Kannanchina ee mathalli song details
- Song : Kannanchina ee mathalli
- Singer : P B Srinivas
- Lyrics : Chi Udayashankar
- Movie : Daari thappida maga
- Music : G K Venkatesh
Kannanchina ee mathalli lyrics in Kannada
ಕಣ್ಣಂಚಿನ ಈ ಮಾತಲಿ
ಏನೇನೋ ತುಂಬಿದೆ
ಕಣ್ಣಂಚಿನ ಈ ಮಾತಲಿ
ಏನೇನೋ ತುಂಬಿದೆ
ಕವಿಕಾಣದ ಶೃಂಗಾರದ
ರಸಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ
ಏನೇನೋ ತುಂಬಿದೆ
ನವ ಯೌವ್ವನ ಹೊಂಗನಸಿನ
ಮಳೆಬಿಲ್ಲು ತಂದಿದೆ
ನಸುನಾಚುತೆ ಹೊಸಪ್ರೇಮದ
ಕುಡಿ ಇಲ್ಲಿ ಚಿಗುರಿದೆ
ನೂರಾಸೆಯ ನೆಲೆಯಾಗಿರೆ
ಮಧುಚಂದ್ರದ ಮಧುಮೈತ್ರಿಯ
ನಿರೀಕ್ಷೆ ಅಲ್ಲಿದೆ
ಕಣ್ಣಂಚಿನ ಈ ಮಾತಲಿ
ಏನೇನೋ ತುಂಬಿದೆ
ಕವಿಕಾಣದ ಶೃಂಗಾರದ
ರಸಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ
ಏನೇನೋ ತುಂಬಿದೆ
ಪ್ರತಿ ಪ್ರೇಮಿಯ ಬಾಳಲ್ಲಿಯೂ
ಶುಭರಾತ್ರಿ ಒಂದಿದೆ
ಅನುರಾಗದ ಆ ವೇಳೆಗೆ
ಮನ ಕಾದು ನಿಂತಿದೆ
ಸರಿಜೋಡಿಯ ಕಣ್ಣರಸಿದೆ
ಹಿರಿಜೋಡಿಯು ಸವಿನೆನಪಲಿ
ಜಗವನ್ನೆ ಮರೆತಿದೆ
ಕಣ್ಣಂಚಿನ ಈ ಮಾತಲಿ
ಏನೇನೋ ತುಂಬಿದೆ
ಕವಿಕಾಣದ ಶೃಂಗಾರದ
ರಸಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ
ಏನೇನೋ ತುಂಬಿದೆ