Ello ello adu ello lyrics – Kanasugara

Ello ello adu ello song details
-
Song : Ello ello adu ello
-
Singer : S P Balasubhramanya
-
Lyrics : K Kalyan
-
Movie : Kanasugara
-
Label : Anand audio
Ello ello adu ello lyrics in Kannada
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಈ ಕಣ್ಗಳ ಗೂಡಿನಲಿ ಹೊಸ ರಾಗದ ಚಿಲಿಪಿಲಿಯೋ
ಈ ಉಸಿರಿನ ಹಾಡಿನಲಿ ಅನುರಾಗದ ಕಚಗುಳಿಯೋ
ನೆನಪೇ ನನ್ನ ಮೈ ಪುಳಕ ನೆನಪೆ ನನ್ನ ಮೈ ಜಳಕ
ನೆನಪೇ ನನ್ನ ಗನತನಕ ನೆನಪು ಒಂದೆ ಕೊನೆತನಕ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಅಮ್ಮ ಮುತ್ತಿಟ್ಟ ಕೈ ತುತ್ತಿನ ಸವಿ ನೆನಪು
ಗುಮ್ಮಾ ಬಂದಾಗ ಮಡಿಲೇರಿದ ಸವಿ ನೆನಪು
ಮರಳಿನ ಗೂಡಿಗೆ ಮಳೆ ಸುರಿದಾಗ ಅತ್ತಂತ ನೆನಪು
ಸೀರೆಯುಟ್ಟು ಜಾರಿ ಬಿದ್ದ ನೆನಪೇ ಸಂಭ್ರಮ
ಕಾಗದದ ದೋಣಿ ಕಟ್ಟೋ ನೆನಪೇ ಅನುಪಮ
ಯಾರೋ ಬರೆದೋರು ನನ್ನೆದೆಯ ಲಾಲಿ
ಕೇಳೋ ಕ್ಷಣವೆಲ್ಲಾ ಸವಿ ನೆನೆಪಿನ ರಂಗೋಲಿ
ಓಡೋ railನಲಿ ಪದ ಹಾಡಿದ ಸವಿ ನೆನಪು
ಸುತ್ತೋ ರಾಟೆಯಲಿ ತಲೆ ಸುತ್ತಿದ ಸವಿ ನೆನಪು
ಓದದೇ passಆಗಲು ನವಿಲುಗರಿ ಇಟ್ಟಂತ ನೆನಪು
ಕನಸಿನಲ್ಲಿ ಬೆಚ್ಚಿ ಬಿದ್ದ ನೆನಪೇ ಸಂಭ್ರಮ
ಆಟದಲ್ಲಿ ಸೋತು ಗೆದ್ದ ನೆನಪೇ ಅನುಪಮ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಈ ಕಣ್ಗಳ ಗೂಡಿನಲಿ ಹೊಸ ರಾಗದ ಚಿಲಿಪಿಲಿಯೋ
ಈ ಉಸಿರಿನ ಹಾಡಿನಲಿ ಅನುರಾಗದ ಕಚಗುಳಿಯೋ
ನೆನಪೇ ನನ್ನ ಮೈ ಪುಳಕ ನೆನಪೇ ನನ್ನ ಮೈ ಜಳಕ
ನೆನಪೇ ನನ್ನ ಗನತನಕ ನೆನಪು ಒಂದೆ ಕೊನೆತನಕ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
Ello ello adu ello lyrics video :