Gutuku namma baalu lyrics ( ಕನ್ನಡ ) – Vijay Prakash – All ok

Gutuku namma baalu song details

  • Song : Gutuku namma baalu
  • Singer : Vijay Prakash , All ok
  • Lyrics : Kumar Datt
  • Music : Lovv Pran Mehta

Gutuku namma baalu lyrics in Kannada

ಗುಟುಕು ನಮ್ಮ ಬಾಳು ಲಿರಿಕ್ಸ್

ತೋಂ ತನನ ತೋಂ ತನನ
ತೋಂ ತನನ ತೋಂ ತನನ

ಗುಟುಕು ನಮ್ಮ ಬಾಳು
ಗಳಿಗೆಗೊಂದು ಗೋಳು
ತಿರುಗೋ ಭೂಮಿಯಲ್ಲಿ
ತಿರುವು ನೂರಿದೆ
ಪಾಪದ ಬಡ್ಡಿ
ಪುಣ್ಯದ ಅಸಲು
ಹಣೆಯ ಪುಸ್ತಕದಲ್ಲಿ
ಬುಡುಗಾಸು ಬಿಡದೆ
ಲೆಕ್ಕವ ಇಡುತ
ಕುಳಿತಾನೆ ಒಬ್ಬ ಮ್ಯಾಲಿ
ಪಾಪದ ಬಡ್ಡಿ
ಪುಣ್ಯದ ಅಸಲು
ಹಣೆಯ ಪುಸ್ತಕದಲ್ಲಿ
ಬುಡುಗಾಸು ಬಿಡದೆ
ಲೆಕ್ಕವ ಇಡುತ
ಕುಳಿತಾನೆ ಒಬ್ಬ ಮ್ಯಾಲಿ

ಗುಟುಕು ನಮ್ಮ ಬಾಳು
ಪಾಪ ಮಾಡಿ ಯಾತ್ರೆ ಮಾಡು
ಪುಣ್ಯ ಬರ್ಲಿ ಅಂತ
ಶಿವನುಕೂಡ ನಿಂಗೆ ಹೆದರಿ
ಸುಡುಗಾಡಿನಲ್ಲಿ ಕುಂತ
ಬಂದು ಹೋಗೋ ಮೂರು ದಿನದಲ್ಲಿ
ಮೂರು ಬಿಟ್ರೆ ಹೆಂಗೆ….
ಬಂಧು ಕೂಡ ಬೈತಾರೆ ಬಂದು
ಸುಮ್ಮನೆ ಕುಂತರೆ ಹಿಂಗೆ
ಆರು ಮೂರು ಸೈಟು ನಿಂದು
ವಾಸ್ತು ನೋಡೋರ್ಯಾರು
ಯಾರೆ ಸಾಯಲಿ
ಮೂರೆ ದಿನ ಹೆಚ್ಚು ಅತ್ತವರ್ಯಾರು

ಬದುಕೇ ಆಟ ಸೋಲು ಗೆಲುವು
ಎಲ್ಲರಿಗೂ ಸಹಜ…
ಆಟದಲ್ಲಿ ಆಯ್ಕೆಯಾದೆ
ಪುಣ್ಯನಿಂದು ಮನುಜ
ಮನುಜ… ಮನುಜ…

ಕಾಲಕ್ಕೆ ತೋರಿ ಕೈಯ
ನಿಲ್ಲಿಸೊ ತಾಕತ್ತು ಯಾರಿಗೆ
ಕೇಳ್ತೀನಿ ಸಿಗಲಿ ದೇವರು
ಬಂದ್ರೆ ನಮ್ ಊರಿಗೆ
ಆಸೆಗೆ ಇಲ್ಲ ಬೇಲಿ
ನ್ಯಾಯಕ್ಕೆ ಇಲ್ಲ ಕೂಲಿ
ಪಾಪದ public ಜಾಸ್ತಿ
ಬೈಯೋಣ ಯಾರಿಗೆ

