Ee vaysalli song details
- Song : Ee vaysalli
- Singer : Vijay Prakash , Shashank sheshagiri , Vyasraj
- Lyrics : Yogaraj bhat
- Music : V Harikrishna
- Movie : Panchatantra
Ee vaysalli lyrics in Kannada
ಯವ್ವನ ಎಂಬುದು ಭಗವಂತನ ಆಫರ್ರು
ಖಾಲಿ ಕುಂತ್ಕಂ ಡವ್ನೆ ನಂಬರ್ ವನ್ ಲೋಫರ್ರು
ಈ ವಯ್ಸಲ್ಲಿ ಏನ್ ಮಾಡೋದು ಗೊತ್ತಾಗೋ ಇಲ್ಲ
ನಿಂತ್ಕೊಂಡ್ರು ಕುಂತುಕೊಂಡ್ರು ಸರಿ ಹೋಗೋದಿಲ್ಲ
ಗಡಿಯಾರದ ಮುಳ್ಳಿಗೆ ಮರ್ಯಾದೆ ಇಲ್ಲ
ಇಪ್ಪತ್ತ ನಾಕು ಗಂಟೆ ಸಾಕಗೋದಿಲ್ಲ
ಈ ಭೂಮಿ ಫುಟ್‌ಬಾಲ್ ಎತ್ಲಾಗಿ ಓದಿಯೋದು
ಪುಟ್ಗೋಸಿ ಸೂರ್ಯನ್ನ ಯಾವ್ ಕೈಲಿ ಹಿಡಿಯೋದು
ಒಂದೇ ಕಣ್ಣಿನಲ್ಲಿ ಯಾರ್ ಯಾರ್ನ ನೋಡೋದು
ಒಂದೇ ಬಾಯಿಯಲ್ಲಿ ಎಷ್ಟಂತ ಹಾಡೋದು
ಒಟ್ನಲ್ಲಿ ಫೈನಲೂ ಒಂದಂತೂ ಹೇಳ್ಬಹುದು
ಮಿಸ್ಟೇಕು ನಮ್ದಲ್ಲ ನಮ್ಮ ಜವಾನಿದು
ಈ ವಯ್ಸಲ್ಲಿ ಏನ್ ಮಾಡೋದು ಗೊತ್ತಾಗೋ ಇಲ್ಲ
ನಿಂತ್ಕೊಂಡ್ರು ಕುಂತುಕೊಂಡ್ರು ಸರಿ ಹೋಗೋದಿಲ್ಲ
ಗಡಿಯಾರದ ಮುಳ್ಳಿಗೆ ಮರ್ಯಾದೆ ಇಲ್ಲ
ಇಪ್ಪತ್ತ ನಾಕು ಗಂಟೆ ಸಾಕಗೋದಿಲ್ಲ
ಬೇಜವಾಬ್ದಾರಿನ ಕಲಿಯದೆ ಹೋದರೆ
ಬರೋದಿಲ್ಲ ಜವಾಬ್ದಾರಿ
ತಪ್ಪು ಮಾಡೋದಿದ್ರೆ ತಪ್ಪೇ ಮಾಡಬೇಕು
ಆಮೇಲೆ ಅನ್ಬಹುದು ಸಾರೀ
ಉದ್ದಾರ ಆಗೋಕು ಹಾಳಾಗ್ ಹೋಗೋಕು
ವ್ಯತ್ಯಾಸ ಏನಿಲ್ಲ ಬಾರಿ
ಜಿ ಪಿ ಎಸ್ ಹಿಡ್ಕೊಂಡು ಕಣ್ಮುಚ್ಚಿ ನುಗ್ಗೋಣ
