Good morning lyics ( ಕನ್ನಡ ) – All ok – super cine lyrics

Good morning – All ok Lyrics

Singer All ok

About the song

▪ Song : Good morning
▪ Singer : All ok
▪ Lyrics : All ok
▪ Music : All ok

Good morning lyics in Kannada..

ಗುಡ್ ವೈಬ್ಸ್ ಒಳಗೆಳೆಯುತಾ
ಬ್ಯಾಡ್ ವೈಬ್ಸ್ ಹೊರಗೂದುತಾ
ಓಂ ಅಂತ ಕಣ್ ಮುಚ್ಚಿಕೊಂಡು
ನಿನ್ನ ಧ್ಯಾನ ಮಾಡ್ವೆ ತಲೆದೂಗುತಾ
ಒಳ್ಳೆ ತನಕೆಂದು ಸ್ವಾಗತ
ಕೆಟ್ಟ ತನವಾಗ್ಲಿ ಭೂಗತ
ದೇವನೂಬ್ಬ ಒಳಗಿರುವನೆಂದು
ನೀ ಬಾಳ್ವೆ ನಡೆಸಿದೋಳ್ ಅದ್ಭುತ
ಸರಿ ಕೇಳ್ ಜಗದಲೀ ಜಿಗಿದಬ್ಬರಿಸಿ
ದಾವಸ ಪೊಗರಿದೊಳ್ ಕಮರು ಕಬ್ಬರವೇ
ದಿನದಲೀ ಒಲವನೂ ಇರಿಸಿ
ದೈವ ನೇತ್ರನನ್ ನೆಚ್ಚಿ ನೆನೆ ಮನವೇ
ನಿಚ್ಚ ಮನದಿ ಸರಿ ದಾರಿ ತೋರು ನೀ
ಪ್ರಬಲ ಮುಂದೆ ತಲೆ ಎತ್ತುವೆ
ಸ್ವಚ್ಛ ಗುಣವ ದಯಪಾಲಿಸೆನಗೆ ನಾ
ಪ್ರೀತಿ ಗಾಗಿ ತಲೆಬಾಗುವೇ
ಹೆಜ್ಜೆ ಹೆಜ್ಜೆಗೂ ಕಾಲೆಳೆವರ್ ಇಲ್ಲಿ
ಮಿತ್ರ ತೆಗಳಿದೋಳ್ ಬೆಳೆಯುವುದೆಲ್ಲಿ
ಜಾತಿ ಭೇಧವ ಮಾಡುವ ಮನುಜರಾ
ಮಧ್ಯೆ ಇದ್ರೆ ಸಹಬಾಳ್ವೆಯು ಎಲ್ಲಿ ?
ಹೊಸ ದಾರಿಯನ್ನು ನೀ ತೋರಿಸು
ಮನ ಮಂದಿರವನ್ನು ರಕ್ಷಿಸು
ನನ್ನ ಅಹಂ ಅನ್ನು
ನೀ ಕ್ಷೀಣಿಸಿ ಮನದಳ್
ಸೂರ್ಯೋದಯವನು ತೋರಿಸು

ಏಸುಕಾಯಂಗಳ ಕಳೆದು
ಎಂಬತ್ನಾಲ್ಕು ಲಕ್ಷ ಜೀವ
ರಾಶಿಯನ್ನು ದಾಟಿ ಬಂದ
ಈ ಶರೀರ ..

ಏಸುಕಾಯಂಗಳ ಕಳೆದು
ಎಂಬತ್ನಾಲ್ಕು ಲಕ್ಷ ಜೀವ
ರಾಶಿಯನ್ನು ದಾಟಿ ಬಂದ
ಈ ಶರೀರ ..

ತಾನಲ್ಲಾ ತನ್ನದಲ್ಲಾ, ತಾನಲ್ಲಾ ತನ್ನದಲ್ಲಾ
ಆಸೆ ತರವಲ್ಲ , ಮುಂದೆ ಬಾಹೋದಲ್ಲಾ
ದಾಸನಾಗು ವಿಷೇಶನಾಗು..

ನೊಂದಿದ್ದೆ ಯಾರು ಇಲ್ಲ ಅಂತ
ಈಗ ಒಂಟಿತನದ ಬೆಲೆ ಗೊತ್ತು
ನಂಬಿಕೆ ತುಂಬಾ ಇಡ್ತಿದ್ದೆ
ಈಗ ಬೆನ್ನು ತುಂಬಾ ಬರೀ ಕುರುಪು
ಜೀವನ ಎಷ್ಟೇ ಪಾಠ ಕಲಿಸಿದರು
ಕಡಿಮೆ ಆಗದೀ ಹುರುಪು
ನಿಜ ಪ್ರೀತಿ ಎಲ್ಲು ಸಿಗೊದಿಲ್ಲಾ
ನಿನ್ನ ತಂದೆ ತಾಯಿಯ ಹೊರೆತು
ಯಾರೊ ಇಲ್ಲಿ ಬಡವ , ಯಾರೋ ಇಲ್ಲಿ ಶ್ರೀಮಂಥ.
ನಿನ್ನ ಕರ್ಮದ ಫಲಾನು ಫಲವನು
ಹೇಳುವುದು ನೀನು ಏನಂಥ
ಉತ್ತಮ ಮಧ್ಯಮ ಅಧಮ
ಎಲ್ಲ ಒಂದೇ ಇಲ್ಲಿ ಇರೋತಂಕ
ನಿನ್ನ ನಂಬಿಕೆ ಒಂದೇ , ಕಾಯೋದು ಕೊನೆತಂಕ..

ನಗುವರಾ? ನೋಡ್ ನಗಲಿ
ಕಾಲ್ ಎಳೆವರಾ? ಕಾಲ್ ಎಳಿಲೀ
ನೀ ನಗು ನಗುತಾ ಮುಂದೆ ನಡಿತಿರು
ನಿನ್ನ ಕೆಲಸ ಮಾತ್ರ ಮಾತಾಡ್ಲೀ
ಸೋಲುತೀಯಾ ಅಂದೋರಿಗೆಲ್ಲಾ
ನೀ ಗೆದ್ದು ತೋರಿಸು ಬದಲು
ದೊಡ್ಡ ಸಾಧನೆಗೆ ಚಿಕ್ಕ ಅಂಬೆಗಾಲಿಂದ
ಶುರು ಮಾಡು ಮೊದಲು

ಏಸುಕಾಯಂಗಳ ಕಳೆದು
ಎಂಬತ್ನಾಲ್ಕು ಲಕ್ಷ ಜೀವ
ರಾಶಿಯನ್ನು ದಾಟಿ ಬಂದ
ಈ ಶರೀರ ..

ಏಸುಕಾಯಂಗಳ ಕಳೆದು
ಎಂಬತ್ನಾಲ್ಕು ಲಕ್ಷ ಜೀವ
ರಾಶಿಯನ್ನು ದಾಟಿ ಬಂದ
ಈ ಶರೀರ ..

ತಾನಲ್ಲಾ ತನ್ನದಲ್ಲಾ, ತಾನಲ್ಲಾ ತನ್ನದಲ್ಲಾ
ಆಸೆ ತರವಲ್ಲ , ಮುಂದೆ ಬಾಹೋದಲ್ಲಾ
ದಾಸನಾಗು ವಿಷೇಶನಾಗು..

Leave a Comment

Contact Us