Ee kannigoo hennigoo song details
- Song : Ee kannigoo hennigoo
- Singer : Dr Rajkumar , Manjula Gururaj
- Lyrics : Hamsalekha
- Movie : Aakasmika
- Music : Hamsalekha
Ee kannigoo hennigoo lyrics in Kannada
ಈ ಕಣ್ಣಿಗೂ ಹೆಣ್ಣಿಗೂ
ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ
ಏನು ಬಂಧವೋ
ನೋಡಲು ಮೋಹಕ
ಕೂಡಲು ಪ್ರೇರಕ
ಏನು ಮಾಯಾವೋ
ಈ ಕಣ್ಣಿಗೂ ಹೆಣ್ಣಿಗೂ
ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ
ಏನು ಬಂಧವೋ
ಮನದ ಒಳದ ತಿಳಿಯ ಜಲದ
ಮೇಲೆ ಮನವೆಸೆದು
ಸಿಗದ ಜಗದ ಸುಖದ ತಳಕೆ
ನನ್ನಾ ಬರಸೆಳೆದು
ಅಳುವ ಮೊಗದ ಒಳಗೆ ತೆರೆದ
ಎದೆಗೆ ಜೊತೆ ಬೆಸೆದು
ಇಹದ ಪರದ ಜಾನುಮಾಂತರದ
ಕಥೆಯ ಪುಟ ತೆರೆದು
ಆಕಸ್ಮಿಕ ಎಂದಳೀ
ಚಲುವ ಬಾರೆ
ಅನಿರೀಕ್ಷಿತ ತಂದಳೀ
ಒಲವ ಬಾಲೆ
ಚಂದದ ಕನ್ಯೆಯೋ,
ದಂತದ ಬೊಂಬೆಯೋ
ಏನು ಮಾಯೆಯೋ
ಈ ಕಣ್ಣಿಗೂ ಹೆಣ್ಣಿಗೂ
ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ
ಏನು ಬಂಧವೋ
ಸರಸಿ ಸರಸಿ ಚೆಲುವಿಗೆ ಅರಸಿ
ಬಂದಳು ನನ್ನರಸಿ
ಕವನ ಕಾವ್ಯ ನಾಟ್ಯ ಗಮಕ
ಕಲೆಗಳ ಸಿಂಗರಿಸೀ
ಕನಸು ಮನಸು ಬದುಕು ಭ್ರಮೆಯ
ನಡುವೆ ಸಂಚರಿಸಿ
ಮೌನದ ಒಡವೆ ಧರಿಸಿ ನಕ್ಕಳು
ಒಲವನು ಸಿಂಪಡಿಸೀ
ಆಕಸ್ಮಿಕ ಆದಳೀ
ಪ್ರೇಮ ಯೋಗ
ಅನಿರೀಕ್ಷಿತ ಅನಿಸಲಿ
ಪ್ರಣಯ ರಾಗ
ಸ್ವರ್ಗಾದಿ ಸ್ಪರ್ಶವು
ಸೌಕ್ಯದಿ ಸಂದ್ಯವು
ಏನು ಮಾಯೆಯೋ
ಈ ಕಣ್ಣಿಗೂ ಹೆಣ್ಣಿಗೂ
ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ
ಏನು ಬಂಧವೋ
ನೋಡಲು ಮೋಹಕ
ಕೂಡಲು ಪ್ರೇರಕ
ಏನು ಮಾಯಾವೋ