ಸಿಗಲಿ ಸಿಗದೆ ಇರ್ಲಿ ದಾರಿ
ಗೊತ್ತಿಲ್ಲ ಇಲ್ಲಿಂದ ಮುಂದೆಲ್ಲಿ ಹೋಗೋದು
ನಾವು ಯಾವತ್ತಿದ್ರೂ ನಮಗೇನೆ ಸಿಗಬಾರ್ದು
ಡಬ್ಬ ನನ್ಮ ಕ್ಲಂತ ನಮ್ಮನ್ನ ಅನ್ ಬೋದು
ನಾವೇ ಬೈಕೊತಿವಿ ನೀವ್ಯಾರು ಬೈಬಾರ್ದು
ಒಟ್ನಲ್ಲಿ ನಮ್ ಮುಂದೆ ಯಾವನು ಬರ್ಬಾರ್ದು
ಈ ಕೊಬ್ಬು ನಮದಲ್ಲ ನಮ್ಮ ಜವಾನಿದು
ಈ ವಯ್ಸಲ್ಲಿ ಏನ್ ಮಾಡೋದು ಗೊತ್ತಾಗೋ ಇಲ್ಲ
ನಿಂತ್ಕೊಂಡ್ರು ಕುಂತುಕೊಂಡ್ರು ಸರಿ ಹೋಗೋದಿಲ್ಲ
ಗಡಿಯಾರದ ಮುಳ್ಳಿಗೆ ಮರ್ಯಾದೆ ಇಲ್ಲ
ಇಪ್ಪತ್ತ ನಾಕು ಗಂಟೆ ಸಾಕಗೋದಿಲ್ಲ
ಮೂಗು ಒರೆಸೋದಕ್ಕೂ ಗೂಗಲ್ಲು ನೋಡ್ಬಿಟ್ಟು
ಸರ್ವಜ್ಞರಾಗ್ ಬಿಟ್ವಿ ನಾವು
50+ ಆದ್ರೂನೂ ನೀವಿನ್ನು ಕಲಿತಿಲ್ಲ
ಮಾಡೋದೆಂಗೆ ನಂಬರ್ ಸೇವು
ಸೈಕಲ್ ಗ್ಯಾಪ್ ಸಿಕ್ರೆ ಹುಡುಗ ಹುಡುಗಿ ಇಬ್ರೂ
ಮಾಡ್ಲೇ ಬೇಕು ತಾನೇ ಲವ್ವು
ಪ್ರೀತಿ ತಪ್ಪಂತೀರಾ ನೀವೇನ್ ಕಮ್ಮಿ ಇಲ್ಲ
ಜನಸಂಖ್ಯೆ ಬೆಳೆಸಿದ್ದೇ ನೀವು
ಚಿಕ್ ಏಜ್’ಲ್ ಎಲ್ಲರೂ ಬೈಸ್ಕೊಳೋದ್ ಒಳ್ಳೆದು
ಅಂಕಲ್ ಆದ್ಮೇಲೆ ಎಲ್ಲರ್ಗೂ ಬೈಬೋದು
ಬಿಟ್ಟಿ ಸಜೇಶನ್ನು ಎಲ್ಲರೂ ಕೊಡ್ಬೋದು
ಇಲ್ಯಾರ್ಗೂ ಗೊತ್ತಿಲ್ಲ ತಪ್ಯಾವ್ದು ಸರಿಯಾವ್ದು
ಅದಕ್ಕೆ ಏಜನ್ನ ಎಣಿಸೋಕೆ ಹೋಗ್ಬಾರ್ದು
ಈ ಗಾದೆ ನಂದಲ್ಲ ನಮ್ಮ ಜವಾನಿದು
ಈ ವಯ್ಸಲ್ಲಿ ಏನ್ ಮಾಡೋದು ಗೊತ್ತಾಗೋ ಇಲ್ಲ
ನಿಂತ್ಕೊಂಡ್ರು ಕುಂತುಕೊಂಡ್ರು ಸರಿ ಹೋಗೋದಿಲ್ಲ
ಗಡಿಯಾರದ ಮುಳ್ಳಿಗೆ ಮರ್ಯಾದೆ ಇಲ್ಲ
ಇಪ್ಪತ್ತ ನಾಕು ಗಂಟೆ ಸಾಕಗೋದಿಲ್ಲ