Kaarmoda saridu song details
- Song : Kaarmoda saridu
- Singer : Rajesh krishnan
- Lyrics : Ghouse peer
- Movie : Mr & Mrs Ramachari
- Music : V Harikrishna
- Label : D beats
Kaarmoda saridu lyrics in kannada
ಕಾರ್ಮೋಡ ಸರಿದು
ಬೆಳಕು ಸುರಿಧ ಮೇಲೂ
ಈ ಕಣ್ಣಿನಲ್ಲಿ
ಮುಂಚೆ ಇದ್ದ
ಮಿಂಚು ಇಲ್ಲ
ಖುಶೀಲು ಕೂಡ
ಹತಾಶೆ ನಿರಾಳದಲ್ಲೂ
ನಿರಾಶೆ ಇದೆ ತಮಾಷೆ
ಗೆದ್ದೂ ಸೋತಿರುವೆ
ನಾ ಆಳುವ ಮುನ್ನ
ಕಣ್ಣೀರು ಜಾರಿತಲ್ಲ
ಈ ಕಂಬನಿಯನು
ವರೆಸೊ ಕೈ
ಜೊತೆಗೆ ಇಲ್ಲ
ಬಿಸಿಲು ನೆತ್ತಿಯ ಸುಡುವಾಗ
ಬಂಧಿಧೆ ಮಳೆಯು ಶುಭಯೋಗ
ಕಂಡೆನು ಅಕ್ಕರೆ ಮಳೆ ಬಿಲ್ಲ
ಸಿಹಿ ವಿಚಾರ
ಒಂಥರಾ ಆಗಿದೆ ಬಲಿದಾನ
ಒಂಥರಾ ಸಿಕ್ಕಿದೆ ಬಹುಮಾನ
ಮರೆಯುವುಧು ಹೇಗೆ ನಿನ್ನ
ತುಂಭಾ ಕಠೋರ
ಕಣ್ಣೆರೆಡು ತುಂಭಿ ಹೋಗಿವೆ
ಖುಷಿಗೊಂದು ಒಂದು ದುಃಖಕ್ಕೆ
ನಿಶಬ್ಧದಲ್ಲೂ ಗಲಾಟೆ
ನಿಗೂಢವಾದ ತರಾಟೆ
ಇದೆ ತಮಾಷೆ
ಗೆದ್ದೂ ಸೋತಿರುವೆ
ಕಾರ್ಮೋಡ ಸರಿದು
ಬೆಳಕು ಸುರಿಧ ಮೇಲೂ
ಈ ಕಣ್ಣಿನಲ್ಲಿ
ಮುಂಚೆ ಇದ್ದ
ಮಿಂಚು ಇಲ್ಲ
ಅನುರಾಗದ ಶೋಧನೆಯೊಂದು
ಬದುಕೆನ್ನುವ ಬೋಧನೆಯಿಂದು
ಕಾಲ ನಿನ್ನ ಕೈ ಗಡಿಯಾರ
ಎಂಥಾ ವಿಚಿತ್ರ
ಒಂಥರಾ ಹತ್ತಿಯ ಗುಣ ನಿಂದು
ಒಂಥರಾ ಕತ್ತಿಯ ಛಲ ನಂದು
ಇರಿಸು ಮುರಿಸು ಸಹಜನೇ
ಯಥಾ ಪ್ರಕಾರ
ಹೀಗೆ ಬಂದು ಹಾಗೆ ಹೋಗುವ
ಮಂಜಾದೆ ನೀನು ನನಗೆ
ವಿನೋದದಲ್ಲೂ
ಅಭಾವ ವಿಭಿನ್ನವಾದ
ಪ್ರಭಾವ ಇದೇ ತಮಾಷೆ
ಪಡೆದೂ ಕಳೆದಿರುವೆ
ಕಾರ್ಮೋಡ ಸರಿದು
ಬೆಳಕು ಸುರಿಧ ಮೇಲೂ
ಈ ಕಣ್ಣಿನಲ್ಲಿ
ಮುಂಚೆ ಇದ್ದ
ಮಿಂಚು ಇಲ್ಲ