Ee sanje yakagide – Sonu nigam Lyrics
Singer | Sonu nigam |
Ee sanje yakagide song details – Gelaya
▪ Song: EE SANJE KAKAGIDE
▪ Singer: SONU NIGAM
▪ Film : GELEYA
▪ Music: MANO MURTHY
▪ Director: HARSHA. A
Ee sanje yakagide song lyrics in Kannada – Gelaya
ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು ಏಕಾಂಗಿಯ ಸಲ್ಲಾಪವು..
ಈ ಮೌನ ಬಿಸಿಯಾಗಿದೆ ಓ…. ಈ ಮೌನ ಬಿಸಿಯಾಗಿದೆ
ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ..
ಈ ನೋವಿಗೆ ಕಿಡಿ ಸೋಕಿಸಿ ಮಜ ನೊಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ ಮೈಯೆಲ್ಲವು ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ..ಈ ಜೀವ ಕಸಿಯಾಗಿದೆ…
ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ..
ನೀನಿಲ್ಲದೆ ಆ ಚಂದಿರಾ ಇ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸುನೀಗಿದೆ
ಆಕಾಶದಿ ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ..ಈ ಗಾಯ ಹಸಿಯಾಗಿದೆ.
ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು ಏಕಾಂಗಿಯ ಸಲ್ಲಾಪವು..
ಈ ಮೌನ ಬಿಸಿಯಾಗಿದೆ ಓ…. ಈ ಮೌನ ಬಿಸಿಯಾಗಿದೆ
ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ..