Kamalada mogadole lyrics ( ಕನ್ನಡ ‌) – Hosa ithihaasa – super cine lyrics

Kamalada mogadole – S Janaki Lyrics

Singer

S Janaki

Kamalada mogadole song details – Hosa ithihaasa

▪ Song : Kamalada mogadole
▪ Singer : S Janaki
▪ Movie : Hosa ithihaasa

Kamalada mogadole song lyrics in Kannada – Hosa ithihaasa

ಆ.. ಅ..ಅ…
ಆ….ಆ….ಆ…ಆ..ಅ…
ಆ.. ಅ..ಅಅ…ಅ…ಅ…ಅ…

ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..

ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ…

ಕಾವೇರಿ ನೀರ ಅಭಿಷೇಕಕಾಗಿ ನಿನಗಾಗಿ ನಾ ತಂದೆನಮ್ಮ..
ಕಂಪನ್ನು ಚೆಲ್ಲೋ ಸುಮರಾಶಿಯಿಂದ ಹೂಮಾಲೆ ಕಟ್ಟಿರುವೆನಮ್ಮ..
ಬಂಗಾರ ಕಾಲ್ಗೆಜ್ಜೆನಾದ ನಮ್ಮ ಮನೆಯಲ್ಲವ ತುಂಬುವಂತೆ..ಎ…ಎ..
ಬಂಗಾರ ಕಾಲ್ಗೆಜ್ಜೆನಾದ ನಮ್ಮ ಮನೆಯಲ್ಲವ ತುಂಬುವಂತೆ..
ನಲಿಯುತ.. ಕುಣಿಯುತ.. ಒಲಿದು ಬಾ.. ನಮ್ಮ ಮನೆಗೆ ಬಾ..

ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ…

ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..

ಶ್ರೀದೇವಿ ಬಾ ಮಾ ಧನಲಕ್ಷ್ಮಿ ಬಾ ಮಾ ಮನೆಯನ್ನು ಬೆಳಕಾಗಿ ಮಾಡು..
ದಯೆತೋರಿ ಬಂದು ಮನದಲ್ಲಿ ನಿಂತು ಸಂತೋಷ ಸೌಭಗ್ಯ ನೀಡು..
ಸ್ಥಿರವಾಗಿ ಬಂದಿಲ್ಲಿ ನೆಲೆಸು.. ತಾಯೇ ವರಮಹಾಲಕ್ಷ್ಮಿಯೇ ಹರಸು..

ಕರವನು ಮುಗಿಯುವೆ.. ಆರತಿ ಈಗ ಬೆಳಗುವೆ..

ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ…

ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲವ ಕೈಯಲ್ಲಿ ಹಿಡಿದೊಳೆ..

1 thought on “Kamalada mogadole lyrics ( ಕನ್ನಡ ‌) – Hosa ithihaasa – super cine lyrics”

Leave a Comment

Contact Us