Kelisade kallukallinali – Chitra Lyrics
Singer | Chitra |
Kelisade kallukallinali song details – Belli kalungura
▪ Song: Kelisade Kallukallinali
▪ Album/Movie: Belli Kalungura
▪ Singer:CHITRA
▪ Music Director: HAMSALEKHA
▪ Lyricist: HAMSALEKHA
▪ Music Label: Lahari Music
Kelisade kallukallinali song lyrics in Kannada – Belli kalungura
ಓ…
ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ
ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು
ಧೂರಮೆಯ ಆಧಾರ ಈ ಕಲೆಯ ಸಿಂಗಾರ
ಬಂಗಾರ ತೇರೇರಿ ಮೂಡಣವೇ ಸಿಂಧೂರ
ದಿನ ದಿನ ದಿನ ಹೊಸದಾಗಿದೆ
ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕಣ ಕರೆ ನೀಡಿದೆ
ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು
ಕೇಳಿಸದೆ …..
ಗಾಳಿಯೇ ಆದೇಶ ಮೇಘವೇ ಸಂದೇಶ
ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ
ಋತು ಋತುಗಳು ನಿನ್ನ ಕಾದಿವೆ
ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ
ನವರಸವು ಮೈತಾಳಿ ಜೀವನದ ಜೋಕಾಲಿ
ಯುಗಯುಗದಲು ನಿನ್ನ ಕಾಯುವೆ
ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು
ಕೇಳಿಸದೆ…..
ಸಾಹಿತ್ಯ ದೊಡ್ಡ ರಂಗೇ ಗೌಡ್ರು
ಹಂಸಲೇಖ ಸಂಗೀತ ಮಾತ್ರ…