Howda lyrics ( ಕನ್ನಡ ) – Rahul dit-o – Super cine lyrics

 Howda lyrics – Rahul dito


Howda song details – Rahul dit-o

  • Song : Howda 
  • Singer : Rahul dit-o
  • Lyrics : Rahul dit-o
Howda song lyrics in Kannada 
   Rahul dit-o

ಬೆಂಗಳೂರು ಸೇಫ್ ಅಲ್ವಂತೆ ಹೌದ? 
ಬೆಂಗಳೂರು ಸೇಫ್ ಅಲ್ವಂತೆ ಹೌದ? 
ನಮ್ಮೂರು ಕ್ರೈಂ ಸಿಟಿ ಅಂತೆ ಹೌದ? 
ನಮ್ಮೂರು ಕ್ರೈಂ ಸಿಟಿ ಅಂತೆ ಹೌದ? 

ಹುಡುಗೀರಿಗೆಲ್ಲಾ ಬೆಲೆ ಇಲ್ವಂತೆ ಹೌದ? 
ಹುಡುಗೀರಿಗೆಲ್ಲಾ ಬೆಲೆ ಇಲ್ವಂತೆ ಹೌದ? 
ಹಂಗ್ ಅಂತಿರೋರ್ ನಮ್ಮೋರ್ ಅಲ್ವಂತೆ ಹೌದ? 
ಹಂಗ್ ಅಂತಿರೋರ್ ನಮ್ಮೋರ್ ಅಲ್ವಂತೆ ಹೌದ? 

ಹೌದು! ಅದೆಲ್ಲೆಲ್ಲಿಂದನೋ ಇಲ್ ಬರ್ತಾರೆ
ವಾಪಾಸ್ ಊರಿಗೆ ಹೋಗ್ದೆ ಇಲ್ಲೇ ಇರ್ತಾರೆ 
ಊರ್ ಉದ್ದಾರ ಮಾಡುತಿರೋದ್ ನಾವೇ ಅಂತಾರೆ
ಮಾಡಬಾರದೆಲ್ಲ ಮಾಡುತಿರೋದ್ ಇಂತೋರೆ

ಹುಷಾರು ಹುಡ್ಗೀರು ಓಡಾಡುವಾಗ ರಾತ್ರಿ ಹೊತ್ತಲಿ
ಹುಚ್ಚಾಗಿ ಮೈಮೇಲೆ ಬೀಳುತಾರೆ ಕುಡಿದ ಮತ್ತಲ್ಲಿ
ಯಾವುದಕ್ಕೂ ಸೇಫ್ಟಿಗೆ ಅಂತ ಇಟ್ಕೊಂಡಿರಿ ಚಾಕು ಬ್ಯಾಗಲಿ
ಯಾರಾದ್ರು ಹಿಂಸೆ ಕೊಟ್ರೆ ಚುಚ್ಚೆ ಬಿಡ್ರಿ ಆಗಿದ್ ಆಗಲಿ

ಕಂಡೋವ್ರ ಹೆಣ್ಣು ಮಕ್ಕಳನ್ನು ಎಳೆದಾಡ್ತರೆ ಬಿಟ್ಟು ನಾಚಿಕೆ 
ಇಂತೋರ್ನ ಒದ್ ಓಡಿಸಬೇಕು ವಗದು ಊರಿಂದ್ ಆಚೆಗೆ
ಕೆಲವ ಕಿತ್ತೋದ್ ನನ್ ಮಕ್ಳು ಮಾಡೋ ಹಲ್ಕ ಕೆಲಸಕ್ಕೆ 
ಗುರಿ ಮಾಡಬೇಡಿ ಬೆಂಗಳೂರನ್ನ ನಿಮ್ಮ ಸ್ವಾರ್ಥಕ್ಕೆ 

ನೋಡ್ರಪ್ಪ ಸೇಫ್ಟಿ ಇಲ್ಲ ಅಂದ್ರೆ ನಿಮಗೆ ಬೆಂಗಳೂರಲ್ಲಿ 
ದಯವಿಟ್ಟು ಕಲ್ಚಕೊಳ್ರಿ ದೇವರು ನಿಮಗೆ ಒಳ್ಳೇದ್ ಮಾಡಲಿ
ಅದನ್ನ ಬಿಟ್ಟು ಶೋಕಿ ಹೊಡೆಯೋದಲ್ಲ ಸಿಕ್ಕ ಸಿಕ್ಕಲಿ ನಿಮ್ಮಂತೋವ್ರ ಕಟ್ಟಾಕಿ ಹೊಡಿಯಬೇಕು ನಾಲ್ಕು ದಿಕ್ಕಲಿ

ಈ ವಿಷಯ ಊರು ಕೇರಿಗೆ ಸಂಬಂಧ ಪಟ್ಟಿದಲ್ಲ
ಮನುಷ್ಯ ಮೃಗವಾಗುತ್ತಿರೋದ್ರಲ್ಲಿ ಡೌಟೆ ಇಲ್ಲ
ನಾವೆಷ್ಟೇ ಅರ್ಚಾಡುದ್ರು ಇವ್ರಿಗ್ ಅರ್ಥ ಆಗೋದಿಲ್ಲ
ಇನ್ನೆಷ್ಟೇ ಯುಗದಲ್ಲಾದ್ರು ಜನರು ಬದಲಾಗೋದಿಲ್ಲ

ಬೆಂಗಳೂರು ಸೇಫ್ ಅಲ್ವಂತೆ ಹೌದ? 

ಬೆಂಗಳೂರು ಸೇಫ್ ಅಲ್ವಂತೆ ಹೌದ? 
ಬೆಂಗಳೂರು ಸೇಫ್ ಅಲ್ವಂತೆ ಹೌದ? 
ನಮ್ಮೂರು ಕ್ರೀಂ ಸಿಟಿ ಅಂತೆ ಹೌದಾ? 
ನಮ್ಮೂರು ಕ್ರೈಂ ಸಿಟಿ ಅಂತೆ ಹೌದ? 

ಹುಡುಗೀರಿಗೆಲ್ಲಾ ಬೆಲೆ ಇಲ್ವಂತೆ ಹೌದ? 
ಹುಡುಗೀರಿಗೆಲ್ಲ ಬೆಲೆ ಇಲ್ವಂತೆ ಹೌದ? 
ಹಂಗ್ ಅಂತಿರೋರ್ ನಮ್ಮೂರ್ ಅಲ್ವಂತೆ ಹೌದ? 
ಹಂಗ್ ಅಂತಿರೋರ್ ನಮ್ಮೋರ್ ಅಲ್ವಂತೆ ಹೌದ?

Howda song lyrics video : 

Leave a Comment

Contact Us