ಲಿ ಇನ್ಮುಂದೆ
ಬೀಸುವ ಬಿರುಗಾಳಿಯು
ತಂಪನೆದೆಂದು ಬೀರದು..
ಚೂರಾದಂತೆ ಕಣ್ಣ ಮುಂದೆ ನನ್ನ ನಂಬಿಕೆ
ಭೂಮಿಯ ನೋವಿಗೂ
ಬಾನ ಕಾರ್ಮೋಡ ಬಾವುಕ
ಯಾರಲ್ಲಿ ಹೇಳಲಿ ನನಗೆ
ನಾನೆನೆ ಆಗಂತುಕ
ಪ್ರಳಯ ಮಾತಾಡಿದೆ ನೊಂದ
ಭೂಮಿಯ ಸಂಭಾಷಣೆ
ಕೊಂದೆ ..ಕೊಂದೆ..
ಕನಸನ್ನು ಒಂದೊಂದೇ
ಹಾಗೆ ನಿಂತೆ
ಈ ನೋವಲ್ಲಿ ಇನ್ಮುಂದೆ
ಕೊಂದೆ ಕೊಂದೆ
ಕನಸನ್ನು ಒಂದೊಂದೇ
ಹಾಗೆ ನಿಂತೆ
ಈ ನೋವಲ್ಲಿ ಇನ್ಮುಂದೆ!
ದೇವರೆ ಎದುರಾದರೆ
ಕೋರಲಿ ನಾನು ಏನನ್ನು
ನಾನ ವೇಷ ತಾಳಿ
ಮೌನ ನನ್ನ ಕಾಡಿದೆ
ಓದಲು ಆಗದ ಕಂಬನಿ ತಂದ ಲೇಖನ
ಮನಸಿಡು ಹೊಡೆಯಲು ಇನ್ನು
ಸಾಕೀಗ ಒಂದೇ ಕ್ಷಣ
ಸಾವ ತೊಳಲಿರೊ ನನ್ನ
ಬಾಳೊಂದು ವಿಗ್ನಾಪನೆ!
ಕೊಂದೆ.. ಕೊಂದೆ..
ಕೊಂದೆ ಕೊಂದೆ
ಕನಸನ್ನು ಒಂದೊಂದೇ
ಅದೆ ನಿಂದೆ
ಈ ನೋವಲಿ ಇನ್ಮುಂದೆ