Kadubige Tuppa Lyrics ( ಕನ್ನಡ ) – Latha Hamsalekha

Lord Ganesha is also called as Ganapati and Vinayaka. Lord Ganesha Chaturthi is Hindu festival this festival is celebrated in public Lord Ganesha festival is very big festival to Hindu religion.

Kadubige Tuppa song was sung by Latha Hamsalekha and lyrics penned by Hamsalekha music also composed by Hamsalekha and copyright label was Anand audio

Kadubige tuppa song details

  • Song : Kadubige tuppa
  • Singer : Latha Hamsalekha
  • Lyrics : Hamsalekha
  • Music : Hamsalekha
  • Label : Anand audio

Kadubige tuppa lyrics in kannada

ಕಡುಬಿಗೆ ತುಪ್ಪ ಹಾಕಿದೇನಪ್ಪ ಸಾಂಗ್ ಲಿರಿಕ್ಸ್

ಕಡುಬಿಗೆ ತುಪ್ಪ ಹಾಕಿದೇನಪ್ಪ
ಸ್ವೀಕರಿಸಪ್ಪ ಓ ಬೆನಕಪ್ಪ

ಕಡುಬಿಗೆ ತುಪ್ಪ ಹಾಕಿದೇನಪ್ಪ
ಸ್ವೀಕರಿಸಪ್ಪ ಓ ಬೆನಕಪ್ಪ
ಸಾವಿರ ತಪ್ಪ ಮನ್ನಿಸಪ್ಪ

ಓಗೋಡು ಓ ಗಣಪತಿ ಬಪ್ಪಾ
ಓಗೋಡು ಓ ಗಣಪತಿ ಬಪ್ಪಾ
ಓಗೋಡು ನೀ ಗಣಪತಿ ಬಪ್ಪಾ
ಓಗೋಡು ನೀ ಗಣಪತಿ ಬಪ್ಪಾ

ಕಡುಬಿಗೆ ತುಪ್ಪ ಹಾಕಿದೇನಪ್ಪ
ಸ್ವೀಕರಿಸಪ್ಪ ಓ ಬೆನಕಪ್ಪ

ಮೂಡನದಲ್ಲಿ ದಿನಕರ ಬರುವ
ಶುಭಕರ ವೇಳೆ
ಪರಿಮಳ ಚೆಲ್ಲುವ ಮಲ್ಲಿಗೆ ಸಂಪಿಗೆ
ಹೂಗಳ ಮಾಲೆ
ತಂದಿರುವೆ ನಿನಗಾಗಿ
ನಮಿಸಿರುವೆ ತಲೆಬಾಗಿ ಬಾರಪ್ಪ
ಬಾಗಿಲಿಗಪ್ಪ ತೋರಣವಪ್ಪ
ನೀ ಬರಲೆಂಬ ಕಾರಣವಪ್ಪ
ಬಾಗಿಲಿಗಪ್ಪ ತೋರಣವಪ್ಪ
ನೀ ಬರಲೆಂಬ ಕಾರಣವಪ್ಪ
ಕಂಡರೆ ಕಪ್ಪ ಕಾಣಿಕೆಯಪ್ಪ

ಓಗೋಡು ಓ ಗಣಪತಿ ಬಪ್ಪಾ
ಓಗೋಡು ಓ ಗಣಪತಿ ಬಪ್ಪಾ
ಓಗೋಡು ನೀ ಗಣಪತಿ ಬಪ್ಪಾ
ಓಗೋಡು ನೀ ಗಣಪತಿ ಬಪ್ಪಾ

ಕಡುಬಿಗೆ ತುಪ್ಪ ಹಾಕಿದೆನಪ್ಪ
ಸ್ವೀಕರಿಸಪ್ಪ ಓ ಬೆನಕಪ್ಪ

ಹುಣ್ಣಿಮೆ ಕಳೆದು ಮೂರನೆ
ದಿವಸ ಕಾಯುವೆವಪ್ಪ
ತಿಂಗಳು ತಿಂಗಳು
ಸಂಕಷ್ಟ ಸ್ತುತಿ ಮಾಡುವೆವಪ್ಪ
ಗಣಪನ ನಾಮ ಹತ್ತು
ಉಣ್ಣುವೆವು ಒಂದೇ ಹೊತ್ತು ಬಾರಪ್ಪ

ಅಂಗೈ ದಪ್ಪ ಹೋಳಿಗೆಯಪ್ಪ
ಹೋಳಿಗೆ ಕಪ್ಪ ಹಾಲಿದೆಯಪ್ಪ
ಅಂಗೈ ದಪ್ಪ ಹೋಳಿಗೆಯಪ್ಪ
ಹೋಳಿಗೆ ಕಪ್ಪ ಹಾಲಿದೆಯಪ್ಪ
ಸಾವಿರ ತಪ್ಪ ಮನ್ನಿಸೆಯಪ್ಪ

ಓಗೋಡು ಓ ಗಣಪತಿ ಬಪ್ಪಾ
ಓಗೋಡು ಓ ಗಣಪತಿ ಬಪ್ಪಾ
ಓಗೋಡು ನೀ ಗಣಪತಿ ಬಪ್ಪಾ
ಓಗೋಡು ನೀ ಗಣಪತಿ ಬಪ್ಪಾ

ಕಡುಬಿಗೆ ತುಪ್ಪ ಹಾಕಿದೆನಪ್ಪ
ಸ್ವೀಕರಿಸಪ್ಪ ಓ ಬೆನಕಪ್ಪ

ಮನೆಯ ಮಕ್ಕಳು ಓದಲು
ಬರೆಯಲು ಮನಸು ಕೊಡಪ್ಪ
ಮನದಲ್ಲಿ ಶಾಂತಿ ಸುಖವು
ನೆಲೆಸಲು ಪ್ರೀತಿ ಕೊಡಪ್ಪ
ಧನ ಬೇಡೆವಪ್ಪ
ಮನ ಮುದ ಮಾಡು ಅಪ್ಪ ನಮ್ಮಪ್ಪ

ಕಡುಬಿಗೆ ತುಪ್ಪ ಹಾಕಿದೆನಪ್ಪ
ಸ್ವೀಕರಿಸಪ್ಪ ಓ ಬೆನಕಪ್ಪ
ಸಾವಿರ ತಪ್ಪ ಮನ್ನಿಸೆಯಪ್ಪ

ಓಗೋಡು ಓ ಗಣಪತಿ ಬಪ್ಪಾ
ಓಗೋಡು ಓ ಗಣಪತಿ ಬಪ್ಪಾ
ಓಗೋಡು ನೀ ಗಣಪತಿ ಬಪ್ಪಾ
ಓಗೋಡು ನೀ ಗಣಪತಿ ಬಪ್ಪಾ

ಕಡುಬಿಗೆ ತುಪ್ಪ ಹಾಕಿದೆನಪ್ಪ
ಸ್ವೀಕರಿಸಪ್ಪ ಓ ಬೆನಕಪ್ಪ

Kadubige tuppa song video :

Leave a Comment

Contact Us