Hesaru poorthi helade lyrics ( ಕನ್ನಡ ) – Paramaathma

Hesaru poorthi helade song details

  • Song : Hesaru poorthi helade
  • Singer : Vani Harikrishna
  • Lyrics : Yogaraj bhat
  • Movie : Paramaathma
  • Music : V Harikrishna

Hesaru poorthi helade lyrics in Kannada

ಹೆಸರು ಪೂರ್ತಿ ಹೇಳದೇ, ತುಟಿಯ ಕಚ್ಚಿಕೊಳ್ಳಲೇ
ಹರೆಯ ಏನೋ ಹೇಳಿದೆ, ಹಣೆಯ ಚಚ್ಚಿಕೊಳ್ಳಲೇ
ಮನಸು ತುಂಬಾ ಮಾಗಿದೆ, ಕೊಟ್ಟುಬಿಡಲೇ
ನಗುತಿದೆ ನದಿ ಇದು ಯಾಕೆ, ನೋಡುತ ನನ್ನನ್ನು
ಹೃದಯವ ಹೆದರಲೇಬೇಕೆ, ಬಯಸಲು ನಿನ್ನನ್ನು

ಹೆಸರು ಪೂರ್ತಿ ಹೇಳದೇ, ತುಟಿಯ ಕಚ್ಚಿಕೊಳ್ಳಲೇ
ಹರೆಯ ಏನೋ ಹೇಳಿದೆ, ಹಣೆಯ ಚಚ್ಚಿಕೊಳ್ಳಲೇ
ಮನಸು ತುಂಬಾ ಮಾಗಿದೆ, ಕೊಟ್ಟುಬಿಡಲೇ

ಎಳೆಬಿಸಿಲ ಸಂಕೋಚವು, ನೀ ನಗಲು ಮೈತಾಕಿದೆ
ನನ ಬೆನ್ನು ನಾಚುತಿಹುದು, ನೋಡುತಿರಲು ನೀ… ನನ್ನಕಡೆಗೆ
ಬಯಕೆ ಬಂದು ನಿಂತಿದೆ ಉಗುರು ಕಚ್ಚಿಕೊಳ್ಳಲೇ
ಬೇರೆ ಏನೋ ಕೇಳದೇ ತುಂಬಾ, ಹಚ್ಚಿಕೊಳ್ಳಲೇ
ಹೇಳದಂತಹ ಮಾತಿದೆ, ಮುಚ್ಚಿ ಇಡಲೇ

ನಿನ ತುಂಟ ಕಣ್ಣಲ್ಲಿದೆ, ಮಡಚಿಟ್ಟ ಆಕಾಶವು
ಬಿಳಿ ಹೂವಿನ ಮೌನವು, ನನ್ನೆದೆಯಲಿ ನಾ… ಏನೆನ್ನಲಿ
ತುಂಬಾ ಮುದ್ದು ಬಂದಿದೆ, ಒಮ್ಮೆ ದೃಷ್ಟಿತೆಗೆಯಲೇ
ನನಗೆ ಬುದ್ಧಿ ಎಲ್ಲಿದೆ ಒಮ್ಮೆ, ಕಚ್ಚಿನೂಡಲೇ
ನಿನ್ನ ತೊಳು ನನ್ನದೇ, ಇದ್ದುಬಿಡಲೇ

Hesaru poorthi helade song video :

Leave a Comment

Contact Us