Kannalli nee thumbiruve lyrics – Maharshi
Kannalli nee thumbiruve song details
- Song : Kannali nee thumbiruve
- Singer : Kunal Ganjawala , Nanditha
- Lyrics : Jayanth kaikini
- Music : Srimurali
- Movie : Maharshi
Kannalli nee thumbiruve lyrics in Kannada
ಕಣ್ಣಲ್ಲಿ ನೀ ತುಂಬಿರುವೆ
ಕಣ್ಣಲ್ಲಿ ನೀನೆ ತುಂಬಿರುವೆ
ಕಾಣೇನು ಇನ್ನೇನು
ನಿನ್ನಲಿ ಪ್ರೀತಿ ಕಂಡಿರುವೆ
ನನ್ನವನೂ ನೀನು
ಕನಸೂ ತಾನಾಗಿಯೇ
ಬಂದೂ ಕೈ ಕುಲುಕಿದೆ
ಮನಕೆ ಏನಾಯಿತು
ಇಂದು ಮೈ ಮರೆತಿದೆ
ಬರಲೇ ಬೇಕಿದೆ ಇನ್ನಾದರೂ
ಸನಿಹ ಸನಿಹ ನೀನು
ನಿನ್ನಲಿ ಪ್ರೀತಿ ಕಂಡಿರುವೆ
ನನ್ನವನೂ ನೀನು
ಕಣ್ಣಲಿ ನೀನೆ ತುಂಬಿರುವೆ
ಕಾಣೇನು ಇನ್ನೇನು
ನಕ್ಕರೆ ನೀನು ಅಕ್ಕರೆ ಹೂವು
ಸುಂದರವಾಗಿ ಬಿರಿದಂತೆ
ಸಿಕ್ಕರೆ ನೀನು ಅಚ್ಚರಿ ನೂರು
ನಂದನವೊಂದು ಕರೆದಂತೆ
ನಿನ್ನಿಂದ ನಾನು ನನ್ನಿಂದ ನೀನು
ಅರಳುವ ಪರಿಯೇನು
ಎಂದೂ ದೂರಾಗದ
ವಚನ ನಾ ಬೇಡುವೆ
ಎಂದೂ ಚೂರಾಗದ
ಹೃದಯ ನಾ ನೀಡುವೆ
ಇರಲೇ ಬೇಕು ಇನ್ನಾದರೂ ಜೊತೆಗೆ ಜೊತೆಗೆ ನೀನು
ಕಣ್ಣಲ್ಲಿ ನೀನೆ ತುಂಬಿರುವೆ
ಕಾಣೇನು ಇನ್ನೇನು
ನಿನ್ನಲ್ಲಿ ಪ್ರೀತಿ ಕಂಡಿರುವೆ
ನನ್ನವನೂ ನೀನು
ಹಾಡೋರು ನಿನ್ನ
ಆಸೆಗಳನ್ನ ಕೇವಲ ನನಗೆ ಹೇಳುವೆಯಾ
ಹೊಮ್ಮುವ ಸಣ್ಣ
ಭಾವಗಳನ್ನ ಸುಮ್ಮನೆ ನೀನು ಕೇಳುವೆಯಾ
ಎಲ್ಲೆಲ್ಲೊ ನೀನು ಇನ್ನಿಲ್ಲ ನಾನು
ಬೇಕಿಲ್ಲ ಬೇರೇನೂ
ಒಂದೇ ರೋಮಾಂಚನ
ಬೆರೆತ ಈ ಭಾವಕೆ
ಬೇಕೆ ಆಮಂತ್ರಣ
ಅರಿತ ಈ ಜೀವಕೆ
ಸಿಗಲೇಬೇಕಿದೆ ಇನ್ನಾದರೂ
ಮರಳಿ ಮರಳಿ ನೀನು
ಕಣ್ಣಲ್ಲೆ ನೀನೆ ತುಂಬಿರುವೆ
ಕಾಣೇನು ಇನ್ನೇನು
ನಿನ್ನಲಿ ಪ್ರೀತಿ ಕಂಡಿರುವೆ
ನನ್ನವನೂ ನೀನು