Jotheyali jothe jotheyali song details
- Song : Jotheyali jothe jotheyali
- Singer : S P Balasubhramanya , S Janaki
- Lyrics : Chi Udayashankar
- Movie : Geetha
- Music : ilayaraja
Jotheyali jothe jotheyali lyrics in Kannada
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
ಓ….ಎಂತ ಮಾತಾಡಿದೆ ಇಂದು ನೀ
ಎಂತ ಮಾತಾಡಿದೆ, ನನ್ನ ಮನಸಿನ ಭಾವನೆ ನೀನೆ ಹೇಳಿದೆ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಪ್ರೀತಿಯೆಂದರೇನು ಎಂದು ಈಗ ಅರಿತೆನು
ಪ್ರೀತಿಯೆಂದರೇನು ಎಂದು ಈಗ ಅರಿತೆನು
ಸವಿನುಡಿಯಲಿ ತನು ಅರಳಿತು ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ ಕರಗಿ ಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ…
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ
ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ
ಹಾರಾಡುವ ಅರಗಿಳಿಗಳ ಮಾತಾಡಿಸಿ
ಮುದ್ದಾಡುವ
ಕಾಮನ ಬಿಲ್ಲೇರುವ ಜಾರುತ ನಾವಾಡುವ
ಹಗಲು ಇರುಳು ಒಂದಾಗಿ ಹಾಡುವ…
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
ಓ….ಎಂತ ಮಾತಾಡಿದೆ ಇಂದು ನೀ
ಎಂತ ಮಾತಾಡಿದೆ, ನನ್ನ ಮನಸಿನ ಭಾವನೆ ನೀನೆ ಹೇಳಿದೆ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು