Kolumande lyrics – Chandan Shetty Lyrics
Singer | Chandan Shetty |
Kolumande song lyrics – Details Chandan Shetty
▪ Album: KOLUMANDE (Album Song)
▪ Song: KOLUMANDE
▪ Singer & Music: CHANDAN SHETTY
▪ Composition: JANAPADA (Folk)
▪ Lyrics: JANAPADA (Folk)
Kolumande song lyrics in Kannada – Chandan Shetty
ಕೋಲುಮಂಡೆ ಜಂಗುಮ ದೇವರು
ಗುರುವೆ ಕ್ವಾರಣ್ಯಕೆ ದಯಮಾಡವ್ರೆ
ಕ್ವಾರಣ್ಯ ನೀಡವ್ವ ಕೋಡುಗಲ್ಲ ಮಾದೇವನಿಗೆ
ಕೋಲುಮಂಡೆ ಜಂಗುಮ ದೇವರು
ಗುರುವೆ ಕ್ವಾರಣ್ಯಕೆ ದಯಮಾಡವ್ರೆ
ಕ್ವಾರಣ್ಯ ನೀಡವ್ವ ಕೋಡುಗಲ ಮಾದೇವನಿಗೆ
ಹರನಿಗೆ ಶರಣೆಂದೆ ಗುರುವೆ
ಗುರುವಿಗೆ ಶರಣೆಂದೆ
ಹರ ಹರ ಶಿವ ಶಿವ ಶಂಕರ
ನಮ್ಮ ಮಾದೇವಗೆ ಶರಣೆಂದೆ!
ಕುಲದಲ್ಲಿ ಕುರುಬ ವಕ್ಕಲು ಗೌಡ
ಸ್ವಾಮಿ ಜಾತೀಲಿ ಸೋಲುಗ ನೀಲಯ್ಯ
ನೀಲಯ್ಯನ ಮಡದಿ ಸಂಕಮ್ಮ
ಭೂಲೋಕದಲ್ಲಿ ಕಾದು ಚೆಲುವೆ
ಮಡದಿ ಸಂಕಮ್ಮನ ಬಳಿಗೆ ಬತ್ತವ್ನೆ
ದೇವ ಸೋಲುಗ ನೀಲಯ್ಯ!
ಕ್ವಾರಣ್ಯ ನೀಡವ್ವ ಕೋಡುಗಲ ಮಾದೇವನಿಗೆ..
ಅಯ್ಯ! ಕೋಲುಮಂಡೆ ಜಂಗುಮ
ಕ್ವಾರಣ್ಯಕೆ ದಯಮಾಡವ್ರೆ…
ಕ್ವಾರಣ್ಯ ನೀಡವ್ವ ಕೋಡುಗಲ ಮಾದೇವನಿಗೆ
ಇಲ್ಲ ಸಂಕೆನ್ನೆ! ನಾನು ಹೆಜ್ಜೇನು ಮಳೆ ಹೆಜ್ಜೇನು ಬೇಟೆಗೆ ಹೋಯ್ತಿದಿನಿ ಮಡದಿ
ಹೌದೌದು….
ಕುಲದವ್ರೆಲ್ಲಾ ಸೇರಿಸಿ ನನ್ನ ಕರಿತ ಇದಾರೆ ಮಡದಿ
ಹೌದಪ್ಪ
ನಿನ್ನ ಒಬ್ಳುನ್ನೆ ಇಲ್ಲಿ ಬಿಟ್ಟು ಹೋಗೋದಕ್ಕೆ ನನಗೆ ಅನುಮಾನ ಮಡದಿ
ಶಿವಾ ..ಶಿವಾ ..
ನೀನು ಬಲಗೈ ಮುಟ್ಟಿ ಭಾಷೆ ಕೊಟ್ಟು ನನ್ನ ಕಲಗೆನ್ನೆ…..
ಅಯ್ಯೋ ಯಜಮಾನ…
ಅಂತ ತಪ್ಪು ನಾನು ಏನು ಮಾಡಿದಿನೊ ಯಜಮಾನ?
ಶಿವಾ ..ಶಿವಾ ..
ಅಂತ ತಪ್ಪು -ನೆಪ್ಪು ಕಂಡರೆ
ಆದ ಪಕ್ಷದಲ್ಲಿ
ನಿನ್ನ ತಂದೆ -ತಾಯಿ ಕರೆಸಯ್ಯ
ಅತ್ತೆ -ಮಾವನ ಕರೆಸಯ್ಯ
ಅಣ್ಣ -ತಮ್ಮಂದರ ಕರೆಸಯ್ಯ
ಅಕ್ಕ-ತಂಗ್ಯರ ಕರೆಸಯ್ಯ
ಭಾವ -ಮೈದ್ನರ ಕರೆಸಯ್ಯ
ಅತ್ತೆ -ನಾದೀನರ ಕರೆಸಯ್ಯ
ಬಂಧು -ಬಳಗ ಕರೆಸಯ್ಯ
ಕುಲುದವ್ರೆನಲ್ಲ ಸೇರಿಸಯ್ಯ
ನ್ಯಾಯನಾದ್ರು ಮಾಡ್ಸಯ್ಯ, ತಪ್ಪು -ನೆಪ್ಪ ತೋರ್ಸಯ್ಯ
ನೀನು ಕಟ್ಟಿದ ತೇರವ ತೆಕ್ಕೊಂಡು
ಅಲ್ಲೆ ಬಿಟ್ಟು ಬಿಡಯ್ಯ ಮಡದಿಯ…
ಕ್ವಾರಣ್ಯ ನೀಡವ್ವ ಕೋಡುಗಲ
ಮಾದೇವನಿಗೆ..
ಅಯ್ಯ! ಕೋಲುಮಂಡೆ ಜಂಗುಮ ಕ್ವಾರಣ್ಯಕೆ ದಯಮಾಡವ್ರೆ…
ಕ್ವಾರಣ್ಯ ನೀಡವ್ವ ಕೋಡುಗಲ ಮಾದೇವನಿಗೆ
ಇಲ್ಲ ಮಡದಿ ಸಂಕೆನ್ನೆ!
ಕಟ್ಟಿದ ತೆರವನ್ನು ತಕ್ಕಂಡು
ಬುಟ್ಬುಡಕೆ
ನೀನೆನು ದನುವ, ಕರುವ,
ಕುರಿಯ ಕೋಳಿಯ, ಆಡು-ಎಮ್ಮೆನ ಸಂಕೆನ್ನೆ?
ನಿನ್ನ ಒಬ್ಳುನ್ನೆ ಈ ಕಾಡು-ಡೋಪಿನ ಒಂಟಿ ಸೊಪ್ಪಿನ ಗುಲ್ಲಲ್ಲಿ ಇರುವಂತಹ
ವಲಯದಲ್ಲಿ …
ಕೇಳು ಕೇಳು ಸಂಕೆನ್ನೆ ಕೇಳು ಕೇಳು ಸಂಕೆನ್ನೆ
ಮುತ್ತಿನ ಸೆಟ್ಟಿ ಕರಿತೀಯ
ಚಾಪೇನಾದ್ರು ಹಾಸ್ತೀಯ ಮುತ್ತುಂಬ ಉಂಡ್ಸಿ ಕೇಳ್ತೀಯ
ನೀನು ಅವ್ನ ನೋಡ್ತೀಯ ಅವ್ನು ನಿನ್ನ ನೋಡ್ತಾನೆ
ಅಂದ -ಚೆಂದ ನೋಡ್ತಾನೆ
ದಪ್ಪ -ದುಡುವ ನೋಡ್ತಾನೆ
ಚೆಲುವ ಬಾವ ನೋಡ್ತಾನೆ
ನಿನ್ಮೇಲೆ ಕಣ್ಣು ಇಟ್ಟು ನಿನಗೆ ಒಲುಮೆ ಮಾಡ್ದು ಕೊಟ್ಟು ನಿನ್ನ ವಲಿಸಿ ಕೊಂಡು ಹೋಗ್ತಾನೆ
ಕ್ವಾರಣ್ಯ ನೀಡವ್ವ ಕೋಡುಗಲ ಮಾದೇವನಿಗೆ
ಅಯ್ಯ! ಕೋಲುಮಂಡೆ ಜಂಗುಮ ಕ್ವಾರಣ್ಯಕೆ ದಯಮಾಡವ್ರೆ..
ಕೋಲುಮಂಡೆ ಜಂಗುಮ ದೇವರು ಗುರುವೇ ಕ್ವಾರಣ್ಯಕೇ ದಯಮಾಡವ್ರೆ ಕ್ವಾರಣ್ಯ ನೀಡವ್ವ ಕೋಡುಗಲ ಮಾದೇವನಿಗೆ..