ಪಾಪದ ಬಡ್ಡಿ
ಪುಣ್ಯದ ಅಸಲು
ಹಣೆಯ ಪುಸ್ತಕದಲ್ಲಿ
ಬುಡುಗಾಸು ಬಿಡದೆ
ಲೆಕ್ಕವ ಇಡುತ
ಕುಳಿತಾನೆ ಒಬ್ಬ ಮ್ಯಾಲಿ

ಪಾಪದ ಬಡ್ಡಿ
ಪುಣ್ಯದ ಅಸಲು
ಹಣೆಯ ಪುಸ್ತಕದಲ್ಲಿ
ಬುಡುಗಾಸು ಬಿಡದೆ
ಲೆಕ್ಕವ ಇಡುತ
ಕುಳಿತಾನೆ ಒಬ್ಬ ಮ್ಯಾಲಿ

ಗುಟುಕು ನಮ್ಮ ಬಾಳು ಬಾಳು
ಹೆಂಡ್ತಿ ಮಕ್ಕಳು ಹಾಯಾಗಿರಲಿ
ದುಡಿದು ದುಡಿದು ಸಾಯಿ
ದುಡ್ಡಿಗಿಂತ ದೊಡ್ಡವರ್ಯಾರು
ದುಡ್ಡೇ ತಂದೆ ತಾಯಿ
ನೀನು ನೀನು ಸತ್ರು ಸ್ವರ್ಗ ಸೇರೋ ಆಸೆ
ಸಾಯಲಿಲ್ಲ ಭೂಮಿಯಲ್ಲೇ ಸ್ವರ್ಗ ಉಂಟು
ನೀನು ಹುಡುಕೇ ಇಲ್ಲ
ಜೀವನ ಒಂದು ಮಂಗನಾಟ
ಮೇಲೆ ಕೆಳಗೆ ಜಿಗಿತ
ಹೆಣ್ಣು ಗಂಡು ಸೇರಿಕೊಂಡ್ರೆ
ಅದುವೇ ಕರಡಿ ಕುಣಿತ

ದೇವರು ಕೊಟ್ಟ ಬಾಡಿಗೆ ಜೀವನ
ಬೇಕ ಬಿಟ್ಟಿ ಅಲ್ಲ…
ತಗ್ಗಿ ಬಗ್ಗಿ ಬಾಳೂ ಮಗನ
ಬಾಡಿಗೆ ಕೊಟ್ಟಿಲ್ಲ
ಕಾಸಿದ್ರೆ ನೀನೆ ಹೀರೋ
ಇರದಿದ್ರೆ ಸೈಡಿಗೆ ಬಾರೊ
ಬದುಕೊಂದು ಬಣ್ಣದ ಆಟ
ಪರದೆ ಬೀಳೋ ತನಕ
ಸತ್ಯಕ್ಕೆ ನೋ ಗ್ಯಾರಂಟಿ
ಸುಳ್ಳಿಗೆ ಫುಲ್ ವಾರಂಟಿ
ಜೀವನಾನೆ ಕಳ್ಳರ ಸಂತೆ
ತಂದು ಕೀಳೊತನಕ

ಪಾಪದ ಬಡ್ಡಿ
ಪುಣ್ಯದ ಅಸಲು
ಹಣೆಯ ಪುಸ್ತಕದಲ್ಲಿ
ಬುಡುಗಾಸು ಬಿಡದೆ
ಲೆಕ್ಕವ ಇಡುತ
ಕುಳಿತಾನೆ ಒಬ್ಬ ಮ್ಯಾಲಿ
ಪಾಪದ ಬಡ್ಡಿ
ಪುಣ್ಯದ ಅಸಲು
ಹಣೆಯ ಪುಸ್ತಕದಲ್ಲಿ
ಬುಡುಗಾಸು ಬಿಡದೆ
ಲೆಕ್ಕವ ಇಡುತ
ಕುಳಿತಾನೆ ಒಬ್ಬ ಮ್ಯಾಲಿ

ಗುಟುಕು ನಮ್ಮ ಬಾಳು
ಬಾಳು……..

Gutuku namma baalu song video :

Leave a Comment

Contact Us