Kelo manganna lyrics ( ಕನ್ನಡ ) – Mayura – Super cine lyrics

 Kelo manganna lyrics – Mayura



Kelo manganna song details 

  • Song : KELO MANGANNA
  • Singer : P B SRINIVAS
  • Lyrics : CHI UDAYASHANKAR
  • Film : MAYURA
  • Starcast : DR RAJKUMAR,VAJRAMUNI
  • Music : G K VENKATESH 
  • Director : VIJAY

Kelo manganna lyrics in Kannada

ಕೇಳೊ ಮಂಗಣ್ಣ ಕೇಳೊ ಮಂಗಣ್ಣ 
ನೀ ಹೇಳೊ ತಿಮ್ಮಣ್ಣ
ಏಕೆ ನೀನು ಹಿಂಗೆ ಕುಂತೆ
ಚಿಂತೆ ಬೇಡಣ್ಣ 
ವೈರಿ ಜನರು ನಾಶವಾಗೊ ಕಾಲ ಬಂತಣ್ಣ
ಒಳ್ಳೆ ಕಾಲ ಬಂತಣ್ಣ॥2॥

ಮೇಲೆ ಕುಂತೊರೆಲ್ಲಾ ಎಂದೂ ರಾಜರೇನಲ್ಲ
ಮೀಸೆ ತಿರುವೊ ಹುಂಬರೆಲ್ಲಾ ಆಳೋಕೆ ಬಂದಿಲ್ಲ
ಮೇಲೆ ಕುಂತೊರೆಲ್ಲಾ ಎಂದೂ ರಾಜರೇನಲ್ಲ
ರಾಜರೇನಲ್ಲ
ಮೀಸೆ ತಿರುವೊ ಹುಂಬರೆಲ್ಲಾ ಆಳೋಕೆ ಬಂದಿಲ್ಲ
ಆಳೋಕೆ ಬಂದಿಲ್ಲ
ರೋಷ ದ್ವೇಷ ಮೋಸ ಎಂದೂ ಒಳ್ಳೆಯದೇನಲ್ಲ
ರೋಷ ದ್ವೇಷ ಮೋಸ ಎಂದೂ ಒಳ್ಳೆಯದೇನಲ್ಲ
ನೊಂದ ಜನರ ಶಾಪದಿಂದ ಪಾಪಿ ಉಳಿಯಲ್ಲ
ಈ ಪಾಪಿ ಉಳಿಯಲ್ಲ

ಕೇಳೊ ಮಂಗಣ್ಣ 
ನೀ ಹೇಳೊ ತಿಮ್ಮಣ್ಣ
ಏಕೆ ನೀನು ಹೀಗೆ ಕುಂತೆ
ಚಿಂತೆ ಬೇಡಣ್ಣ 
ವೈರಿ ಜನರು ನಾಶವಾಗೊ ಕಾಲ ಬಂತಣ್ಣ
ಒಳ್ಳೆ ಕಾಲ ಬಂತಣ್ಣ

ರಾವಣಂಗೆ ಮೃತ್ಯುವಾಗಿ ರಾಮನು ಬಂದಂತೆ
ಕೀಚಕಂಗೆ ವೈರಿ ಯಾಗಿ ಭೀಮನೂ ಬಂದಂತೆ
ಆ ಭೀಮನು ಬಂದಂತೆ
ಕಂಸನ ಹಿಡಿದು ದ್ವಂಸ ಮಾಡಿ ಕೃಷ್ಣನು ಬಂದಂತೆ
ಕಾಡೋರನ್ನು ಓಡಿಸಲೆಂದೆ ಬಂದೆ ಬಿಡು ಚಿಂತೆ 
ನಾ ಬಂದೆ ಬಿಡು ಚಿಂತೆ 

ಏರೊ ಮಂಗಣ್ಣ ಮೇಲೇರೊ ಮಂಗಣ್ಣ 
ಲಂಕೆ ಸುಟ್ಟ ವೀರ ನೀನು ಮರೆಯ ಬೇಡಣ್ಣ 
ಮುಗಿಲ ತನಕ ಏರಿ ವಿಜಯದ ಕಹಳೆ ಊದಣ್ಣ 
ವಿಜಯದ ಕಹಳೆ ಊದಣ್ಣ
(music)

Kelo manganna song video : 

Leave a Comment

Contact Us