Hrudayada paadu lyrics ( ಕನ್ನಡ ) – Avanalli ivalilli

Hrudayada paadu song details

  • Song : Hrudayada paadu
  • Singer : Vasuki Vaibhav
  • Lyrics : Ghouse peer
  • Movie : Avanalli ivalilli
  • Label : Anand audio

Hrudayada paadu lyrics in Kannada

ಹೃದಯದ ಪಾಡು ಹೃದಯವೇ ನೋಡು ಲಿರಿಕ್ಸ್

ಹೃದಯದ ಪಾಡು ಹೃದಯವೇ ನೋಡು
ಸನಿಹಕೆ ಬರಲೂ ಅನುಮತಿ ನೀಡು
ಪರವಶ ಮನ ಹೊಸಬೆಳಕಿನ
ಕನಸು ಕಾಣುತ
ಇಡೀ ಬದುಕಿದು ಹಿಡಿ ಒಲವಿಗೆ
ಸೀಮಿತ

ಕ್ಷಣ ಪ್ರತಿಕ್ಷಣ
ತವಕದ ಗುಣ ಎಂತ ಅಧ್ಭುತ
ಕಣ ಕಣದಲ್ಲೂ ನಿನದೆ ಸೆಳೆತ

ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರಿನಲ್ಲೂ
ನಿನ್ನ ಹೆಸರ ಜಪಿಸೊ ಹಾಡು

ಅರಳೊ ಮುಂಜಾನೆಯ ಮೊದಲ ಕಿರಣ
ನಿನಗೇ ಸರಿದೂಗುವ ಹೋಲಿಕೆ
ಸಂಜೆ ಮುಸ್ಸಂಜೆಗೆ ಬಣ್ಣದ ಸಾಲ
ಕೊಡುವ ಗುಣವಂತಿಕೆ ಏತಕೆ
ಈ ಒಲವಿದು ಹೀಗೇಕೆ

ಕನಸಿನ ಹೊಳೆ ಗುಂಗಿನ ಮಳೆ
ಪ್ರಾಣ ಹಿಂಡಿದೆ
ನಿನ್ನ ನೆನೆಯುತ ಕೆಲಸವೆ ದಿನ ಸಾಗಿದೆ
ಕನವರಿಕೆಗೆ ಮನವರಿಕೆಯ
ಮಾಡಲಾಗಿದೆ
ನಮಿಸುತ ಮನ ದೊಳಿದು ಹೋಗಿದೆ

ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರಿನಲ್ಲೂ
ನಿನ್ನ ಹೆಸರ ಜಪಿಸೊ ಹಾಡು

ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರಿನಲ್ಲೂ
ನಿನ್ನ ಹೆಸರ ಜಪಿಸೊ ಹಾಡು …..

Hrudayada paadu song video :

Manase karagada lokave lyrics

3 thoughts on “Hrudayada paadu lyrics ( ಕನ್ನಡ ) – Avanalli ivalilli”

Leave a Comment

Contact Us