Hoovondu beku ballige lyrics ( ಕನ್ನಡ ) – Pavana ganga

Hoovondu beku ballige song details

  • Song : Hoovondu beku ballige
  • Singer : S P Balasubhramanya , S Janaki
  • Lyrics : Chi Udayashankar
  • Movie : Pavana Ganga
  • Music : Rajan Nagendra

Hoovondu beku ballige lyrics in Kannada

ಹೂವೊಂದು ಬೇಕು ಬಳ್ಳಿಗೆ ಸಾಂಗ್ ಲಿರಿಕ್ಸ್

ಹೂವೊಂದು ಬೇಕು ಬಳ್ಳಿಗೆ
ಮಗುವೊಂದು ಬೇಕು ಹೆಣ್ಣಿಗೆ
ಹೂವೊಂದು ಬೇಕು ಬಳ್ಳಿಗೆ
ಮಗುವೊಂದು ಬೇಕು ಹೆಣ್ಣಿಗೆ
ಕಂದನ ಸಂತೋಷವೆ ತಾಯಿಯ ಸೌಭಾಗ್ಯವು
ಬಾಳಿನ ಆನಂದವು

ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ

ಬಿಸಿಲಿಗೆ ನೆರಳಿನಂತೆ
ಇರುಳಿಗೆ ಬೆಳಕಿನಂತೆ
ಬಾಳಿಗೆ ಕಣ್ಗಳಂತೆ
ಮಗುವಿನ ಪ್ರೀತಿಯಂತೆ ಆ ಆ..

ಕಂದನ ತೊದಲು ನುಡಿ
ಜೇನಿನ ಹನಿಗಳಂತೆ
ಕೋಪದಿ ಅಳುವಾಗ
ಜೋಗುಳ ಹಾಡಿದಂತೆ
ಸರಸವೆ ದಿನ ಅನುದಿನ ಹೊಸತನ
ಹೊಸ ತನ ಹೊಸ ತನ

ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ

ಒಣಗಿದ ದಂಡೆಯಲ್ಲಿ ಹಸುರೆಲೆ ಮೂಡುವುದೆ
ಸೊರಗಿದ ಹೃದಯದಲ್ಲಿ ಸಂತಸ ಕಾಣುವುದೆ
ಮೂಡಿದ ಬಯಕೆಗಳು ಮುಗಿಯಲು ಕನಸಿನಲಿ
ಆಸೆಯು ಚಿಗುರುವುದೆ ಹರುಷವು ಉಳಿಯುವುದೆ
ಬಾಳಲಿದೆ ಮನ ಅನುದಿನ ಅನುಕ್ಷಣ ಅನುಕ್ಷಣ ಅನುಕ್ಷಣ

ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ
ಕಂದನ ಸಂತೋಷವೆ ತಾಯಿಯ ಸೌಭಾಗ್ಯವು
ಬಾಳಿನ ಆನಂದವು

Hoovondu beku ballige song video :

Leave a Comment

Contact Us